ಸ್ಯಾಂಡಲ್ವುಡ್ ನಟರಾಕ್ಷಸ ಧನಂಜಯ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಎಲ್ಲಿ ಹೋದ್ರೂ ಹುಡುಗಿ ಯಾರು ಅಂತ ಕೇಳ್ತಿದ್ದವರು ಈಗ ಹುಡುಗಿ ಹೆಸರು ಹೇಳುವಂತೆ ಪೀಡಿಸ್ತಿದ್ದಾರೆ. ಸಿನಿಮಾದಲ್ಲಿ ಮಾಸ್ ಡೈಲಾಗ್ ಹೊಡೆಯೋ ಡಾಲಿಗೆ ಭಾವಿ ಪತ್ನಿ ಹೆಸರು ಹೇಳೋದು ಕಷ್ಟವಾಗಿದೆ.
ಕೈನಲ್ಲಿ ಮಚ್ಚು ಹಿಡಿದು ಮಾಸ್ ಡೈಲಾಗ್ ಹೊಡೆಯುವ ಡಾಲಿ ಧನಂಜಯ್ (Dolly Dhananjay) ತುಂಬಾ ರೋಮ್ಯಾಂಟಿಕ್ ಅನ್ನೋದು ಈಗ ಗೊತ್ತಾಗಿದೆ. ಭಾವಿ ಪತ್ನಿ ಹೆಸರು ಹೇಳುವಾಗ ನಟರಾಕ್ಷಸ ಧನಂಜಯ್ ನಾಚಿ ನೀರಾಗಿದ್ದಾರೆ. ಆಂಕರ್ ಅನುಶ್ರೀ (Anchor Anushree), ಭಾವಿ ಪತ್ನಿ ಹೆಸರು ಹೇಳಿ ಎನ್ನುತ್ತಿದ್ದಂತೆ ನಾಚಿಕೊಳ್ಳುವ ಧನಂಜಯ್ ಕೊನೆಗೆ ಹೆಸರು ಹೇಳ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಾಲಿ ಮುಖದಲ್ಲಿ ವರನ ಕಳೆ ಬಂದಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಭೈರತಿ ರಣಗಲ್ (Bhairati Rangal) ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಧನಂಜಯ್ ಗೆ ಅನುಶ್ರೀ, ಅವರ ಹೆಸರು ಹೇಳಿ ಧನು ಅಂತಾರೆ. ಆಗ ಧನಂಜಯ್ ನಾಚಿಕೊಳ್ತಾರೆ. ಮಾಸ್ ಹೀರೋ ಇಷ್ಟೊಂದು ರೋಮ್ಯಾಂಟಿಕ್ ಅಂತ ಗೊತ್ತಿರಲಿಲ್ಲ ಅಂತ ಅನುಶ್ರೀ ಕಾಲೆಳೆಯುತ್ತಾರೆ. ಆಗ ಧನಂಜಯ್, ಧನ್ಯತಾ (Dhanyata) ಅಂತ ತಮ್ಮ ಭಾವಿ ಪತ್ನಿ ಹೆಸರನ್ನು ಹೇಳ್ತಾರೆ. ಕೇಳಿಸಲಿಲ್ಲ ಎಂದಾಗ ಮತ್ತೆ ನಗ್ತಾ ಧನ್ಯತಾ ಎಂದು ದೊಡ್ಡದಾಗಿ ಹೇಳ್ತಾರೆ.
undefined
ರೀಲ್ಸ್ ಮಾಡಿ ಐಶ್‌ಗೆ ಟಾಂಟ್ ನೀಡಿದ್ರಾ ನಿಮ್ರತಾ ಕೌರ್?
ಸ್ಯಾಂಡಲ್ವುಡ್ (Sandalwood) ನಟ ಡಾಲಿ ಧನಂಜಯ್ ಎಲ್ಲಿ ಹೋದ್ರೂ ಮದುವೆ ಯಾವಾಗ, ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳ್ತಾನೆ ಇದ್ರು. ಧನಂಜಯ್ ಹುಡುಗಿ ಯಾರು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗಿತ್ತು. ದೀಪಾವಳಿ ಹಬ್ಬದಂದು ಧನಂಜಯ್ ತಮ್ಮ ಮದುವೆ ವಿಷ್ಯವನ್ನು ಅನೌನ್ಸ್ ಮಾಡಿದ್ದಾರೆ. ಧನ್ಯತಾ ಜೊತೆಗಿರುವ ವಿಡಿಯೋ ಹಂಚಿಕೊಂಡಿರುವ ಧನಂಜಯ್, ನಾನು ಮದುವೆ ಆಗ್ತಿದ್ದೇನೆ ಎಂದಿದ್ದಾರೆ.
ಸುಂದರ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಧನಂಜಯ್, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ನಾನು ಧನ್ಯ ಎಂದು ಶೀರ್ಷಿಕೆ ಹಾಕಿದ್ದರು. ಅದಲ್ಲದೆ ಧನ್ಯತಾ ಕುರಿತು ಸುಂದರ ಕವನವೊಂದನ್ನು ಹಂಚಿಕೊಂಡಿದ್ದರು ಧನಂಜಯ್.
ಧನಂಜಯ್ ಮದುವೆ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಮದುವೆ ಎಲ್ಲಿ ಎನ್ನುವ ಪ್ರಶ್ನೆಗೆ ಈಗಾಗಲೇ ಬಹುತೇಕ ಉತ್ತರ ಸಿಕ್ಕಿದೆ. ಮುಂದಿನ ವರ್ಷ ಫೆಬ್ರವರಿ 16ರಂದು ಅವರ ಮದುವೆ ಎನ್ನಲಾಗ್ತಿದೆ. ಮೈಸೂರಿನಲ್ಲಿ ಮದುವೆ ನಡೆಯಲಿದ್ದು, ಡಾಲಿ ಈಗಾಗಲೇ ಮದುವೆಗೆ ತಯಾರಿ ಶುರು ಮಾಡಿದ್ದಾರೆ.
ಸುಮಲತಾ ಮಡಿಲಿನಲ್ಲಿ ಜೂನಿಯರ್ ಅಂಬರೀಶ್ - ಫೋಟೋ ನೋಡಿ
ಧನ್ಯತಾ ಯಾರು? : ಡಾಲಿ ಕೈ ಹಿಡಿಯಲಿರುವ ಧನ್ಯತಾ ವೃತ್ತಿಯಲ್ಲಿ ವೈದ್ಯೆ. ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯೆಯಾಗಿ ಕೆಲಸ ಮಾಡ್ತಿದ್ದಾರೆ. ಧನ್ಯತಾ ಚಿತ್ರದುರ್ಗ ಮೂಲದವರು. ಅವರು ಅರಸೀಕೆರೆಯಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದು, ಮೈಸೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ್ರು. ವೈದ್ಯಕೀಯ ಪದವಿಯಲ್ಲಿ ರ್ಯಾಂಕ್ ಪಡೆದಿರುವ ಧನ್ಯತಾ ಹಾಗೂ ಡಾಲಿ ಧನಂಜಯ್ ಗೆ ಮೈಸೂರಿನ ಜೊತೆ ವಿಶೇಷ ನಂಟಿದೆ. ಧನಂಜಯ್ ಕೂಡ ಮೈಸೂರಿನಲ್ಲಿಯೇ ಉನ್ನತ ಶಿಕ್ಷಣ ಪಡೆದಿದ್ದಾರೆ. ಅನೇಕ ವರ್ಷಗಳಿಂದ ಸ್ನೇಹಿತರಾಗಿರುವ ಡಾಲಿ ಧನಂಜಯ್ ಹಾಗೂ ಧನ್ಯತಾ, ಮದುವೆ ನಿರ್ಧಾರ ಕೈಗೊಂಡಿದ್ದಾರೆ. ಈ ವಿಷ್ಯವನ್ನು ಮನೆಯಲ್ಲಿ ತಿಳಿಸಿ, ಮನೆಯವರ ಒಪ್ಪಿಗೆ ಮೇರೆಗೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಮದುವೆ ಮೈಸೂರಿನಲ್ಲಿಯೇ ನಡೆಯಲಿದೆ ಎನ್ನಲಾಗ್ತಿದೆ. ಎಗ್ಸಿಬಿಷನ್ ಗ್ರೌಂಡ್ ನಲ್ಲಿ ಮದುವೆಗೆ ತಯಾರಿ ನಡೆದಿದೆ ಎಂದು ಮೂಲಗಳು ಹೇಳಿವೆ. ಡಾಲಿ ಧನಂಜಯ್ ಸದ್ಯ ಅಣ್ಣ ಫ್ರಂ ಮೆಕ್ಸಿಕೊ ಸೇರಿದಂತೆ ಕೆಲ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಎರಡು ದಿನಗಳ ಹಿಂದಷ್ಟೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಧನಂಜಯ್, ರಾಯರ ದರ್ಶನ ಪಡೆದಿದ್ದರು.