ನನ್ ಕರ್ಮ, ಯಾವ ಮದ್ವೆಯೂ ಇಲ್ಲ: ಮದುವೆ ಬಗ್ಗೆ ಮಂಗ್ಲಿ ಪ್ರತಿಕ್ರಿಯೆ

By Suvarna News  |  First Published Oct 4, 2023, 12:23 PM IST

ಗಾಯಕಿ ಮಂಗ್ಲಿ ಮಾವನ ಮಗನನ್ನೇ ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿಗೆ ಆಕೆಯೇ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಏನ್ ನಡೀತು?


'ರಾಬರ್ಟ್' ಸಿನಿಮಾದ 'ಕಣ್ಣು ಹೊಡಿಯಾಕ' ಅನ್ನೋ ಸಾಂಗ್ ಸಖತ್ ಹೈಪ್ ಕ್ರಿಯೇಟ್ ಮಾಡ್ತು. ಯೋಗರಾಜ್ ಭಟ್ರ ಸಾಹಿತ್ಯ ಇರೋ ಈ ಹಾಡನ್ನು ಉತ್ತರ ಕರ್ನಾಟಕ ಸ್ಟೈಲ್ ಭಾಷೆಯಲ್ಲಿ ಹೊಸೆಯಲಾಗಿತ್ತು. ಹಾಗಂತ ಈ ಹಾಡನ್ನು ಮಂಗ್ಲಿನೇ ಹಾಡಿದ್ರು ಅಂತೆಲ್ಲ ತಪ್ಪು ಮಾಹಿತಿ ನಾವ್ ಕೊಡಲ್ಲ, ಸಾರಿ. ಈ ಕನ್ನಡ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್ ಅಂತ ನಮ್ಗೂ ಗೊತ್ತು, ನಿಮ್ಗೂ ಗೊತ್ತು. ಆದರೆ ಯಾವಾಗ ಈ ಹಾಡು ತೆಲುಗಿಗೂ ಹೋಯ್ತೋ, ಅಲ್ಲಿ ಮಂಗ್ಲಿ ಅನ್ನೋ ಜನಪದ ಸ್ಟೈಲಿನ ಗಾಯಕಿ ಇದಕ್ಕೆ ದನಿಯಾದ್ರೋ ಆ ಹಾಡು ಒರಿಜಿನಲ್ ಕನ್ನಡವನ್ನೂ ಮೀರಿಸಿ ಸೂಪರ್ ಡೂಪರ್ ಹಿಟ್ ಆಯ್ತು. ಕನ್ನಡದಲ್ಲಿ ಹಾಡಿರೋ ಶ್ರೇಯಾ ಘೋಷಾಲ್ ಅವ್ರ ದನಿಯಲ್ಲಿ ಜನಪದ ಹಾಡಿಗೆ ಬೇಕಾದ ರಾ ನೆಸ್ ಇಲ್ಲ. ಅದನ್ನು ಕನ್ನಡದಲ್ಲೂ ಮಂಗ್ಲಿಯೇ ಹಾಡಿದ್ರೆ ಚೆನ್ನಾಗಿತ್ತು ಅಂತ ತುಂಬಾ ಜನ ಹೇಳಿದ್ರು. ಈ ಹಾಡಿಂದ ಮಂಗ್ಲಿ ಅನ್ನೋ ಗಾಯಕಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಮನೆ ಮಾತಾಗ್ತಾರೆ.

ನಿನ್ನೆಯಿಂದ ಈ ಮಂಗ್ಲಿ ಮದುವೆಯದ್ದೇ ಸುದ್ದಿ. ಮಂಗ್ಲಿ ಮದುವೆ ಆಗ್ತಿದ್ದಾರಂತೆ. ಮಾವನ ಮಗನ ಜೊತೆಗೆ ಸಪ್ತಪದಿ ತುಳೀತಾರಂತೆ ಅಂತ ಎಲ್ಲ ಕಡೆ ಹೈಪ್ ಕ್ರಿಯೇಟ್ ಆಯ್ತು. ಆದ್ರೆ ಈ ಸುದ್ದಿಗೆ ಮಂಗ್ಲಿ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಎಲ್ಲಾ ನನ್ ಕರ್ಮ' ಅಂತ ಸಿಟ್ಟಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ನಡೆದದ್ದು ಏನು. ಮಂಗ್ಲಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆಕೆ ತಮ್ಮ ಹತ್ತಿರದ ಸಂಬಂಧಿ ವರಸೆಯಲ್ಲಿ ಭಾವ ಆಗುವವರ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಈ ಸುದ್ದಿ ಟಾಲಿವುಡ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಚಿನ ಕಂಠದ ಗಾಯಕಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಬಗ್ಗೆ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

ಸೀರಿಯಲ್‌ಗೆ ಗುಡ್‌ ಬೈ ಹೇಳಿ ವೆಬ್‌ ಸೀರೀಸ್‌ನತ್ತ ಜ್ಯೋತಿ ರೈ

ಗಾಯಕಿ ಮಂಗ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದವರು. ಆಕೆಯ ನಿಜವಾದ ಹೆಸರು ಸತ್ಯವತಿ ರಾಥೋಡ್. ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕರ್ನಾಟಿಕ್ ಮ್ಯೂಸಿಕ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ನಂತರ ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದರು. ಸಂಗೀತದಲ್ಲಿ ಆಸಕ್ತಿ ಇದ್ದ ಅವರು ಗಾಯಕಿಯಾದರು. ಜನಪದ ಗಾಯಕಿಯಾಗಿ ಮಂಗ್ಲಿ ಆರಂಭದಲ್ಲಿ ಗುರುತಿಸಿಕೊಂಡರು. ಖಾಸಗಿ ಆಲ್ಬಂಗಳಲ್ಲಿ ಹಾಡಿ ಗಮನ ಸೆಳೆದರು. ಇಂತಹ ಸಮಯದಲ್ಲೇ ತೆಲಂಗಾಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಲ್ಬಂಗಳನ್ನು ರೂಪಿಸಿದರು. ತೆಲಂಗಾಣದ ಪ್ರಮುಖ ಹಬ್ಬಗಳಾದ ಬತುಕಮ್ಮ, ಸಮ್ಮಕ್ಕಸರಕ ಮತ್ತು ಬೋನಾಳಗಳಲ್ಲಿ ಮಂಗ್ಲಿಯವರ ಸಂಗೀತ ಆಲ್ಬಂಗಳು ಹಿಟ್ ಆಯಿತು. ನಿಧಾನವಾಗಿ ಸಿನಿಮಾಗಳಿಗೆ ಹಾಡುವ ಅವಕಾಶ ಸಿಕ್ಕಿತು.

ಬಾಲಿವುಡ್‌ ನಟಿ ಗಾಯತ್ರಿ ಜೋಶಿ ಉದ್ಯಮಿ ವಿಕಾಸ್ ಒಬೆರಾಯ್ ಕಾರು ಇಟಲಿಯಲ್ಲಿ ಭೀಕರ ಅಪಘಾತ, ವಿಡಿಯೋ ವೈರಲ್!

ಸದ್ಯ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಬಗ್ಗೆ ಮಂಗ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಭಾರೀ ಚರ್ಚೆ ಆಗುತ್ತಿರುವ ಮಂಗ್ಲಿ ಮದುವೆ (Marriage) ವಿಚಾರವಾಗಿ ಮಾತಾಡಿದ ಮಂಗ್ಲಿ, 'ಇದೆಲ್ಲಾ ಬರೀ ವದಂತಿ' ಎಂದು ಆಕೆ ಪ್ರತಿಕ್ರಿಯಿಸಿದ್ದಾರೆ. 'ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ (Social media) ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ನನ್ನ ಭಾವನನ್ನು ನಾನು ಮದುವೆ ಆಗೋದಾ? ಅದ್ಯಾರು ನನ್ನ ಭಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ' ಎಂದು ಗರಂ ಆಗಿದ್ದಾರೆ. ಜೊತೆಗೆ 'ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ' ಎಂದು ಮಂಗ್ಲಿ ಹೇಳಿದ್ದಾರೆ.

ಅಲ್ಲಿಗೆ ಮಂಗ್ಲಿ ಮದುವೆ ಡ್ರಾಮಾಕ್ಕೆ (Drama) ಬ್ರೇಕ್ ಬಿದ್ದಿದೆ. 'ಕಣ್ಣೇ ಅದಿರಿಂದಿ' ಗಾಯಕಿ ಮದ್ವೆ ಸದ್ಯಕ್ಕಿಲ್ಲವಂತೆ. ಅವ್ರಿಗೆ ಕಣ್ ಹಾಕ್ದೋರು ನೆಮ್ಮದಿಯಿಂದ ನಿದ್ದೆ (sleep) ಮಾಡಬಹುದು.

click me!