Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?

Published : Jun 09, 2022, 12:05 PM IST
Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?

ಸಾರಾಂಶ

ರಕ್ಷಿತ್ ಶೆಟ್ಟಿ ನಟಿಸಿರೋ '777 ಚಾರ್ಲಿ' ಸಿನಿಮಾ ರಿಲೀಸ್ ಆಗ್ತಿದೆ. ಈ ಸಿನಿಮಾದಲ್ಲಿ ಚಾರ್ಲಿ ನಾಯಿಯೇ ಹೀರೋ. ಇದರಲ್ಲಿ ರಕ್ಷಿತ್ ಆಕ್ಟಿಂಗ್ ನೋಡಿದವರು ರಕ್ಷಿತ್ ಗೆ ನಾಯಿ ಮೇಲೆ ಎಂಥಾ ಪ್ರೀತಿಯಪ್ಪ ಅಂದ್ಕೊಂಡಿದ್ದಾರೆ. ಆದರೆ ರಕ್ಷಿತ್ ಗೆ ಮಾತ್ರ ನಾಯಿಗಿಂತ ಬೆಕ್ಕೇ ಇಷ್ಟ. ಅದ್ಯಾಕೆ ಅನ್ನೋದಕ್ಕು ರೀಸನ್ ಕೊಡ್ತಾರೆ ಶೆಟ್ರು.

ರಕ್ಷಿತ್ ಶೆಟ್ಟಿ(Rakshith Shetty) ನಟನೆಯ '777 ಚಾರ್ಲಿ'(777 Charlie) ಸಿನಿಮಾ ನಾಳೆ ರಿಲೀಸ್(Release) ಆಗ್ತಿದೆ. ಇದರ ನಾಯಕ ಧರ್ಮ, ಆತನ ಜೊತೆಗಿರುವ ನಾಯಿ ಚಾರ್ಲಿ. ಇಡೀ ಸಿನಿಮಾ ಚಾರ್ಲಿ ಮತ್ತು ಧರ್ಮನ ಪೇಚಾಟ, ಪ್ರೀತಿ, ಬಾಂಧವ್ಯಗಳ ಮೇಲೆ ನಿಂತಿದೆ ಅಂತ ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅವ್ರೇ ಹೇಳಿದ್ದಾರೆ. ಪ್ರೀಮಿಯರ್‌(Premier)ನಲ್ಲಿ ಈ ಸಿನಿಮಾ ನೋಡಿದವರಲ್ಲಿ ಹೆಚ್ಚಿನವರು ಕಣ್ಣೀರು ಹಾಕಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ನಾಯಿಯನ್ನು ಕಂಡರೆ ದೂರ ಓಡುತ್ತಿದ್ದವರೂ ನಾಯಿಯನ್ನು ಪ್ರೀತಿಸುವ ಹಾಗಾಗಿದ್ದಾರೆ. ಆದರೆ ಈ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಮಾತ್ರ ತನಗೆ ನಾಯಿಗಳಿಗಿಂತ ಬೆಕ್ಕು(Cat) ಕಂಡರೆ ಹೆಚ್ಚು ಇಷ್ಟ ಅಂದಿದ್ದಾರೆ. ಹಾಗೆ ಅನಿಸೋದಕ್ಕೆ ಕಾರಣವನ್ನೂ ಅವರು ಹೇಳಿದ್ದಾರೆ.

ಹಾಗಂತ ರಕ್ಷಿತ್ ಅವರಿಗೆ ನಾಯಿಗಳನ್ನು ಕಂಡರೆ ದ್ವೇಷ, ಭಯ ಇದ್ಯಾವುದೂ ಇಲ್ಲ. ಇವರ ಮನೆಯಲ್ಲೂ ಇವರು ಚಿಕ್ಕವರಿದ್ದಾಗ ಪೊಮೇರಿಯನ್(Pomeranian) ನಾಯಿ ಇತ್ತಂತೆ. ಆ ನಾಯಿ ಜೊತೆ ಅಂಥಾ ಒಡನಾಟ ಇಲ್ಲದಿದ್ದರೂ ಸಿಟ್ಟಂತೂ ಇರಲಿಲ್ಲ. ಆದರೆ ಈ ನಾಯಿ ಎಲ್ಲರಿಗೂ ಕಚ್ಚುತ್ತೆ ಅಂತ ಅದನ್ನು ಇವರಿಂದ ದೂರವಿಟ್ಟರು. ಆಮೇಲೆ ಸ್ವಲ್ಪ ದಿನ ರಕ್ಷಿತ್ ಅವರು ನಾಯಿಗಳ ಒಡನಾಟದಿಂದ ದೂರವಿದ್ದರು. ಆದರೆ ಅವರಿಗೆ ಬೀದಿಯಲ್ಲಿ ಅನಾಥ ಸ್ಥಿತಿಯಲ್ಲಿರುವ ನಾಯಿಗಳ ಬಗ್ಗೆ ನೋವಿದೆ. ಈ ನಾಯಿಗಳನ್ನು ರೆಸ್ಕ್ಯೂ ಸೆಂಟರ್(Resque center) ಸೇರಿಸಲು ಅವರೂ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಬೀದಿ ನಾಯಿಗಳನ್ನು ದತ್ತು ತಗೊಂಡಿದ್ದಾರೆ. ಅವರ ಮನೆಯಲ್ಲೂ ಬೀದಿ ನಾಯಿ ಸಾಕಿದ್ದಾರೆ. ಬ್ರೀಡ್ ನಾಯಿಗಳಿಗಿಂತ ಬೀದಿ ನಾಯಿಗಳನ್ನು ದತ್ತು ತಗೊಂಡು ಸಾಕಿ ಅಂತ ಅವರು ಸೋಷಿಯಲ್ ಮೀಡಿಯಾದಲ್ಲೆಲ್ಲ ಸಂದೇಶ ಹರಿಯಬಿಟ್ಟಿದ್ದರು. ಇದೀಗ 777 ಚಾರ್ಲಿ ಸಿನಿಮಾದುದ್ದಕ್ಕೂ ನಾಯಿ ಜೊತೆಗೇ ಆಕ್ಟ್(Act) ಮಾಡಿದ್ದಾರೆ.

ಹೀಗೆಲ್ಲ ಇದ್ದರೂ ರಕ್ಷಿತ್ ಅವರಿಗೆ ಸಾಕು ಪ್ರಾಣಿಗಳಲ್ಲೆಲ್ಲ ನಾಯಿಯೇ ಇಷ್ಟವಾ? ಅವರು ನಾಯಿಯನ್ನು ಬಹಳ ಪ್ರೀತಿಸುವ ವ್ಯಕ್ತಿಯಾ ಅಂತ ಕೇಳಿದ್ರೆ, ಅವರು 'ನಂಗೆ ನಾಯಿಗಿಂತ ಬೆಕ್ಕು ಹೆಚ್ಚು ಇಷ್ಟ' ಅಂತ ಹೇಳಿದ್ದಾರೆ. ಸಿನಿಮಾದಲ್ಲಿ ಆ ಲೆವೆಲ್‌(Level)ಗೆ ತೀವ್ರವಾಗಿ ಆಕ್ಟ್ ಮಾಡಿರೋ ರಕ್ಷಿತ್ ನಾಯಿಗಿಂತ ಬೆಕ್ಕನ್ನು ಯಾಕೆ ಇಷ್ಟ ಪಡ್ತಾರೆ ಅಂದರೆ ಅದಕ್ಕೆ ಅವರ ಬಳಿ ಉತ್ತರ ಇದೆ. 'ಬೆಕ್ಕುಗಳಲ್ಲಿ ಒಂದು ನಿಗೂಢ ವ್ಯಕ್ತಿತ್ವ ಇದೆ. ಬೆಕ್ಕುಗಳು ತೋರಿಸುವ ಆ ಮಿಸ್ಟರಿ(Mistery) ಗುಣ ನನಗಿಷ್ಟ. ನನಗೆ ಅವುಗಳ ವ್ಯಕ್ತಿತ್ವದ ಬಗ್ಗೆಯೇ ತುಂಬ ಕುತೂಹಲ ಇದೆ. ನಾಯಿಗಳಾದರೆ ನಾವು ಆಹಾರ ಹಾಕಿದರೆ ಪ್ರೀತಿ ತೋರಿಸುತ್ತವೆ. ನಾನು ಹೇಳಿದ ಹಾಗೆ ಕೇಳ್ಕೊಂಡು ಇದ್ದು ಬಿಡುತ್ತವೆ. ಅದನ್ನು ಮೀರಿದ ಗುಣ ಇಲ್ಲ. ಅವುಗಳು ಹೀಗೆ ಅಂತ ನಾವು ಅಂದುಕೊಂಡು ಬಿಡಬಹುದು. ಆದರೆ ಬೆಕ್ಕುಗಳ ಬಿಹೇವಿಯರ್‌(Behaviour)ಅನ್ನು ಹೀಗೇ ಅಂತ ಜಡ್ಜ್(Judge) ಮಾಡೋದಕ್ಕಾಗಲ್ಲ. ಅವು ಸದಾ ತಮ್ಮೊಳಗೆ ಒಂದು ಗುಟ್ಟನ್ನು ಅಡಗಿಸಿಟ್ಟುಕೊಂಡ ಹಾಗೆ ಇರುತ್ತವೆ. ಆ ಬಗ್ಗೆ ನನಗೆ ಬಹಳ ಕ್ಯೂರಿಯಾಸಿಟಿ ಇದೆ ಅಂತಾರೆ ರಕ್ಷಿತ್.

777 ಚಾರ್ಲಿ-2 ಬರುತ್ತಾ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು

ಬೆಕ್ಕುಗಳ ಈ ನಿಗೂಢ ಗುಣಗಳ ಬಗ್ಗೆ ಸಾಕಷ್ಟು ಕತೆಗಳೂ ಬಂದಿವೆ. ಸದ್ಯ ರಕ್ಷಿತ್ ಅವರಿಗಿರುವ ಕುತೂಹಲ ನೋಡಿದರೆ ಅವರು ಬೆಕ್ಕಿನ ಬಗ್ಗೆ ಮುಂದೊಂದು ದಿನ ಸಿನಿಮಾ ಮಾಡಬಹುದಾ ಅನ್ನೋ ಅನುಮಾನ ಬರುತ್ತೆ. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ. ನಾಯಿಯನ್ನಾದರೂ ಆಹಾರ ಕೊಟ್ಟು, ಆಟ ಆಡಿಸ್ತಾ ಶೂಟಿಂಗ್(Shooting) ಮಾಡಬಹುದು. ಆದರೆ ಬೆಕ್ಕುಗಳು ಯಾವತ್ತೂ ಅಂಥಾ ಆಮಿಷಗಳಿಗೆಲ್ಲ ಬಗ್ಗುವವಲ್ಲ. ಅವುಗಳ ಆನಿಮೇಟೆಡ್(Animated) ಸಿನಿಮಾ ಮಾಡಬಹುದೇ ವಿನಃ ರಿಯಲ್‌ನಲ್ಲಿ ಚಾರ್ಲಿಯಂತೆ ಸಿನಿಮಾ ತೆಗೀತೀನಿ ಅಂದರೆ ಬಹುಶಃ ಅದು ಅಸಾಧ್ಯ ಅನಿಸುತ್ತೆ. ಆದರೆ ಕತೆಯ ಬಗ್ಗೆ ಸದಾ ಕುತೂಹಲ ಹೊಂದಿರುವ ರಕ್ಷಿತ್ ಅವರಿಗೆ ಬೆಕ್ಕು ಭಲೇ ಕುತೂಹಲದ ಪ್ರಾಣಿ. ಇದರ ಮನಸ್ಸನ್ನು ಅರ್ಥ ಮಾಡ್ಕೊಳ್ಳಬೇಕು ಅನಿಸಿದ್ದರಲ್ಲಿ ಅಚ್ಚರಿ ಏನಿಲ್ಲ. ಇದೇ ಕುತೂಹಲದಲ್ಲಿ ಅವರು ಮುಂದೊಂದು ದಿನ ಬೆಕ್ಕಿನ ಮೇಲೆ ಸಿನಿಮಾ ಮಾಡುವ ಸಾಹಸ ಮಾಡಿದರೆ ಆಗ ಅಚ್ಚರಿ ಪಡಬಹುದು.

ರಕ್ಷಿತ್ ಜನ್ಮದಿನಕ್ಕೂ ಚಾರ್ಲಿಗೂ ಇದೆ ಲಿಂಕ್.! ಏನದು..?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?