KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್‌ ಏನು?

By Suvarna News  |  First Published Apr 14, 2022, 9:19 AM IST

ಕೆಜಿಎಫ್ 2 ಸಿನಿಮಾ ಮಧ್ಯರಾತ್ರಿ 12 ಗಂಟೆಯಿಂದಲೇ ಸೌಂಡ್ ಮಾಡ್ತಿದೆ. ಇದರ ಮುಂದೆ ಯಾವ ಬಾಹುಬಲಿನೂ ಇಲ್ಲ, ಕೊನೆಯ ಟ್ವಿಸ್ಟ್‌ ಅಂತೂ ಈ ಸಿನಿಮಾ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಸಿನಿಮಾದ ಹೈಲೈಟ್ಸ್‌ಗಳೇನು?


ಯಶ್  (Yash) ಅವರ ಭರ್ಜರಿ ಎಪೀರಿಯರೆನ್ಸ್, ಸ್ಟೈಲು, ಆಟಿಟ್ಯೂಡ್, ಅಧೀರ ಸಂಜಯ್ ದತ್ತ್ (Sanjay Dutt) ರಣ ಕೇಕೆ, ರವೀನಾ ಟಂಡನ್ (Raveena Tandon) ನಟನೆ, ಇವೆಲ್ಲಕ್ಕೆ ಕಳಶಪ್ರಾಯವಾಗಿ ಕಥೆ.. ಈ ಎಲ್ಲ ಅಂಶಗಳು KGF 2 ಸಿನಿಮಾ ಮೈಂಡ್ ಬ್ಲೋಯಿಂಗ್ ಸಿನಿಮಾವನ್ನಾಗಿಸಿದೆ. ಇದರ ಮುಂದೆ ಯಾವ ಬಾಹುಬಲಿ (Bahubali) ಸಿನಿಮಾನೂ ನಿಲ್ಲೋದಿಲ್ಲ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಕೆಜಿಎಫ್ 2 (Kgf ) ಅಬ್ಬರದೆದುರು ದಳಪತಿ ವಿಜಯ್ ನಟನೆಯ ಇನ್ನೊಂದು ಮಹತ್ವದ ಚಿತ್ರ 'ಬೀಸ್ಟ್' (Beast) ತತ್ತರಿಸಿ ಹೋಗಿದೆ. ಚಿತ್ರದ ಕೊನೆಯಲ್ಲಿ ಪ್ರಶಾಂತ್ ನೀಲ್ ನೀಡಿರುವ ಟ್ವಿಸ್ಟ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇದು ಯಾವ ಪರಿ ಮಾಸ್ ಸಿನಿಮಾ ಅಂದ್ರೆ 'ಕಿವಿ ಕಿತ್ತೋಗುತ್ತೆ, ಗಂಟಲು ಒಡೆದುಹೋಗುತ್ತೆ ಅಂತ ಒಬ್ರು ಅಭಿಮಾನಿ ಮಾಧ್ಯಮಗಳ ಮುಂದೆ ಹೇಳ್ತಿದ್ದದ್ದು ಕೇಳಿದರೇ ಅವರಿಗೆ ಈ ಸಿನಿಮಾ ಎಷ್ಟಿಷ್ಟ ಆಗಿದೆ ಅನ್ನೋದು ಗೊತ್ತಾಗುತ್ತೆ. ಟ್ವಿಟ್ಟರ್‌ನಲ್ಲಿ ಈ ಸಿನಿಮಾಕ್ಕೆ 5/5, ಕೆಲವೆಡೆ 4.5/5 ಮಾರ್ಕ್ಸ್ ಸಿಕ್ಕಿದೆ. 'ಪ್ರಶಾಂತ್ ನೀಲ್ ಬೆಂಕಿ ಹತ್ತಿಸಿದ್ದಾರೆ. ಸಂಜಯ್ ದತ್ತ್ ಹಾಗೂ ಯಶ್ ಈ ಥರ ಕಮಾಲ್ ಹಿಂದೆಂದೂ ಮಾಡಿರಲಿಲ್ಲ. ಪ್ರತೀ ಸೀನ್ Larger Than Life ಅಂತ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಸಿನಿಮಾದ ಕೆಲವು ಹೈಲೈಟ್ಸ್ ಹೀಗಿದೆ.

Tap to resize

Latest Videos

* ರಾಕಿ ಭಾಯ್ (Rocky boy)ಎಂಟ್ರಿ ಸೀನ್ ಗಮನ ಸೆಳೆಯುವಂತಿದೆ.
* ರಾಕಿ ಭಾಯ್ ಯಶ್ (Yash)ಹಾಗೂ ಅಧೀರ ಸಂಜಯ್ ದತ್ತ್ (sanjay Dutt)ಪಾತ್ರಗಳು ಮೊದಲ ಭಾಗದಲ್ಲೇ ಮುಖಾಮುಖಿ ಆಗುತ್ತವೆ. ರಾಕಿ ಬಾಯ್ ಮೊದಲಾರ್ಧದ ಕತೆಯ ತುಂಬ ಆವರಿಸಿದ್ದಾನೆ. ಯಶ್ ಲುಕ್, ಡೈಲಾಗ್‌, ಆಟಿಟ್ಯೂಡ್ (Attitude)ಎಲ್ಲ ಮಾಸ್ ಆಗಿದೆ. ತೆರೆಯ ಮೇಲೆ ರಾಕಿ ಬಾಯ್ ಕಮಾಲ್ ಪ್ರೇಕ್ಷಕನಿಗೆ ಸಖತ್ ಇಷ್ಟ ಆಗಿದೆ.
* ಯಶ್ ಈ ಪಾತ್ರಕ್ಕೆ ತಮ್ಮೆಲ್ಲ ಎನರ್ಜಿಯನ್ನೂ ಹಾಕಿದ್ದಾರೆ. ಇದು ಫ್ಯಾನ್ಸ್‌ಗೆ  (Fans) ಬಹಳ ಇಷ್ಟ ಆಗಿದೆ. ಅವರ ಡೈಲಾಗ್ ಡೆಲಿವರಿ ರೀತಿಯನ್ನೂ ಜನ ಇಷ್ಟಪಟ್ಟಿದ್ದಾರೆ.

ಇಂದಿನಿಂದ ದೇಶಾದ್ಯಂತ ಕೆಜಿಎಫ್‌-2 ಅಬ್ಬರ, 12,000 ಪರದೆಗಳಲ್ಲಿ ಪ್ರದರ್ಶನ!

* ತಾಯಿ ಸೆಂಟಿಮೆಂಟ್‌ಅನ್ನು (Mother Sentiments) ಇಂಟರೆಸ್ಟಿಂಗ್‌ ಆಗಿ ತಂದಿದ್ದಾರೆ. ಬೇರೆ ಸಿನಿಮಾಗಳಲ್ಲಿ ಇಂಥಾ ಎಮೋಶನಲ್ ಸೀನ್‌ಗಳು ಕೊಂಚ ಬೋರ್ ಹೊಡೆಸುತ್ತವೆ. ಆದರೆ ಇಲ್ಲಿ ತಾಯಿ ಸೆಂಟಿಮೆಂಟಿನ ದೃಶ್ಯಗಳೂ ಮೈ ನವಿರೇಳಿಸುವತಿದೆ ಅಂತ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ತಾಯಿ ಸೆಂಟಿಮೆಂಟಿನ ಸೀನ್‌ನಿಂದಲೇ ಓಪನ್ ಆಗೋ ಸಿನಿಮಾದಲ್ಲಿ ಅಮ್ಮ ಮಗನ ನಡುವಿನ ದೃಶ್ಯಗಳು ಸಾಕಷ್ಟಿವೆ.
* ಡೈಲಾಗ್‌ಗಳು ಮಾಸ್ ಆಗಿದ್ದು, ಜನರನ್ನು ಹುಚ್ಚೆಬ್ಬಿಸುತ್ತದೆ. ಅಭಿಮಾನಿಯೊಬ್ಬರು ಹೇಳೋ ಹಾಗೆ ಈ ಡೈಲಾಗ್, ಹಿಂದಿನ ಭರ್ಜರಿ ಮ್ಯೂಸಿಕ್‌ಗೆ (Music) ಕಿವಿ ಕಿತ್ತೋಗುತ್ತೆ, ಗಂಟಲು ಒಡೆದು ಹೋಗುತ್ತೆ.
* ಇದೊಂದು ಪಕ್ಕಾ ಮಾಸ್ ಸಿನಿಮಾವಾಗಿ (Mass Movie) ಹೊರಬಂದಿದೆ. ಎರಡನೇ ಭಾಗದಲ್ಲಿ ಬರೋ ರಮಿಕಾ ಸೆನ್ (Ramika sen) ಪಾತ್ರವೂ ಗಮನ ಸೆಳೆಯೋ ಹಾಗಿದೆ.
* ಎಲ್ಲಕ್ಕಿಂತ ಮಸ್ತ್ ಆಗಿರೋದು ಕೊನೆಯಲ್ಲಿ ನೀಡಿರುವ ಟ್ವಿಸ್ಟ್ (Twist). ಅದು ಯಾವ ಥರ ಇದೆ ಅಂದರೆ ಜನ ಕೆಜಿಎಫ್ 3 ಯಾವಾಗ ಬರುತ್ತಪ್ಪಾ ಅಂತ ಎದುರು ನೋಡೋ ಹಾಗಾಗಿದೆ.
* ಇದೊಂದು ಆಕ್ಷನ್ (Action) ಪ್ರಧಾನ ಚಿತ್ರವಾಗಿರುವ ಕಾರಣ ಪ್ರೀತಿ, ಪ್ರೇಮ, ರೊಮ್ಯಾನ್ಸ್ ಅಷ್ಟಾಗಿ ಹೈಲೈಟ್ ಆಗಿಲ್ಲ.
* ಎರಡೆರಡು ಟ್ವಿಸ್ಟ್‌ಗಳಿವೆ. ಅವು ಈ ಸಿನಿಮಾವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿವೆ.
* ಇದರಲ್ಲಿ ಕೆಜಿಎಫ್ 3 ಸಿನಿಮಾ ಬರೋ ಸೂಚನೆ ಸಿಗುತ್ತೆ.
* ಬಿಜಿಎಂ  (BGM) ಸೀನ್‌ಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿದೆ.
* ಕೆಲವೊಂದು ಸೀನ್‌ಗಳಲ್ಲಿ ಇಂಪ್ರೂವೈಸೇಶನ್‌ಗೆ ಅವಕಾಶ ಇತ್ತು. ಆ ಸೀನ್‌ಗಳು ಯಾವುವು ಅಂತ ಸಿನಿಮಾ ನೋಡಿದ್ರೆ ನಿಮಗೇ ಗೊತ್ತಾಗುತ್ತೆ.

The Kashmir Files: ಜನರ ಭಾವನೆ ಜೊತೆ ಆಟ ಆಡಿ ಹಣ ಮಾಡಿದ್ದಾಯ್ತು, ಈಗ ಬ್ಯಾಂಕಾಕ್ ನಲ್ಲಿ ಪಾರ್ಟಿನಾ?

"

click me!