ರೀಲ್ಸ್‌ ಮಾಡಿ ಐಶ್‌ಗೆ ಟಾಂಟ್‌ ನೀಡಿದ್ರಾ ನಿಮ್ರತಾ ಕೌರ್‌?

By Roopa Hegde  |  First Published Nov 11, 2024, 10:28 PM IST

ನಿಮ್ರತಾ ಕೌರ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಏನೋ ನಡಿತಾ ಇದೆ ಎಂಬ ರೂಮರ್ಸ್ ಇದೆ. ಅಭಿಷೇಕ್ – ಐಶ್ ದೂರವಾಗಲು ನಿಮ್ರತಾ ಕಾರಣ ಎಂಬ ಸುದ್ದಿ ಚರ್ಚೆಯಲ್ಲಿದೆ. ಈ ಮಧ್ಯೆ ನಿಮ್ರತಾ ರೀಲ್ಸ್ ಹೊಸ ಟ್ವಿಸ್ಟ್ ನೀಡಿದೆ. 
 


ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Bollywood actor Abhishek Bachchan) ಹಾಗೂ ನಟಿ ಐಶ್ವರ್ಯ ರೈ ಬಚ್ಚನ್ (actress Aishwarya Rai Bachchan) ಬೇರೆಯಾಗಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಸಿಕ್ಕಿ ಅನೇಕ ತಿಂಗಳಾಗಿದೆ. ಅಭಿಷೇಕ್ – ಐಶ್ ಬ್ರೇಕ್ ಅಪ್ ಗೆ ಮುಖ್ಯ ಕಾರಣ ದಸ್ವಿ ಸಿನಿಮಾ ನಟಿ ನಿಮ್ರತ್ ಕೌರ್ (Nimrat Kaur) ಎನ್ನಲಾಗ್ತಿದೆ. ಅಭಿಷೇಕ್ ಮತ್ತು ನಿಮ್ರತ್ ಕೌರ್ ಹತ್ತಿರವಾಗ್ತಿದ್ದಂತೆ ಐಶ್ ದೂರವಾದ್ರು ಎನ್ನುವ ಸುದ್ದಿ ಹರಿದಾಡ್ತಿದೆ. ಅಭಿಷೇಕ್ ಹಾಗೂ ಐಶ್ವರ್ಯ ರೈ ತಮ್ಮ ವಿಚ್ಛೇದನ ಬಗ್ಗೆ ಈವರೆಗೆ ಒಂದೇ ಒಂದು ಮಾತನಾಡಿಲ್ಲ. ನಟಿ ನಿಮ್ರತ್ ಕೌರ್ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ರೀಲ್ಸ್ ಒಂದನ್ನು ನಿಮ್ರತ್ ಮಾಡಿದ್ದು, ಅದು ಪರೋಕ್ಷವಾಗಿ ಐಶ್ವರ್ಯಗೆ ಟಾಂಟ್ ನೀಡಿದಂತಿದೆ.

ನಿಮ್ರತ್ ಕೌರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ರೀಲ್ಸ್ ನಲ್ಲಿ ನಿಮ್ರತ್ ಕೌರ್, ಟ್ರೆಂಡಿಂಗ್ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ. ನೆಲದ ಮೇಲೆ ಕುಳಿತಿರುವ ನಿಮ್ರತ್ ಕೌರ್, ಸ್ನೇಹ ಎಷ್ಟು ಗಟ್ಟಿಯಾಗಬೇಕು ಎಂದರೆ ಜನ ಅದನ್ನು ನೋಡಿ ಹೊಟ್ಟೆಕಿಚ್ಚು ಪಡಬೇಕು ಎಂಬ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ ನಿಮ್ರತ್ ಕೌರ್. ನನ್ನ ಹಾಗೂ ಕೆಸಿ (ಕರಮ್ ಚಂದ್) ಸ್ನೇಹ ಕೂಡ ಹಾಗೇ ಇದೆ. ನಿಮ್ಮ ಬೆಸ್ಟ್ ಫ್ರೆಂಡ್ಸ್ ಗೆ ಟ್ಯಾಗ್ ಮಾಡಿ ಎಂದು ನಿಮ್ರತಾ ಕೌರ್ ಶೀರ್ಷಿಕೆ ಹಾಕಿದ್ದಾರೆ. ನಿಮ್ರತಾ ಕೌರ್ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಫ್ಯಾನ್ಸ್, ನಿಮ್ರತಾ ಕೌರ್ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. 

Tap to resize

Latest Videos

undefined

ಕ್ಯಾಮರಾ ಕಾಣ್ತಿದ್ದಂತೆ ಟೆನ್ಷನ್ ನಲ್ಲಿ ಕೊಹ್ಲಿ! ವಿಲನ್ ಆದ ಅನುಷ್ಕಾ

ನಿಮ್ರತಾ ಕೌರ್ ಈ ರೀಲ್ಸ್ ನೋಡಿದ ಕೆಲವರು, ಇದು ಐಶ್ವರ್ಯ ರೈಗೆ ಹೇಳಿದ್ದಾರೆ ಎನ್ನುತ್ತಿದ್ದಾರೆ. ಅಭಿಷೇಕ್ ಹಾಗೂ ನಿಮ್ರತಾ ಸ್ನೇಹ ನೋಡಿ ಐಶ್ವರ್ಯ ಬೇಸರಪಟ್ಟುಕೊಂಡಿದ್ದಾರೆ ಎನ್ನುತ್ತಿದ್ದಾರೆ. ನಿಮ್ರತಾ ಕೌರ್ ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಸ್ಟೇಟಸ್ ರಿವೀಲ್ ಮಾಡಿದ್ದರು. ನಾನು ಸಿಂಗಲ್ ಎನ್ನುವ ಮೂಲಕ ತಮ್ಮ ಮುಂದಿನ ಗುರಿ, ಒಂಟಿಯಾಗಿ ಒಂದಿಷ್ಟು ಜಾಗಗಳಿಗೆ ಹೋಗೋದು ಎಂದಿದ್ದರು. 

ಅಭಿಷೇಕ್ ಬಚ್ಚನ್ ಕೂಡ ತಮ್ಮ ಉಂಗುರವನ್ನು ತೋರಿಸಿ ನಾವಿನ್ನು ಬೇರೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಐಶ್ ಕೂಡ ತಮ್ಮ ಕೈನಲ್ಲಿದ್ದ ಉಂಗುರವನ್ನು ತೋರಿಸಿದ್ದರು. ಆದ್ರೆ ಕೆಲ ತಿಂಗಳಿಂದ ಐಶ್ವರ್ಯ ರೈ ಹಾಗೂ ಅಭಿಷೇಕ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹಾಗಾಗಿ ಇಬ್ಬರು ದೂರವಾಗಿದ್ದಾರೆ ಎನ್ನಲಾಗ್ತಿದೆ.

ಅನಂತ್ ಅಂಬಾನಿ ವಿವಾಹಕ್ಕೆ ಬೇರೆಯಾಗಿ ಬಂದ ಅಭಿಷೇಕ್ ಹಾಗೂ ಐಶ್ವರ್ಯ, ವಿಚ್ಛೇದನದ ಸುದ್ದಿಗೆ ಪುಷ್ಠಿ ನೀಡಿದ್ದರು. ಇಬ್ಬರೂ ಬೇರೆಯಾಗಿ ವಾಸವಾಗಿದ್ದಾರೆ ಎಂಬುದಕ್ಕೆ ಐಶ್ವರ್ಯ ರೈ ಬರ್ತ್ ಡೇ, ಗಣೇಶೋತ್ಸವದ ಕಾರ್ಯಕ್ರಮ ಸಾಕ್ಷ್ಯವಾಗಿತ್ತು. ಮಗಳ ಜೊತೆ ಒಂದಾದ್ಮೇಲೆ ಒಂದು ವಿದೇಶಿ ಟ್ರಿಪ್ ಮಾಡಿದ್ದ ಐಶ್ವರ್ಯ ಜೊತೆ ಎಲ್ಲಿಯೂ ಅಭಿಷೇಕ್ ಕಾಣಿಸಿಕೊಂಡಿಲ್ಲ. ಇಬ್ಬರೂ ತಮ್ಮ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಜೊತೆ ಐಶ್ ಹೊಸ ಸಿನಿಮಾ ಮಾಡ್ತಾರೆ ಎಂಬ ಸುದ್ದಿಯೂ ಈ ಮಧ್ಯೆ ಹರಿದಾಡ್ತಿದೆ. 

ಪುಷ್ಪ 2 ಸಿನೆಮಾದ ಒಂದೇ ಹಾಡಿಗೆ 1 ಕೋಟಿ ಪಡೆದ ಕನ್ನಡತಿ ಶ್ರೀಲೀಲಾ!

ಐಶ್ವರ್ಯ ಹಾಗೂ ಅಭಿಷೇಕ್ ಪ್ರೀತಿಸಿ ಮದುವೆಯಾಗಿದ್ದಾರೆ. ಬಿಗ್ ಬಿ ಮನೆಗೆ ಐಶ್ 2007ರಲ್ಲಿ ಸೊಸೆಯಾಗಿ ಎಂಟ್ರಿ ನೀಡಿದ್ರು. ಮದುವೆ ನಂತ್ರವೂ ಸಿನಿಮಾಗಳಲ್ಲಿ ನಟಿಸ್ತಿದ್ದ ಐಶ್ವರ್ಯ, ಆರಾಧ್ಯ ಹುಟ್ಟಿದಾಗ ತಮ್ಮ ವೃತ್ತಿಗೆ ಬ್ರೇಕ್ ಪಡೆದಿದ್ದರು. ಈಗ ಮತ್ತೆ ಸಿನಿಮಾದಲ್ಲಿ ಐಶ್ವರ್ಯ ಬ್ಯುಸಿಯಿದ್ದಾರೆ. ಅಭಿಷೇಕ್ ಹಾಗೂ ನಿಮ್ರತಾ ಕೌರ್, ದಸ್ವಿ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 
 

click me!