
ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ಮೆಟ್ಟಿಲಿನಿಂದ ಇಳಿಯುತ್ತಿರುವಾಗ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲ ಟ್ರೋಲ್ ಪೇಜ್‌ಗಳು ಈ ವಿಡಿಯೋಗೆ ಬೇರೆ ಸನ್ನಿವೇಶ ಸೃಷ್ಟಿಸಿ ಟ್ರೋಲ್ ಮಾಡಲು ಆರಂಭಿಸಿದ್ದರು. ತಮ್ಮ ವಿಡಿಯೋ ಟ್ರೋಲ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಇದಕ್ಕೆ ಹೀರೋಯಿಸಂ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಮೆಟ್ಟಿಲಿನಿಂದ ಬೀಳುತ್ತಿರುವ ವಿಡಿಯೋಗೆ ತಾವು ಬೆಡ್ ಮೇಲೆ ಲಾಲಿಪಾಪ್ ತಿನ್ನುತ್ತಾ ಬೀಳುವ ಎಡಿಟ್ ಮಾಡಿದ್ದಾರೆ. ಈ ಎಡಿಟೆಡ್ ವಿಡಿಯೋ ಜೊತೆ ಕೆಲವು ಸಾಲುಗಳನ್ನು ಸಹ ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.
ನಾನು ಬಿದ್ದೆ, ಅದೊಂದು ಕ್ರೇಜಿ. ಇದುವೇ ರೌಡಿಯ ಬದುಕಿನ ವಿಧಾನ. ಜೋರಾಗಿ ಬಿದ್ದಾಗಲೇ ಎತ್ತರಕ್ಕೆ ಹೋಗಲು ಸಾಧ್ಯ. ದೊಡ್ಡ ಸೋಲು ಕಂಡಾಗಲೇ ಗೆಲುವಿನ ಯಶಸ್ಸು ಸಿಗುತ್ತದೆ. ಇದೆಲ್ಲಾದ ನಂತರವೇ ಬದುಕು ಎಂಬ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಟ್ರೋಲ್‌ಗಳಿಗೆ ವಿಜಯ್ ದೇವರಕೊಂಡ ತಿರುಗೇಟು ನೀಡಿದ್ದಾರೆ.
ವಿಜಯ್ ದೇವರಕೊಂಡ ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಟ್ರೋಲಿಗರಿಗೆ ತಿರುಗೇಟು ನೀಡಿರುವ ವಿಜಯ್ ವಿಡಿಯೋ ಕನ್ನಡಿಗ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಎಮ್ಮಿ ಬಿದ್ದಂಗ ಕಿಸಗೊಂಡ ಬಿದ್ದಿ. ಮತ್ಯಾಕ್ ರೌಡಿ, ಪರೌಡಿ ಡೌಲ್ ಹೇಳ್ತಿ. ನಿಂದೂ ಬಗೆಹರಿತಳ ತಮ್ಮಾ… ಬಾ ಯಲ್ಲಮ್ಮನಗುಡ್ಡಕ್ಕೆ ಒಮ್ಮಿ… ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ನೀವು ಕುಡಿದಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ, ರಟ್ಟಾಯ್ತು ಸೀಕ್ರೆಟ್!
ಲಗೈರ್ ಸಿನಿಮಾ ಬಳಿಕ ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ತೆರೆಕಂಡಿದ್ದ ಲಗೈರ್ ಸಿನಿಮಾ ಯಶಸ್ಸು ಕಾಣಲಿಲ್ಲ. ಇದಾದ ತೆರೆಕಂಡ ಖುಷಿ, ದಿ ಫ್ಯಾಮಿಲಿ ಸ್ಟಾರ್ ಸಹ ಸದ್ದು ಮಾಡುವಲ್ಲಿ ವಿಫಲವಾದವು. ವಿಡಿ 12, ವಿಡಿ 13 ಎಂಬ ಹೆಸರಿಡದ ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದು, ಕನ್ನಡತಿ ರುಕ್ಮಿಣಿ ವಸಂತ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮನೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಮೆಟ್ಟಿಲಿನಿಂದ ಕೆಳಕ್ಕೆ ಜಾರಿ ಬಿದ್ದ ನಟ ವಿಜಯ್ ದೇವರಕೊಂಡ, ಹಾಡು ಪ್ರಮೋಶನ್ ವೇಳೆ ಘಟನೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.