ಸ್ಟಾರ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ದೂರವಾಗಿ ಹಲವು ತಿಂಗಳೇ ಕಳೆದಿವೆ. ಇದರ ಹೊರತಾಗಿಯೂ ನಾಗಚೈತನ್ಯ ಅವರ ಟ್ಯಾಟೂವನ್ನು ನಟಿ ಸಮಂತಾ ಹಾಗೆಯೇ ಇಟ್ಟುಕೊಂಡಿದ್ದಾರೆ. ಫ್ಯಾನ್ಸ್ ಹೇಳುತ್ತಿರೋದೇನು?
ಟ್ಯಾಟೂ ಕ್ರೇಜ್ (Tatoo Craze) ಅನೇಕ ಮಂದಿಯಲ್ಲಿ ಹೆಚ್ಚಿದೆ. ಅದರಲ್ಲಿಯೂ ಹೆಚ್ಚಾಗಿ ತಮ್ಮ ಪ್ರೀತಿ ಪಾತ್ರರ ಹೆಸರನ್ನು ಬರೆಸಿಕೊಳ್ಳುವುದು ರೂಢಿ. ಅದರಂತೆ ನಟಿ ಸಮಂತಾ ಕೂಡ ತಮ್ಮ ಜೀವದ ಗೆಳೆಯನಾಗಿದ್ದ ನಾಗ ಚೈತನ್ಯ ಅವರ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರ ಸಂಬಂಧ ಮುರಿದು ಬಹಳ ತಿಂಗಳುಗಳೇ ಕಳೆದಿವೆ. ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದೆ. ಶಾಕುಂತಲಂ (Shakuntalam) ಪ್ರಚಾರ ನಿಮಿತ್ತ ಸಂದರ್ಶನಗಳನ್ನು ನೀಡುತ್ತಿರೋ ಸಮಂತಾ, ಪತಿ ನಾಗ ಚೈತನ್ಯ ಅವರ ಬಗ್ಗೆಯೂ ಮಾತನಾಡಿದ್ದರು. ಅವರಿಂದ ತಾವು ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ನಟಿ, ನನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದಿದ್ದರು. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ, ಓ ದೇವರೇ, ನಾನು ಅದನ್ನು ಗಟ್ಟಿಯಾಗಿ ಹೇಳಬೇಕೇ?' ಎಂದು ಕೇಳಿದ್ದರು. ಇದು ಅವರಿಗೆ ನಾಗ ಚೈತನ್ಯ ಅವರ ಮೇಲೆ ಇನ್ನೂ ಇರುವ ಪ್ರೀತಿಯನ್ನು ತೋರಿಸುತ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದರು.
ಇದೀಗ ಅದು ನಿಜ ಎನ್ನುವಂತೆ ತೋರುತ್ತಿದೆ. ಏಕೆಂದರೆ, ನಾಗ ಚೈತನ್ಯ (Naga Chaitanya) ಅವರ ಜೊತೆ ಸಂಬಂಧ ಮುರಿದುಕೊಂಡು ಬಹಳ ತಿಂಗಳು ಆಗಿದ್ದರೂ, ಸಮಂತಾ ಅವರ ಮೈಮೇಲೆ ಇನ್ನೂ ನಾಗ ಚೈತನ್ಯ ಸಹಿಯ ಕುರುಹು ಬಾಕಿ ಇದೆ. ಅವರ ಹೆಸರಿನ ಟ್ಯಾಟೂ ಸೊಂಟದ ಮೇಲ್ಭಾಗದಲ್ಲಿ ಕಾಣಬಹುದು. ಸಮಂತಾ ಅವರು ನಾಗ ಚೈತನ್ಯ ಸಿಗ್ನೇಚರ್ನ್ನು ಮೈಮೇಲೆ ಟ್ಯಾಟೂ ಮಾಡಿಕೊಂಡಿದ್ದರು. ಡಿವೋರ್ಸ್ ಆಗಿ ಇಷ್ಟು ಸಮಯವಾದರೂ ನಟಿ ಅದನ್ನು ಇನ್ನೂ ತೆಗೆದಿಲ್ಲ ಎನ್ನುವುದು ಈಗ ಬೆಳಕಿಗೆ ಬಂದಿದೆ. ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಒಟ್ಟಿಗೆ ಇದ್ದರು, ಸ್ನೇಹಿತರಾಗಿ ದಂಪತಿಯಾಗಿದ್ದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದನದ ಸುದ್ದಿ ಹೊರ ಬಿದಿತ್ತು. ಈಗ ಇಬ್ಬರೂ ಕಿತ್ತಾಡಿಕೊಳ್ಳುತ್ತಿರುವ ನಡುವೆಯೇ ಟ್ಯಾಟೂ ಸದ್ದು ಮಾಡುತ್ತಿದೆ.
ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್
ಹೀಗಿರುವಾಗಲೇ ಸಮಂತಾ (Samantha) ಹಚ್ಚೆ ವಿಚಾರ ಚರ್ಚೆಯಲ್ಲಿದೆ. ಅಷ್ಟಕ್ಕೂ ಈ ಟ್ಯಾಟೂ ವಿಷಯ ಬೆಳಕಿಗೆ ಬಂದಿರುವುದು ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್’ ಸೀರಿಸ್ ಪ್ರೀಮೀಯರ್ ಶೋ ವೀಕ್ಷಣೆಗೆ ಅವರಿಗೆ ಆಹ್ವಾನ ಬಂದ ಸಂದರ್ಭದಲ್ಲಿ. ಸಮಂತಾ ಅವರು ಲಂಡನ್ಗೆ ತೆರಳಿದ್ದರು. ಈ ವೇಳೆ ತೆಗೆಸಿದ ಫೋಟೋ ವೈರಲ್ ಆಗಿದೆ. ಇದರಲ್ಲಿ ನಾಗ ಚೈತನ್ಯ ಸಹಿ ಇರುವ ಟ್ಯಾಟು ಕಾಣಿಸಿದೆ. ಇದನ್ನು ತೆಗೆಸುವಂತೆ ಅಭಿಮಾನಿಗಳು ಕೋರುತ್ತಿದ್ದಾರೆ.
ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಬೆನ್ನಿನ ಭಾಗದಲ್ಲಿ ವೈಎಂಸಿ ಎಂಬ ಟ್ಯಾಟೂ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’. ಈ ಸಿನಿಮಾ ರಾತ್ರೋರಾತ್ರಿ ಸಮಂತಾ ಅವರನ್ನು ಸ್ಟಾರ್ ಆಗಿ ಮಾಡಿತು. ಮತ್ತೊಂದು ಟ್ಯಾಟೂನಲ್ಲಿ ನಾಗ ಚೈತನ್ಯ ಅವರ ಸಹಿ ಇದೆ. ಸಾಕಷ್ಟು ಫೋಟೋಶೂಟ್ಗಳಲ್ಲಿ ಈ ಸಹಿ ಎದ್ದು ಕಾಣಿಸಿದೆ. ಈಗಲೂ ಈ ಟ್ಯಾಟೂ ಹಾಗೆಯೇ ಇದೆ. ವಿಚ್ಛೇದನ ಪಡೆದಿದ್ದರೂ ಸಮಂತಾ ಟ್ಯಾಟೂ ಮಾತ್ರ ಹಾಗೆಯೇ ಇಟ್ಟುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗಿದೆ. ಮೇಡಂ ಅದನ್ನು ತೆಗೆಸಿ ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಅವರನ್ನು ಪ್ರೀತಿಸುತ್ತಿದ್ದಾಗ ಆರ್ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇನ್ನು, ನಯನತಾರಾ ಪಿಡಿ (ಪ್ರಭುದೇವ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ, ಇವೆರಡೂ ಸಂಬಂಧ ಉಳಿದಿಲ್ಲ. ಲೇಸರ್ ಸಹಾಯದಿಂದ ಇಬ್ಬರೂ ಈ ಟ್ಯಾಟೂ ತೆಗೆಸಿ ಹಾಕಿದ್ದರು. ಆದರೆ, ಸಮಂತಾ ಆ ರೀತಿ ಮಾಡಿಲ್ಲ.
Twinkle Khanna: ಹೊಟ್ಟೆಯೊಳಗೆ ಫುಲ್ ಗ್ಯಾಸ್ ಇದ್ದಾಗ್ಲೇ ಶಾರುಖ್ ಎತ್ತಿಕೊಂಡು ಬಿಟ್ರಪ್ಪೋ...
ಸಮಂತಾ ಅವರ ಶಾಕುಂತಲಂ ಹಾಗೂ ಯಶೋದಾ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾಗಳೆರಡೂ ಕೂಡಾ ದೊಡ್ಡ ಹಿಟ್ ಆಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಶಾಕುಂತಲಂ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಹೊರಹಾಕಿದ್ದರು.