'ಲೈಫ್‌ನಲ್ಲಿ ಸರಿಯಾದ ಟೈಮ್‌ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಯಂಗ್‌ಸ್ಟರ್ಸ್ ಗೆ ಏನಾದರೂ ಸಲಹೆ ನೀಡುತ್ತೀರಾ' ಎಂಬ ಪ್ರಶ್ನೆಗೆ ನಟಿ 'ನಾನೇ ಸ್ವತಃ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಜೀವನ ಎಂದಮೇಲೆ ಇವೆಲ್ಲಾ ಸಾಮಾನ್ಯ' ಎಂದಿದ್ದಾರೆ ನಟಿ ಸಮಂತಾ.
ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು, ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ತಮ್ಮ ವೈಯಕ್ತಿಕ ಸಮಸ್ಯೆಯೊಂದನ್ನು ಹಂಚಿಕೊಂಡಿದ್ದಾರೆ. ಸಮಂತಾ ಸದ್ಯಕ್ಕೆ ಅಮೆರಿಕಾದಲ್ಲಿ ವಾಸವಿದ್ದು, ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್‌ಗಳೊಂದಿಗೆ ಸಂವಾದ ಮಾಡುತ್ತಾರೆ. ಇತ್ತೀಚೆಗೆ ಅವರು ತಮ್ಮ ಚಿತ್ರೀಕರಣಗಳಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.
ಮೆಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ, ಇದಕ್ಕಾಗಿ ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮವೊಂದರ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದ ಸಮಂತಾ ಹಲವರಿಂದ ಪ್ರಶ್ನೆಗಳನ್ನು ಎದುರಿಸಿದರು. ಅವಕ್ಕೆಲ್ಲ ತಮಗೆ ತೋಚಿದಂತೆ ಸೂಕ್ತ ಉತ್ತರ ನೀಡುತ್ತಿದ್ದ ನಟಿ ಸಮಂತಾ, ವೈಯಕ್ತಿಕ ಸಮಸ್ಯೆಗಳನ್ನೂ ಸಹ ಸಮಚಿತ್ತದಿಂದ ಸ್ವೀಕರಿಸಿ ಅದಕ್ಕೂ ಸಹ ಶಾಂತ ಮನಸ್ಸಿನಿಂದ ಉತ್ತರಿಸಿದರು.
"ನಿಮ್ಮ ಸ್ಕಿನ್ ಅಷ್ಟೊಂದು ಕ್ಲಿಯರ್ ಆಗಿದೆ ಹೇಗೆ" ಎಂಬ ಫ್ಯಾನ್ ಒಬ್ಬರ ಪ್ರಶ್ನೆಗೆ ಉತ್ತರಿಸಿದ ಸಮಂತಾ, 'ಇಲ್ಲ, ನನ್ನ ಸ್ಕಿನ್ ಸದ್ಯ ಚೆನ್ನಾಗಿಲ್ಲ, ಕಾಯಿಲೆಗೆ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿರುವ ಕಾರಣಕ್ಕೆ ನನ್ನ ಸ್ಕಿನ್ ಕ್ಲಾರಿಟಿ ಹಾಳಾಗಿದೆ. ನಾನು ನನ್ನ ಟ್ರೀಟ್‌ಮೆಂಟ್ ಕಾರಣಕ್ಕೆ ಸ್ಟಿರಾಯಿಡ್ ಉಪಯೋಗ ಮಾಡಬೇಕಾಗಿದೆ. ಹೀಗಾಗಿ ಸ್ಕಿನ್ ತೀರಾ ಹಾಳಾಗಿದೆ. ಹೀಗಾಗಿ ನಾನು 'ಫಿಲ್ಟರ್' ಉಪಯೋಗಿಸುತ್ತಿದ್ದೇನೆ. ಶೂಟಿಂಗ್ ಕಾರಣಕ್ಕೆ ಅದು ನನಗೆ ಅನಿವಾರ್ಯ' ಎಂದಿದ್ದಾರೆ ನಟಿ ಸಮಂತಾ.
ಕಾಂತಾರ 2 ಯಾರಾದರೂ ಲೀಕ್ ಮಾಡಿದರೆ ಅನ್ನುವ ಆತಂಕವಿದೆ: ರಿಷಬ್ ಶೆಟ್ಟಿ
'ಲೈಫ್‌ನಲ್ಲಿ ಸರಿಯಾದ ಟೈಮ್‌ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಯಂಗ್‌ಸ್ಟರ್ಸ್ ಗೆ ಏನಾದರೂ ಸಲಹೆ ನೀಡುತ್ತೀರಾ' ಎಂಬ ಪ್ರಶ್ನೆಗೆ ನಟಿ 'ನಾನೇ ಸ್ವತಃ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಜೀವನ ಎಂದಮೇಲೆ ಇವೆಲ್ಲಾ ಸಾಮಾನ್ಯ' ಎಂದಿದ್ದಾರೆ. ಜತೆಗೆ' ಎಲ್ಲರಿಗೂ ಗಣೇಶ್ ಚತುರ್ಥಿ ಶುಭಾಶಯಗಳು' ಎಂದು ಅಮೆರಿಕಾದಲ್ಲೇ ಕುಳಿತು ಹಾರೈಸಿದ್ದಾರೆ. ತಮ್ಮ ಜೀವನದಲ್ಲಿ 'ಲವ್, ಮದುವೆ, ಬ್ರೇಕಪ್' ಎಲ್ಲವನ್ನೂ ಅನುಭವಸಿರುವ ನಟಿ ಸಮಂತಾ ಈ ಬಗ್ಗೆ ಆಗಾಗ ಮಾತನಾಡಿ ತಮ್ಮ ಭಾರವಾದ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.
ಭಾರತ ಅಥವಾ ಇಂಡಿಯಾ ಚರ್ಚೆ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ಬಾಯ್ಬಿಟ್ಟು ಹೇಳಿದ್ದೇನು?
ಅಂದಹಾಗೆ, ನಟಿ ಸಮಂತಾ ಇತ್ತೀಚೆಗೆ ನಟಿಸಿದ್ದ ಖುಷಿ, ಶಾಕುಂತಲ ಹಾಗೂ ಯಶೋದಾ ಚಿತ್ರಗಳು ಅಂದುಕೊಂಡಷ್ಟು ಸದ್ದು ಮಾಡಿಲ್ಲ. ಅದಕ್ಕೂ ಮೊದಲು ಅಲ್ಲು ಅರ್ಜುನ್-ರಶ್ಮಿಕಾ ಜೋಡಿಯ 'ಪುಷ್ಪಾ' ಚಿತ್ರದಲ್ಲಿ ಸಮಂತಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಆ ಹಾಡು ಭಾರತೀಯ ಚಿತ್ರಂಗವನ್ನೂ ಮೀರಿ ಜಗತ್ತಿನ ಹಲವು ಕಡೆ ಭಾರೀ ಸೆನ್ಸೇಷನ್ ಸೃಷ್ಟಿಸಿತ್ತು. ಬಳಿಕ ಅವರಿಗೆ ಮೆಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.