ಪತಿಯ ಮನೆಗೆಲಸಗಳ ಪಟ್ಟಿ ಕೊಟ್ಟ ನಟಿ ಕತ್ರಿನಾ: ಆಹಾ! ನೀವೇ ಪುಣ್ಯವಂತರು ಅಂದ ಮಹಿಳೆಯರು

By Suvarna News  |  First Published Sep 21, 2023, 9:36 PM IST

ಪತಿಯ ಮನೆಗೆಲಸಗಳ ಪಟ್ಟಿ ಕೊಟ್ಟ ನಟಿ ಕತ್ರಿನಾ: ಆಹಾ! ನೀವೇ ಪುಣ್ಯವಂತರು ಅಂತಿದ್ದಾರೆ ಮಹಿಳೆಯರು
 


2020ರ ಡಿ.9ರಂದು ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಹಸೆಮಣೆಯೇರಿದೆ. ಯಾವುದೇ ಸಿನಿಮಾದಲ್ಲೂ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ (Vicky Kaushal) ಜೋಡಿಯಾಗಿ ನಟಿಸಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅವರ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ.  ಕತ್ರಿನಾ ಕೈಫ್ (Katrina Kaif) ಅವರೊಂದಿಗಿನ ವೈವಾಹಿಕ ಜೀವನಕ್ಕಾಗಿ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಮದುವೆಯ ನಂತರದ ಜೀವನದ ಬಗ್ಗೆ ನಟ ಹಲವಾರು ಬಾರಿ ಇದಾಗಲೇ ಮಾತನಾಡಿದ್ದಾರೆ. ತಮ್ಮ ಜೀವನದ ಕುರಿತು ಕೆಲವೊಂದು ವಿಷಯಗಳನ್ನು  ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.  ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಅವರೊಂದಿಗಿನ ವಿವಾಹವು ತನಗೆ ಕಲಿಸಿದ ಒಂದು ವಿಷಯವನ್ನು ಬಹಿರಂಗಪಡಿಸಿದ್ದರು.

 ಯಾವುದೇ ದಾಂಪತ್ಯವು (Married Life) ಸುಗಮವಾಗಿ ನಡೆಯಲು ತಾಳ್ಮೆ (Patience) ಬಹಳ ಮುಖ್ಯ ಮತ್ತು ಎಲ್ಲವನ್ನೂ ಒಪ್ಪಿಕೊಳ್ಳುವುದು ಇಬ್ಬರಿಗೂ ಸುಲಭವಲ್ಲ. ಮದುವೆಯಾಗಿರುವ ಈ ವರ್ಷಗಳಲ್ಲಿ  ವಿಕ್ಕಿ ಕೌಶಕ್​, ಮದುವೆಯಾದ ಮೇಲೆ  ತಿಳಿವಳಿಕೆ ಮತ್ತು ಪ್ರಬುದ್ಧತೆ ಇರುತ್ತದೆ ಎಂಬುದನ್ನು ಅರಿತಿದ್ದಾರೆ.  ಸಂಗಾತಿಯೊಂದಿಗೆ ಒಟ್ಟಾಗಿ ವಿಕಸನಗೊಳ್ಳಲು ತಾಳ್ಮೆ ಮುಖ್ಯ ಎಂದು ವಿಕ್ಕಿ ಕಲಿತಿರುವುದಾಗಿ ತಿಳಿಸಿದ್ದಾರೆ. 'ನಾನು ಯಾವುದೇ ಕ್ಷಣದಲ್ಲಿ ಗಂಡನ ಅತ್ಯುತ್ತಮ ಆವೃತ್ತಿಯಾಗಲು ಪ್ರಯತ್ನಿಸುತ್ತೇನೆ. ನಾನು ನನ್ನ ಹೆಂಡತಿಯನ್ನು (wife) ಪ್ರೀತಿಸುತ್ತೇನೆ, ಕುಟುಂಬವನ್ನು ಪ್ರೀತಿಸುತ್ತೇನೆ, ಜೀವನವನ್ನು ಪ್ರೀತಿಸುತ್ತೇನೆ. ಆದರೆ ನಾನು ಇತರ ಮನುಷ್ಯನಂತೆ ನನ್ನಲ್ಲೂ ಹಲವು ದೋಷಗಳಿವೆ,' ಎಂದಿದ್ದರು. ಇದರ ಹೊರತಾಗಿಯೂ  ಮದುವೆಯಾಗಿ ಮೂರು ವರ್ಷ ಆಗುತ್ತಾ ಬಂದರೂ ಆಗಾಗ್ಗೆ ಈ ಜೋಡಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕವೇ ಪ್ರಚಾರಕ್ಕೆ ಬಂದವರು.  

Tap to resize

Latest Videos

ಮತ್ತೆ ಮತ್ತೆ ವಿಕ್ಕಿ ಕೌಶಲ್, ಕತ್ರೀನಾ ಡಿವೋರ್ಸ್ ಸುದ್ದಿ ಹರಡುತ್ತೆ? ವಿಕ್ಕಿ ದಾಂಪತ್ಯದ ಗುಟ್ಟಿದು!

ಗಾಸಿಪ್​ಗಳಿಗೆ ತಲೆಕೆಡಿಸಿಕೊಳ್ಳದ ಜೋಡಿ ದಾಂಪತ್ಯ ಜೀವನದ ಸುಖವನ್ನು ಅನುಭವಿಸುತ್ತಾ ಬಂದಿದೆ. ಈ ಸಂದರ್ಭದಲ್ಲಿ ವಿಕ್ಕಿ ಕೌಶಲ್​ ಮನೆಗೆಲಸ ಮಾಡುವ ಬಗ್ಗೆ ಕತ್ರಿನಾ ಮಾತನಾಡಿದ್ದಾರೆ. ಇದೇನಪ್ಪಾ, ಸೆಲೆಬ್ರಿಟಿಗಳ ಮನೆಯಲ್ಲಿ ಕೆಲಸದವರು ಇರಲ್ವಾ ಎಂದು ಕೇಳಬಹುದು. ಕೈಗೊಬ್ಬ, ಕಾಲಿಗೊಬ್ಬ ಆಳು ಇರುವುದು ಸಹಜ ಎನ್ನುತ್ತಾರೆ. ಆದರೆ ಕೆಲವು ನಟ-ನಟಿಯರು ತಮ್ಮ ಕೆಲಸ ತಾವೇ ಮಾಡಿಕೊಳ್ಳುವಲ್ಲಿ ನಿಸ್ಸೀಮರು. ಅದರಂತೆಯೇ, ಈಗ ಕತ್ರಿನಾ ಮಾತನಾಡಿದ್ದಾರೆ. ತಮ್ಮ ಪತಿ ಹೇಗೆ ಮನೆಗೆಲಸದಲ್ಲಿ ನೆರವಾಗುತ್ತಾರೆ ಎನ್ನುವ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. 

ವಿಕ್ಕಿ  ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಾರೆ,  ಫ್ಯಾನ್‌ಗಳನ್ನು ಸ್ವಚ್ಛಗೊಳಿಸುವುದು ಕೂಡ ಆತನದ್ದೇ ಕೆಲಸ.  ಆಗಾಗ್ಗೆ  ನೆಲವನ್ನೂ ಗುಡಿಸುತ್ತಾನೆ ಎಂದು ಕತ್ರಿನಾ ಹೇಳಿದ್ದು, ಈ ಹೇಳಿಕೆ ಸಕತ್​ ವೈರಲ್​ ಆಗುತ್ತಿದೆ.  ವಿಕ್ಕಿ ಕೌಶಲ್ ಒಬ್ಬ ಶ್ರೇಷ್ಠ ನಟ ಮತ್ತು ಡ್ಯಾನ್ಸರ್ ಮಾತ್ರವಲ್ಲದೆ ಜವಾಬ್ದಾರಿಯುತ ಪತಿಯೂ ಹೌದು ಎಂದಿರುವ ಕತ್ರೀನಾ, ಅವನು ನನ್ನನ್ನು ಕೆಲಸದಲ್ಲಿ ಹುರಿದುಂಬಿಸುತ್ತಾನೆ, ನಾನು ಏನಾದರೂ ಟೆನ್ಷನ್​ನಲ್ಲಿ ಇದ್ದಾಗ ನನ್ನನ್ನು  ಶಾಂತಗೊಳಿಸಲು ಸಹಾಯ ಮಾಡುತ್ತಾನೆ ಎಂದು ಬಣ್ಣಿಸಿದ್ದಾರೆ,

ಆರನೇ ಗಂಡಿಗೆ ಬಲೆ ಬೀಸಿದ್ತಾಳೆ ರಾಖಿ, ಹಣ ಪಡೆದು ಕೊಲ್ಲೋದೇ ಪ್ಲ್ಯಾನ್! ಶಾಕಿಂಗ್​ ವಿಷ್ಯ ರಿವೀಲ್​

 ಎಲ್ಲಾ ಮಹಿಳೆಯರಿಗೂ ಇದೇ ರೀತಿ ಪತಿ ಸಿಗಬೇಕು ಎಂದೇ  ಬಯಸುತ್ತಾರೆ ಎಂದಿರುವ ನಟಿ, ತಮ್ಮ ಪತಿ ಮಾಡುವ ಮನೆಕೆಲಸದ ದೊಡ್ಡ ಪಟ್ಟಿಯನ್ನೇ  ಮಾಡಿದ್ದಾರೆ. ಇವೆಲ್ಲಾ ಕೆಲಸಗಳ ಜೊತೆ ಉತ್ತಮವಾದ ಚಹಾವನ್ನು ಮಾಡುತ್ತಾನೆ ಎಂದಿದ್ದಾರೆ.  ಮನೆಕೆಲಸಗಳು ಲಿಂಗ-ನಿರ್ದಿಷ್ಟವಾಗಿಲ್ಲ,  ಸ್ಟೀರಿಯೊಟೈಪ್‌ಗಳ ಆಧಾರದ ಮೇಲೆ ಕಾರ್ಯಗಳನ್ನು ನಿಯೋಜಿಸುವುದು  ಅನ್ಯಾಯದ ಸಂಗತಿ.  ಪ್ರತಿಯೊಬ್ಬರೂ ತಮ್ಮ ಲಿಂಗವನ್ನು ಲೆಕ್ಕಿಸದೆ, ಸ್ವಚ್ಛ ಮತ್ತು ಸಂಘಟಿತ ಮನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹಂಚಿಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ ನಟಿ. ಇಂಥ ಪತಿಯನ್ನು ಪಡೆದ ನೀವೇ ಪುಣ್ಯವಂತರು ಅಂತಿದ್ದಾರೆ ಮಹಿಳಾ ಫ್ಯಾನ್ಸ್​. 

click me!