ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ ವಿರುದ್ಧ FIR ದಾಖಲಿಸಿದ್ದ ನಟ ಶಾಹಿದ್ ಕಪೂರ್!

Published : Sep 30, 2023, 03:44 PM IST
ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ ವಿರುದ್ಧ FIR ದಾಖಲಿಸಿದ್ದ ನಟ ಶಾಹಿದ್ ಕಪೂರ್!

ಸಾರಾಂಶ

ನಿಮ್ಮ ಅಭಿಮಾನಿ ಅಂತ ಶಾಹಿದ್‌ಗೆ ಹೇಳಿಕೊಂಡು ಅವರನ್ನು ಭೇಟಿಯಾಗುತ್ತಿದ್ದ ವಾಸ್ತವಿಕ್ತಾ, ಅವರ ಕಾರಿನ ಬಾನೆಟ್‌ ಮೇಲೆ ಕುಳಿತುಬಿಡುತ್ತಿದ್ದರಂತೆ. ಶಾಹಿದ್ ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಿದ್ದ ಆಕೆ, ಕೊನೆಗೆ ಶಾಹಿದ್ ಮನೆಗೂ ಹೋಗಲು ಶುರುವಿಟ್ಟುಕೊಂಡರಂತೆ. ಅಕ್ಕಪಕ್ಕದ ಮನೆಯವರಿಗೆಲ್ಲಾ ತಾವು ಶಾಹಿದ್ ಕಪೂರ್ ಹೆಂಡತಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರಂತೆ.

ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ (Shahid Kapoor)ಬಗೆಗಿನ ಕುತೂಹಲ ಕೆರಳಿಸುವ ಲವ್ ಸ್ಟೋರಿಯೊಂದು ಇದೀಗ ಸುದ್ದಿಯಾಗುತ್ತಿದೆ. ಅದರಲ್ಲಿ ನಟ ಶಾಹಿದ್ ಕಪೂರ್ ಅವರ ಪಾತ್ರವೇನೂ ಇಲ್ಲ. ಏಕೆಂದರೆ ಅದು ಒನ್ ಸೈಡೆಡ್ ಲವ್ ಸ್ಟೋರಿ.  ಆದರೆ, ಈ ಸ್ಟೋರಿ ಕಂಪ್ಲೀಟ್ ಆಗಿ ಶಾಹಿದ್ ಕಪೂರ್‌ಗೇ ಸಂಬಂಧಿಸಿದೆ. 2012 ರಲ್ಲಿ ಈ ಬಗ್ಗೆ ನಟ ಪೊಲೀಸ್ ಕಂಪ್ಲೇಂಟ್ ಕೂಡ ಕೊಟ್ಟಿದ್ದರು ಎಂಬುದು ಸತ್ಯ ಸಂಗತಿ ಎನ್ನಲಾಗಿದೆ. 

ಹಾಗಿದ್ದರೆ ಈ ಇಂಟರೆಸ್ಟಿಂಗ್ ಕಥೆಯ ನಾಯಕಿ ಯಾರು ಗೊತ್ತೇ? ಬಾಲಿವುಡ್‌ನ ಒಂದಾನೊಂದು ಕಾಲದ ಲೆಜೆಂಡ್ ನಟ ರಾಜ್‌ಕುಮಾರ್ ಅವರ ಮಗಳು ವಾಸ್ತವಿಕ್ತಾ ಪಂಡಿತ್ ( Vastavikta Pandit).ಹೌದು, ಬಾಲಿವುಡ್ ಹಿರಿಯ ನಟ ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ, ನಟ ಶಾಹಿದ್‌ ಕಪೂರ್ ಹಿಂದೆ ಬಿದ್ದಿದ್ದರಂತೆ. ಶಾಹಿದ್ ಅವರನ್ನು ನಟಿ ಅದೆಷ್ಟು ಕಾಡಿದ್ದಾಳೆ ಎಂದರೆ ಸ್ವತಃ ಶಾಹಿದ್ ಕಪೂರ್ ಆಕೆಯ ಕಾಟ ತಾಳಲಾರದೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಆಮೇಲೇನಾಯ್ತ ಎಂಬುದನ್ನು ಯಾರೂ ಹೇಳುತ್ತಿಲ್ಲ. ಆದರೆ, ಅಲ್ಲಿಯವರೆಗೆ ಏನಾಯ್ತು ಎಂಬುದನ್ನು ಹೇಳಲಾಗಿದೆ ನೋಡಿ.. 

ನಟ ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ ಪಂಡಿತ್ ನಟ ಶಾಹಿದ್ ಕಪೂರ್ ಹೋಗುತ್ತಿದ್ದ ಡಾನ್ಸ್ ಕ್ಲಾಸ್‌ಗೇ ಹೋಗುತ್ತಿದ್ದರಂತೆ. ಅಲ್ಲಿ ಶಾಹಿದ್ ನೋಡಿ ಆಕೆಗೆ ಕ್ರಶ್ ಆಗಿಬಿಟ್ಟಿದೆ. ಆಕೆ ಶಾಹಿದ್ ತನ್ನನ್ನು ಲವ್ ಮಾಡುತ್ತಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡೇ ಇಲ್ಲವಂತೆ. ತಾನು ಲವ್ ಮಾಡುತ್ತಾ ಈ ಒನ್‌ ವೇ ಲವ್‌ನಲ್ಲಿ ಆಕೆ ಅದೆಷ್ಟು ಮುಳುಗಿ ಬಿಟ್ಟಿದ್ದರು ಎಂದರೆ, ಶಾಹಿದ್‌ಗಾಗಿ ಮನೆಯನ್ನೇ ಬದಲಾಯಿಸಿಕೊಂಡು ಪಕ್ಕದ ಮನೆಯಲ್ಲಿಯೇ ಇದ್ದುಬಿಟ್ಟಿದ್ದರಂತೆ, 

ತಾವು ನಿಮ್ಮ ಅಭಿಮಾನಿ ಅಂತ ಶಾಹಿದ್‌ಗೆ ಹೇಳಿಕೊಂಡು ಅವರನ್ನು ಭೇಟಿಯಾಗುತ್ತಿದ್ದ ವಾಸ್ತವಿಕ್ತಾ, ಅವರ ಕಾರಿನ ಬಾನೆಟ್‌ ಮೇಲೆ ಕುಳಿತುಬಿಡುತ್ತಿದ್ದರಂತೆ. ಶಾಹಿದ್ ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಿದ್ದ ಆಕೆ, ಕೊನೆಗೆ ಶಾಹಿದ್ ಮನೆಗೂ ಹೋಗಲು ಶುರುವಿಟ್ಟುಕೊಂಡರಂತೆ. ಅಕ್ಕಪಕ್ಕದ ಮನೆಯವರಿಗೆಲ್ಲಾ ತಾವು ಶಾಹಿದ್ ಕಪೂರ್ ಹೆಂಡತಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರಂತೆ ವಾಸ್ತವಿಕ್ತಾ. 

ಯಾವಾಗ ಆಕೆ ಹುಡುಕಿಕೊಂಡು ಮನೆಗೂ ಬರಲು ಶುರುವಿಟ್ಟುಕೊಂಡರೋ ಆಗ, ಶಾಹಿದ್ ನಿಜವಾಗಿಯೂ ತಾಳ್ಮೆ ಕಳೆದುಕೊಂಡು ಬಿಟ್ಟಿದ್ದಾರೆ. ಸೀದಾ ಹೋಗಿ ಪೊಲೀಸ್ ಸ್ಟೇಷನ್‌ಗೆ ಹೋಗಿ ಆಕೆಯ ವಿರುದ್ಧ ಎಫ್‌ಐಆರ್ (FIR)ದಾಖಲಿಸಿದ್ದಾರೆ. ಮುಂದೇನಾಯಿತೋ ಏನೋ! ಆದರೆ, ಶಾಹಿದ್ ಕಪೂರ್ ಮಾತ್ರ ಮೀರಾ ರಜಪೂತ್ ಜತೆ ಮದುವೆ ಮಾಡಿಕೊಂಡು, 2 ಮಕ್ಕಳೂ ಆಗಿ ಇದೀಗ ಹಾಯಾಗಿದ್ದಾರೆ. 

ಅಂದಹಾಗೆ, ನಟಿ ವಾಸ್ತವಿಕ್ತಾ 1996 ರಲ್ಲಿ ಬಾಲಿವುಡ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ, ಅವರನ್ನು ಬಾಲಿವುಡ್ ಪ್ರೇಕ್ಷಕರು ಸ್ವೀಕರಿಸಲಿಲ್ಲ. ಹೀಗಾಗಿ ಅಲ್ಲಿಂದ ಮರೆಯಾದ ವಾಸ್ತವಿಕ್ತಾ, ಶಾಹಿದ್‌ ಲೈಫ್‌ನಿಂದಲೂ ಮರೆಯಾಗಬೇಕಾಯ್ತು. ಒಟ್ಟಿನಲ್ಲಿ, ಶಾಹಿದ್ ಕಪೂರ್ ಹೆಂಡತಿಯಾಗಬೇಕು ಎಂದು ಬಯಸಿದ್ದ ವಾಸ್ತವಿಕ್ತಾ, ಪೊಲೀಸ್ ಸ್ಟೇಶನ್ ಒಳಗೆ ಹೋಗುವಂತಾಗಿತ್ತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?