ಉರ್ಫಿ ಜಾವೇದ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಇದರಿಂದ ಫ್ಯಾನ್ಸ್ಗೆ ಭಾರಿ ನಿರಾಸೆಯಾಗಿದೆ.
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಬಿಕಿನಿ, ಬಟ್ಟೆ ಕ್ಲಿಪ್, ಚ್ಯುಯಿಂಗ್ ಗಮ್, ಮಕ್ಕಳಾಟಿಕೆ, ನ್ಯೂಸ್ ಪೇಪರ್, ಚಿಪ್ಸ ಪ್ಯಾಕೇಟ್, ಮಲ್ಲಿಗೆ ಹೂವು, ಪರದೆ ರೀತಿಯ ದಿರಿಸು, ಕಿವಿ ಹಣ್ಣಿನ ರೀತಿ, ಪ್ಲ್ಯಾಸ್ಟರ್ ಹೀಗೆ ವಿಭಿನ್ನ ವಿಶೇಷ ರೀತಿಯ ಬಟ್ಟೆಗಳನ್ನು ತೊಟ್ಟು ಟ್ರೋಲ್‌ಗೆ ಒಳಗಾಗುತ್ತಿದ್ದರೂ ಅದಕ್ಕೆ ಅವರು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಬಟ್ಟೆ ಧರಿಸಿದರೆ ತಮಗೆ ಚರ್ಮಕ್ಕೆ ಅಲರ್ಜಿ ಆಗುತ್ತದೆ ಎಂದು ಕಾರಣವನ್ನೂ ಈ ಹಿಂದೆ ನೀಡಿದ್ದರು. ಅವರ ಬಟ್ಟೆ ಎಷ್ಟು ಫೇಮಸ್ ಎಂದರೆ, ಒಂದು ವೇಳೆ ಫುಲ್ ಡ್ರೆಸ್ ಧರಿಸಿದರೂ ಉರ್ಫಿ ಟ್ರೋಲ್ ಆಗುವುದುಂಟು.
ತಮ್ಮ ಫ್ಯಾನ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಬಟ್ಟೆ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ಕಾರಣದಿಂದಾಗಿ ಇನ್ಸ್ಟಾಗ್ರಾಮ್ ಅಕೌಂಟ್ ಸಸ್ಪೆಂಡ್ ಆಗಿದೆ. ಈ ಕುರಿತು ಖುದ್ದು ಉರ್ಫಿ ಹೇಳಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ನಟಿಗೆ ಸಂದೇಶ ಕಳಹಿಸಿದೆಯಂತೆ. ಇದನ್ನು ನಟಿ ಹೇಳಿದ್ದಾರೆ. ನಾವು ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತೇವೆ. ನಿಮ್ಮ ಖಾತೆ ಜನರಿಗೆ ಕಾಣುವುದಿಲ್ಲ. ಈ ಕ್ಷಣ ನೀವು ಖಾತೆ ಬಳಸಲು ಸಾಧ್ಯವಿಲ್ಲ ಎಂದು ಇನ್ಸ್ಟಾಗ್ರಾಮ್ ನಟಿಗೆ ತಿಳಿಸಿದೆ. ಇನ್ಸ್ಟಾಗ್ರಾಮ್ನ ಈ ನಿರ್ಧಾರವನ್ನು 180 ದಿನದಲ್ಲಿ ನೀವು ಪ್ರಶ್ನೆ ಮಾಡಬಹುದು. ಇಲ್ಲವಾದರೆ ನಿಮ್ಮ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಸೂಚಿಸಲಾಗಿದೆ. ಈ ಕುರಿತು ಹೇಳಿಕೊಂಡಿರುವ ನಟಿ, ಆರು ತಿಂಗಳಿನಲ್ಲಿ ಈ ಬಗ್ಗೆ ನಾನು ಪ್ರಶ್ನೆ ಮಾಡದೇ ಹೋದರೆ ನನ್ನ ಇನ್ಸ್ಟಾ ಖಾತೆ ಶಾಶ್ವತ ಬ್ಲಾಕ್ ಆಗುತ್ತದೆ ಎಂದಿದ್ದಾರೆ.
ದುರಂತಗಳ ಸರಮಾಲೆಯಲ್ಲೇ ಮಿಂದೆದ್ದ ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಹುಟ್ಟುಹಬ್ಬಕ್ಕೆ ಹೀಗೊಂದು ಅನೌನ್ಸ್ಮೆಂಟ್!
ಅಂದಹಾಗೆ ಉರ್ಫಿ ಅವರು, ತಮ್ಮ ಬಟ್ಟೆಯಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದು, ಈ ಮೂಲಕವೇ, 4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಗಳಿಸಿದ್ದಾರೆ. ಇವರು ಏನೇ ಡ್ರೆಸ್ ಹಾಕಿದರೂ ಟ್ರೋಲ್ ಮಾಡುತ್ತಲೇ ಈಕೆಯ ಫ್ಯಾನ್ಸ್ ನಟಿಯ ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿದ್ದದಾರೆ. ಇದೀಗ ನಟಿ ಮಾತ್ರವಲ್ಲದೇ ಆಕೆಯ ಫ್ಯಾನ್ಸ್ಗೂ ಸಕತ್ ನಿರಾಸೆಯಾಗಿದೆ. ನಿಮ್ಮನ್ನು ಇನ್ಸ್ಟಾಗ್ರಾಮ್ನಲ್ಲಿ ನೋಡಿ ಕಣ್ಣು ತುಂಬಿಸಿಕೊಳ್ತಿದ್ದೆವು. ಇನ್ನೆಲ್ಲಿ ಈಗ ನಿಮ್ಮನ್ನು ನೋಡುವುದು ಎಂದು ಫ್ಯಾನ್ಸ್ ಪ್ರಶ್ನೆ ಕೇಳ್ತಿದ್ದಾರೆ.
ಈ ಹಿಂದೆ ನಟಿ ತಮಗಾಗಿರುವ ಕಾಸ್ಟಿಂಗ್ ಕೌಚ್ ಕರಾಳ ಅನುಭವವನ್ನು ಹೇಳಿಕೊಂಡಿದ್ದರು. ತಾವು ಮುಂಬೈಗೆ ಬಂದ ಪ್ರಾರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ಬಗ್ಗೆ ಒಟಿಟಿ ಫ್ಲಾಟ್ ಫಾರ್ಮ್‌ನ ಬಿಗ್ ಬಾಸ್‌ನಲ್ಲಿ ಉರ್ಫಿ ಹೇಳಿಕೊಂಡಿದ್ದರು. ಒಬ್ಬ ನಿರ್ದೇಶಕ ಹೇಗೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿದ್ದರು ಎನ್ನುವುದನ್ನು ನಟಿ ಹೇಳಿದ್ದರು. ಉರ್ಫಿ ಅವರ ಮಾತಿನಲ್ಲಿಯೇ ಹೇಳುವುದಾದರೆ: ನಾವು ಇರುವ ಉದ್ಯಮದಲ್ಲಿ ಸಾಕಷ್ಟು ಪರಭಕ್ಷಕರಿದ್ದಾರೆ. ಈ ಧೋರಣೆ ನಮಗಿರಬೇಕು. ಇಲ್ಲವಾದಲ್ಲಿ ಜನ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ನನ್ನ ಬಳಿ ಕೆಲವರು ಹಾಗೆ ನಡೆದುಕೊಂಡಿದ್ದಾರೆ ಎಂದಿದ್ದರು. ಅವರು ಹೇಳಿದ್ದಕ್ಕೆ ಇಲ್ಲ ಎನ್ನುವ ಅನೇಕ ಸಂದರ್ಭಗಳನ್ನು ನಾನೂ ಎದುರಿಸಿದ್ದೇನೆ ಎಂದಿರುವ ನಟಿ, ಆಗ ತಾನೇ ಮುಂಬೈಗೆ ಬಂದ ದಿನಗಳಲ್ಲಿ ಎದುರಿಸಿರುವ ಘಟನೆಯೊಂದನ್ನು ಮೆಲುಕು ಹಾಕಿದ್ದರು.
ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಪೂರ್ಣಿ ದಂಪತಿ!