ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯ; ಸಿನಿ ಸೆಲೆಬ್ರಿಟಗಳ ರಿಯಾಕ್ಷನ್ ಹೀಗಿದೆ

By Shruthi Krishna  |  First Published Apr 21, 2023, 3:46 PM IST

ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾದ ಬಳಿಕ ಸಿನಿ ಸೆಲೆಬ್ರಿಟಗಳ ಅಚ್ಚರಿಯ ರಿಯಾಕ್ಷನ್ ವೈರಲ್ ಆಗಿದೆ. 


ಅನೇಕ ಸೆಲೆಬ್ರಿಟಿಗಳ ಬ್ಲೂ ಕಿಟ್ ಅನ್ನು ಟ್ವಿಟ್ಟರ್ ಸಂಸ್ಥೆ ತೆಗೆದುಹಾಕಿದೆ. ಬ್ಲೂಟಿಕ್ ಪಡೆಯಲು ಶುಲ್ಕ ಪಾವತಿಸದ ಕಾರಣ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ. ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಕನ್ನಡದ ಸ್ಟಾರ್‌ಗಳಾದ ಸುದೀಪ್, ಯಶ್ ಸೇರಿದಂತೆ ಅನೇಕ ಕಲಾವಿದರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿದೆ. ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಬ್ಲೂಟಿಕ್ ಹೊಂದಲು ಶುಲ್ಕ ವಿಧಿಸಲಾಗಿತ್ತು. ಇದೀಗ ಶುಲ್ಕ ಪಾವತಿಸದೆ ಇದ್ದವರ ಬ್ಲೂ ಟಿಕ್ ಮಾಯವಾಗಿದೆ. ಟ್ವಿಟ್ಟರ್ ನೋಡಿದ ಬಹುತೇಕರಿಗೆ ಬ್ಲೂ ಟಿಕ್ ಶಾಕ್ ನೀಡಿದೆ. ಅಚ್ಚರಿಗೊಂಡ ಸೆಲೆಬ್ರಿಟಿಗಳು ಬ್ಲೂ ಟಿಕ್ ಎಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿ ಬೈ ಬೈ ಬ್ಲೂ ಟಿಕ್ ಎಂದು ಹೇಳಿದ್ದಾರೆ. ನನ್ನ ಪಯಣ, ನನ್ನ ಸಂಭಾಷಣೆ, ನನ್ನ ಜನರ ಜೊತೆ ಮುಂದುವರೆಯುತ್ತದೆ. ಟೇಕ್ ಕೇರ್' ಎಂದು ಹೇಳಿದ್ದಾರೆ.

Bye bye …. It was nice having you….my journey ..my conversations..my sharing…will continue with my people … you take care

— Prakash Raj (@prakashraaj)

Tap to resize

Latest Videos

ಇನ್ನು ನಟಿ ಖುಷ್ಬೂ ಕೂಡ ಶಾಕ್ ಆಗಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿದ್ದು ನೋಡಿ, ರಾತ್ರೋರಾತ್ರಿ ನನ್ನ ಖಾತೆಯಿಂದ ಬ್ಲೂ ಟಿಕ್ ಯಾಕೆ ಮಾಯವಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಖಾತೆಯ ಚಂದಾದಾರಿಕೆ 17ನೇ ಮಾರ್ಚ್ 2024 ರಂದು ಕೊನೆಗೊಳ್ಳುತ್ತದೆ. ಆದರೆ ಈಗ ರದ್ದುಗೊಂಡಿದೆ. ನಾನು ಪಾವತಿಸಿದ್ದೇನೆ. ಅದರೂ ಏಕೆ ರದ್ದುಗೊಳಿಸಲಾಗಿದೆ' ಎಂದು ಅಚ್ಚರಿಯಿಂದ ಪ್ರಶ್ನೆ ಮಾಡಿದ್ದಾರೆ.

Dear why has my bluetick disappeared overnight?? My account is active.

— KhushbuSundar (@khushsundar)

ಕನ್ನಡದ ನಟಿ ಅನು ಪ್ರಭಕರ್ ಜೊತೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ತನ್ನ ಖಾತೆಯಿಂದ ಬ್ಲೂ ಟಿಕ್ ಮಾಯವಾದ ಬಳಿಕ ಅಚ್ಚರಿಯಾದ ಅನುಪ್ರಭಾಕರ್, ನನ್ನ ಬ್ಲೂ ಟಿಕ್‌ಗೆ ಏನಾಯಿತು.  ಯಾಕೆ ಇದು ಕಾಣುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Hello what happened to my blue tick?? How come it’s not showing????

— Anu Prabhakar Mukherjee (@AnuPrabhakar9)

ನಟಿ ಮಂಚು ಲಕ್ಷ್ಮಿ ಕೂಡ ಅಚ್ಚರಿ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. ನಿಧಿ ಅಗರ್ವಾಲ್ ಟ್ವೀಟ್ ಮಾಡಿ, ನನ್ನ ಬ್ಲೂ ಟಿಕ್ ಮಿಸ್ ಆಗಿದೆ ಎಂದು ಹೇಳಿದ್ದಾರೆ.    

ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಬ್ಯೂಟಿಕ್‌ ಇರುವವರು ತಿಂಗಳಿಗೆ ಇಂತಿಷ್ಟು ಪಾವತಿಸಬೇಕು ಅಂತಾ ನಿಯಮವನ್ನು ಜಾರಿಗೆ ತಂದಿದ್ದರು. ಇದೀಗ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹೊರಟಿದ್ದು, ಶುಲ್ಕ ಪಾವತಿಸದ ಅನೇಕ ನಟ ನಟಿಯರ, ಗಣ್ಯ ವ್ಯಕ್ತಿಗಳ ಖಾತೆಯಿಂದ ಬ್ಲೂಟಿಕ್ ತೆಗೆದುಹಾಕಲಾಗಿದೆ. ಇಷ್ಟು ದಿನ ಬ್ಲೂಟಿಕ್‌ ಬಳಕೆದಾರರಿಗಿದ್ದ ವಿಶೇಷ ಟ್ವಿಟರ್‌ ಫೀಚರ್ಸ್‌ ಗಳು  ಬ್ಲೂಟಿಕ್ ಕಳೆದುಕೊಂಡ ಬಳಿಕ ಲಭ್ಯವಾಗುವುದಿಲ್ಲ. ಈಗ ಬ್ಲೂ ಟಿಕ್ ಕಳೆದುಕೊಂಡವರು ಪಾವತಿ ಮಾಡಿ ವಾಪಾಸ್ ಪಡೆಯುತ್ತಾರಾ ಕಾದುನೋಡಬೇಕು. 

 

click me!