ವಿರಾಟ್ ಕೊಹ್ಲಿ ಮಗಳ ಜೊತೆ ಡೇಟಿಂಗ್ ಪ್ರಸ್ತಾಪಿಸಿದ್ದ ಪುಟ್ಟ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ ಕಿಡಿ

Published : Apr 21, 2023, 05:53 PM ISTUpdated : Apr 24, 2023, 04:32 PM IST
ವಿರಾಟ್ ಕೊಹ್ಲಿ ಮಗಳ ಜೊತೆ ಡೇಟಿಂಗ್ ಪ್ರಸ್ತಾಪಿಸಿದ್ದ ಪುಟ್ಟ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ ಕಿಡಿ

ಸಾರಾಂಶ

ವಿರಾಟ್ ಕೊಹ್ಲಿ ಮಗಳ ಜೊತೆ ಡೇಟಿಂಗ್ ಪ್ರಸ್ತಾಪಿಸಿದ್ದ ಪುಟ್ಟ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ ಕಿಡಿಕಾರಿದ್ದಾರೆ. 

ಕೆಲವು ದಿನಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ಹಿಡಿದಿದ್ದ ಪ್ಲಾಕಾರ್ಡ್‌ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದನ್ನು ನೋಡಿದ ನೆಟ್ಟಿಗರು ಆ ಬಾಲಕನ ಪೋಷಕರ ವಿರುದ್ಧ ಕಿಡಿ ಕಾರುತ್ತಿದ್ದರು. ಪ್ರಚಾರಕ್ಕೋಸ್ಕರ ಪುಟ್ಟ ಮಕ್ಕಳ ಕೈಯಲ್ಲಿ ಇಂಥಾ ಕೆಟ್ಟ ಕೆಲಸ ಮಾಡಿಸಬಹುದಾ? ಅಂತ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಇದೀಗ ಈ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ ಬಾಲಕನ ಪೋಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. RCB vs CSK  ಪಂದ್ಯದ ವೇಳೆ ಪುಟ್ಟ ಬಾಲಕ 'ಹಾಯ್ ವಿರಾಟ್ ಅಂಕಲ್ ನಾನು ವಮಿಕಾಳನ್ನು ಡೇಟಿಂಗ್ ಕರ್ಕೊಂಡು ಹೋಗಬಹುದಾ' ಎಂದು ಬರೆದಿದ್ದ ಪ್ಲಾಕಾರ್ಡ್ ಹಿಡಿದು ನಿಂತಿದ್ದ. ಕ್ಯಾಮರಾಗೆ ಸೆರೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಬಾಲಕನ ಪೋಷಕರನ್ನು ತರಾಟೆ ತೆಗೆದುಕೊಂಡಿದ್ದರು.

ಪುಟ್ಟ ಬಾಲಕ ಫಲಕ ಹಿಡಿದಿದ್ದ ವೈರಲ್ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಮುಗ್ಧ ಮಕ್ಕಳಿಗೆ ಇದನ್ನೆಲ್ಲ ಕಲಿಸಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 'ಮುಗ್ಧ ಮಕ್ಕಳಿಗೆ ಈ ಅಸಂಬದ್ಧತೆಯನ್ನು ಕಲಿಸಬೇಡಿ, ಇದು ನಿಮ್ಮನ್ನು ಅಸಭ್ಯ ಮತ್ತು ಮೂರ್ಖರನ್ನಾಗಿ ಮಾಡುತ್ತದೆ. ಇದನ್ನು ಆಧುನಿಕತೆ ಅಥವಾ ಕೂಲ್ ಎಂದು ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.  

ಕಂಗನಾ ಮಾತಿಗೆ ಅನೇಕರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಕಂಗನಾ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ರೆಸ್ಟೋರೆಂಟ್ ಬಾರ್‌ಗೆ ಕರೆದುಕೊಂಡು ಹೋಗುತ್ತಾರೆ. ನಾನು ಕಣ್ಣಾರೆ ನೋಡಿದ್ದೀನಿ. ನನಗೆ ಆಶ್ಚರ್ಯವಾಯಿತು' ಎಂದು ಹೇಳಿದ್ದಾರೆ.  ಮುಗ್ಧ ಮಕ್ಕಳಲ್ಲಿ ಇಂಥ ಭಾವನೆ ಮೂಡಿಸಬಾರದು ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.

ವಿರಾಟ್ ಅಂಕಲ್, ವಮಿಕಾ ಜೊತೆ ನಾನು ಡೇಟಿಂಗ್ ಹೋಗ್ಬಹುದಾ? ಪುಟ್ಟ ಹುಡುಗನ ಮೆಸೇಜ್‌ಗೆ ನೆಟ್ಟಿಗರು ರಾಂಗ್!

ವಿರಾಟ್ ಮತ್ತು ಅನುಷ್ಕಾ ದಂಪತಿ ಇದುವರೆಗೂ ತಮ್ಮ ಮಗಳನ್ನು ಎಲ್ಲಿಯೂ ಪರಿಚಯಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಲ್ಲ. ಅಷ್ಟೆಯಲ್ಲದೇ ಮಾಧ್ಯಮದವರಿಗೂ ಮಗಳ ಫೋಟೋ ಸೆರೆಹಿಡಿಯದಂತೆ ಮನವಿ ಮಾಡಿದ್ದರು. ಹಾಗಾಗಿ ಪಾಪರಾಜಿಗಳು ಸಹ ಇದುವರೆಗೂ ವಮಿಕಾ ಫೋಟೋವನ್ನು ಎಲ್ಲಿಯೂ ಸೆರೆಹಿಡಿದಿಲ್ಲ. ಕೊಹ್ಲಿ ದಂಪತಿ ಮಗಳನ್ನು ಸಿಕ್ಕಾಪಟ್ಟೆ ರಕ್ಷಣೆ ಮಾಡುತ್ತಾರೆ. ಆದರೂ ಇಂಥ ಫಲಕಗಳು ವೈರಲ್ ಆಗುತ್ತಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಇದೀಗ ಕಂಗನಾ ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. 

ನಟಿ ಕಂಗನಾ ಯಾವುದೇ ವಿಚಾರಗಳಾದರೂ ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಸಿನಿಮಾ ವಿಚಾರ ಅಂತಲ್ಲ, ಯಾವುದೇ ವಿಚಾರದ ಬಗ್ಗೆಯಾದರೂ ಕಂಗನಾ ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಬಾಲಕನ ಪೋಷಕರ ವಿರುದ್ಧ ಕಿಡಿ ಕಾರುವ ಮೂಲಕ ಮುಗ್ಧ ಮಕ್ಕಳ ಮನಸ್ಸು ಹಾಳಮಾಡಬೇಡಿ ಎಂದು ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?