KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್​ರೂಮ್​ ರೊಮ್ಯಾನ್ಸ್​ ನೋಡಿ ಹುಬ್ಬೇರಿಸಿದ ಫ್ಯಾನ್ಸ್​!

Published : Sep 03, 2023, 02:41 PM IST
KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್​ರೂಮ್​ ರೊಮ್ಯಾನ್ಸ್​ ನೋಡಿ ಹುಬ್ಬೇರಿಸಿದ ಫ್ಯಾನ್ಸ್​!

ಸಾರಾಂಶ

ಖುಷಿ ಚಿತ್ರದ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿದ್ದು, ಇದನ್ನು ನೋಡಿ ಫ್ಯಾನ್ಸ್​ ಹುಬ್ಬೇರಿಸುತ್ತಿದ್ದಾರೆ.   

ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಹಾಗೂ ಬ್ಯೂಟಿ ಸಮಂತಾ ರುತ್​ ಪ್ರಭು ಅವರ ಬಹು ನಿರೀಕ್ಷಿತ  ‘ಖುಷಿ’ ಸಿನಿಮಾದಲ್ಲಿ ಮೊನ್ನೆ ಸೆಪ್ಟೆಂಬರ್​ 1ರಂದು ಬಿಡುಗಡೆಯಾಗಿದೆ.   'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ರಿಲೀಸ್​ ಆಗಿದೆ.  ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ರ್ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಈ ಚಿತ್ರ  ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಜೋಡಿಯ ಕೆಮೆಸ್ಟ್ರಿಗೆ ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ.  ಈ ಹಿಂದೆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗುತ್ತಿದ್ದಂತೆಯೇ  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ ದೇವರಕೊಂಡ. ಇದೀಗ  ಇವರಿಬ್ಬರ ಕೆಮೆಸ್ಟ್ರಿ ನೋಡಿ ಅಭಿಮಾನಿಗಳು ಇದು ನಿಜ ನಿಜ ಎನ್ನುತ್ತಿದ್ದಾರೆ. 


ಇದೀಗ  ಸಿನಿಮಾದ ಒಂದು ಸೀನ್ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಈ ವೈರಲ್​ ವಿಡಿಯೋದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅವರು ಮೈ ಚಳಿ ಬಿಟ್ಟು ರೊಮ್ಯಾನ್ಸ್​ನಲ್ಲಿ ತೊಡಗಿರುವುದನ್ನು ನೋಡಬಹುದು. ಆದರೆ ವಿಡಿಯೋ ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಸೋಷಿಯಲ್​ ಮೀಡಿಯಾದಿಂದ ಡಿಲೀಟ್​ ಮಾಡಲಾಗಿದೆ. ಈ ಹಾಟ್​ ಸೀನ್​ ಫ್ಯಾನ್ಸ್​ ಹೃದಯಕ್ಕೆ ಲಗ್ಗೆ ಇಟ್ಟಿದೆ. ಈ ಮೊದಲು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತ ಗೋವಿಂದಂ’ ಸಿನಿಮಾ ಬಿಡುಗಡೆ ಆದಾಗಲೂ ಒಂದು ಕಿಸ್ಸಿಂಗ್ ಸೀನ್ ವೈರಲ್ ಆಗಿ ಭಾರಿ ಸುದ್ದಿಯಾಗಿತ್ತು. ಆ ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಹಾಗೂ ವಿಜಯ್​ ನಡುವಿನ ಆಪ್ತತೆ ಹೆಚ್ಚಾಯಿತು. ಅದೇ ರೀತಿ ಈಗ ‘ಖುಷಿ’ ಚಿತ್ರದಿಂದಾಗಿ ಸಮಂತಾ ಹಾಗೂ ವಿಜಯ್ ಅವರು ರಿಯಲ್ ಲೈಫ್​ನಲ್ಲಿಯೂ ಜೋಡಿ ಆಗುತ್ತಾರಾ ಎಂಬ ಗುಮಾನಿ ಮೂಡಿದೆ.  

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

ಕೆಲ ದಿನಗಳ ಹಿಂದೆ ಖುಷಿ ಸಿನಿಮಾದ ಪ್ರಚಾರದ ಕಾರ್ಯಕ್ರಮವೊಂದರ ವಿಡಿಯೋ ನೋಡಿ ಫ್ಯಾನ್ಸ್​ ಉಸ್ಸಪ್ಪಾ ಉಸ್ಸೋ ಎಂದಿದ್ದರು.  ಕಾರ್ಯಕ್ರಮದಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದರು.  ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಂಡಿದ್ದು, ಅದರ ವಿಡಿಯೋ ಸಕತ್​ ಸದ್ದು ಮಾಡಿತ್ತು.  ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ ಚಿತ್ರದ ಈ ಇಂಟಿಮೇಟ್​ ಸೀನ್​. ಅಂದಹಾಗೆ,  ಈ ಚಿತ್ರದ ಕಥೆಯಲ್ಲಿ  ನಾಯಕ-ನಾಯಕಿ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಕೌಟುಂಬಿಕ ವೈರುಧ್ಯಗಳಿಂದ ಅವರು ಹೇಗೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗಿದೆ.  

ಸಮಂತಾ ಮತ್ತು ನಾಗಚೈತನ್ಯ ಅವರು ವಿಚ್ಛೇದನ ಪಡೆದ ಬಳಿಕ ಡಿಪ್ರೆಷನ್​ಗೆ ತೆರಳಿದ್ದ ಸಮಂತಾ ಅವರಿಗೆ ಖುಷಿ ಚಿತ್ರ ಖುಷಿ ಕೊಟ್ಟಿದ್ದರೆ, ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್​ನಲ್ಲಿ ಇದ್ದಾರೆ ಎನ್ನಲಾಗಿರುವ ವಿಜಯ್​ ದೇವರಕೊಂಡ ಇದೀಗ ಸಮಂತಾ ತಮ್ಮ ಕ್ರಷ್​ ಎಂದು ಹೇಳಿಕೊಂಡಿದ್ದಾರೆ.  ಇದರ ನಡುವೆಯೇ, ನಾಗಚೈತನ್ಯ ಅವರು ಈಚೆಗೆ  ಸಿನಿಮಾವೊಂದರ ವೀಕ್ಷಣೆಗೆ ಥಿಯೇಟರ್‌ಗೆ ತೆರಳಿದ್ದು, ಈ ವೇಳೆ ಸಮಂತಾ  ನಟನೆಯ ಖುಷಿ ಸಿನಿಮಾದ ಟ್ರೈಲರ್ ಪ್ಲೇ ಆಗಿದೆ.  ಖುಷಿ ಟ್ರೈಲರ್ ಪ್ಲೇ (Khushi Movie Trailer) ಆಗುತ್ತಿದ್ದಂತೆ ನಾಗಚೈತನ್ಯ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ಸುದ್ದಿಯಾಗಿ ಬಹಳ ಸದ್ದು ಮಾಡಿತ್ತು. ಆದರೆ ಇದನ್ನು ನಾಗಚೈತನ್ಯ ನಿರಾಕರಿಸಿದ್ದರು. ಯಾರ ಸಂಬಂಧ ಏನೇ ಇರಲಿ, ಸದ್ಯ ಈ ದೃಶ್ಯವನ್ನು ಮಾತ್ರ ಫ್ಯಾನ್ಸ್​ ಮೆಚ್ಚುಗೆಯಿಂದ ನೋಡುತ್ತಿದ್ದಾರೆ. 

ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!