* ಕೊನೆಗೂ ಕಂಗನಾ ವಿರುದ್ಧ ದಾಖಲಾಯ್ತು ಎಫ್‌ಐಆರ್
* ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ
* ಕಂಗನಾ ವಿರುದ್ಧ ಸಿಖ್ ಸಮುದಾಯದ ದೂರು
* ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು
ಮುಂಬೈ(ನ. 23) ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ (Bollywood) ಕಂಗನಾ ರಣಾವತ್ (Kangana Ranaut)ಮೇಲೆ ಇದೀಗ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ (hurting religious sentiments) ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಮುಂಬೈ (Mumbai)ಪೊಲೀಸರು ನಟಿ ಕಂಗನಾ ರಣಾವತ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮರ್ ಜೀತ್ ಸಿಂಗ್ ಸಂಧು ಎಂಬುವರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಕೇಸ್ ಬುಕ್ ಆಗಿದೆ.
undefined
ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ (SGSSGC) ಸದಸ್ಯ ಅಮರ್ಜಿತ್ ಸಿಂಗ್ ಸಂಧು ಅವರು ದೂರು ದಾಖಲಿಸಿದ್ದಾರೆ, ಕಂಗನಾ ವಿರುದ್ಧ ಐಪಿಸಿಯ ಸೆಕ್ಷನ್ 295-A ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಪ್ರೀಂ ಕೌನ್ಸಿಲ್ ನವಿ ಮುಂಬೈ ಗುರುದ್ವಾರಸ್ ಅಧ್ಯಕ್ಷ ಜಸ್ಪಾಲ್ ಸಿಂಗ್ ಸಿಧು ನಟಿ ವಿರುದ್ಧ ದೂರು ದಾಖಲಿಸಿದ್ದರು. ಖಾರ್ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿತ್ತು. ಫೇಸ್ ಬುಕ್ ಮತ್ತು ಇಸ್ಟಾ ಗ್ರಾಮ್ ನಲ್ಲಿ (Social Media) ಕಂಗನಾ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ್ದಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಪ್ರಶ್ನೆಗಳಿಗೆ ಉತ್ತರಿಸಿದರೆ ಪದ್ಮಶ್ರೀ ವಾಪಸ್ ಮಾಡುವೆ
ಇದಾದ ಮೇಲೆ ಶಿರೋಮಣಿ ಅಕಾಲಿದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ನೇತೃತ್ವದ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (ಡಿಎಸ್‌ಜಿಎಂಸಿ) ನಿಯೋಗವು ಕಂಗನಾ ರಣಾವತ್ ವಿರುದ್ಧ ದೂರು ನೀಡಲು ಸೋಮವಾರ ಮುಂಬೈಗೆ ಆಗಮಿಸಿತ್ತು. ಸಿರ್ಸಾ ಅವರು ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಸ್ಲೆ ಪಾಟೀಲ್ ಮತ್ತು ಮುಂಬೈ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ) ಸಂದೀಪ್ ಪಿ ಕಾರ್ಣಿಕ್ ಅವರನ್ನು ಭೇಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಕಂಗನಾ ರಣಾವತ್ ಅವರು ತಮ್ಮ ಪೋಸ್ಟ್‌ನಲ್ಲಿ 'ಖಲಿಸ್ತಾನಿ ಭಯೋತ್ಪಾದಕರು ಸರ್ಕಾರದ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಹಿಂದೊಮ್ಮೆ ಮಹಿಳಾ ಪ್ರಧಾನಿ ಇವರ ಹುಟ್ಟು ಅಡಗಿಸಿದ್ದರು ಎಂದು ಕಂಗನಾ ಬರೆದುಕೊಂಡಿದ್ದು ವಿವಾದದ ಕಿಡಿ ಹೊತ್ತಲು ಮುಖ್ಯ ಕಾರಣ.
ಖಲಿಸ್ತಾನಿಗಳನ್ನು ಮಟ್ಟ ಹಾಕುವುದಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಮಹಿಳಾ ಪ್ರಧಾನಿ.. ಭಾರತವನ್ನು ಇಬ್ಭಾಗ ಮಾಡುವುದಕ್ಕೆ ನೋಡುತ್ತಿದ್ದವರನ್ನು ಅವರು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ತುಳಿದಿದ್ದರು ಎಂದು ಬರೆದಿದ್ದು ವಿವಾದ ಎಬ್ಬಿಸಿತ್ತು.
1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದೇ ನಿಜವಾದ ಸ್ವಾತಂತ್ರ್ಯ (Independence) ಎಂಬ ತಮ್ಮ ಹೇಳಿಕೆ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅವಮಾನ ಎಂಬ ಟೀಕೆಗಳಿಗೆ ಇದೀಗ ನಟಿ ಕಂಗನಾ ರಾಣಾವತ್ (kangana Ranaut) ತಿರುಗೇಟು ನೀಡಿದ್ದರು. ಭಾರತದಲ್ಲಿ ಅಸಂಖ್ಯ ಅಪರಾಧಗಳಿಗೆ ಕಾರಣವಾದ ಬ್ರಿಟಿಷರನ್ನು (British), ಘಟನೆಗೆ ಹೊಣೆ ಮಾಡದೇ ಇರುವುದು ಕೂಡಾ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ (Freedom Fighters) ಮಾಡಿದ ಅವಮಾನ ಎಂದು ವ್ಯಾಖ್ಯಾನಿಸಿದ್ದರು.
ಕಂಗನಾ ಮತ್ತು ಕಾಂಟ್ರವರ್ಸಿ ಒಂದರ ಪಕ್ಕ ಒಂದು ಸಾಗುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟದ ಸಂಬಂಧವೂ ಮಾತನಾಡಿದ್ದ ಕಂಗನಾ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಸಿನಿಮಾ ಲೋಕದಲ್ಲಿ ಕಂಗನಾ ದೊಡ್ಡ ಹೆಸರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅಷ್ಟೇ ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿದ್ದರು. ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡು ಹಿಂದೆ ಸುದ್ದಿ ಮಾಡಿದ್ದರು.