
ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ (Kareena Kapoor) ಅವರ ಜೋಡಿ. ಆದರೆ ಈ ಜೋಡಿ ಸಕತ್ ಟ್ರೋಲ್ಗೆ ಒಳಗಾಗುತ್ತಲೂ ಇರುತ್ತದೆ. ಏಕೆಂದರೆ ಸೈಫ್ ಅಲಿ ಅವರು ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್ ಜೊತೆ ಮದುವೆಯಾದಾಗ ಕರೀನಾ ಕಪೂರ್ ಇನ್ನೂ ಚಿಕ್ಕ ಬಾಲೆ. ಸೈಫ್ ಅಲಿ ಮದುವೆಗೆ ಬಂದಿದ್ದ ಕರೀನಾ ಅವರನ್ನು ಸೈಫ್ ಮಗಳೇ ಎಂದು ಕರೆದಿದ್ದರು. ಆದರೆ ಮುಂದೆ ಅವರೇ ಆಕೆಯನ್ನು ಮದುವೆಯಾದುದಕ್ಕೆ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ. ಅದೇನೇ ಇದ್ದರೂ ಈ ಜೋಡಿ ಈಗ ಸುಖವಾಗಿ ಸಂಸಾರ ನಡೆಸುತ್ತಿದೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಈ ಜೋಡಿ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆಯಿತು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್.
ನಾಲ್ಕು ಮಕ್ಕಳ ಜೊತೆ ಸೈಫ್ ಅಲಿ ಫೋಟೋ ಶೇರ್ ಮಾಡಿದ್ರೆ ಹೀಗೆಲ್ಲಾ ಕಮೆಂಟ್ ಹಾಕೋದಾ?
ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್ ಫೋಟೋ ವೈರಲ್ ಆಗಿದೆ. ಇಬ್ರಾಹಿಂ ಅಲಿ ಖಾನ್ ಅಮೃತಾ ಸಿಂಗ್ ಅವರ ಪುತ್ರ. ಈತನಿಗೆ ಈಗ 22 ವರ್ಷ ವಯಸ್ಸು. ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್ ಕರೀನಾ ಕಪೂರ್ ಅವರ ಪುತ್ರರಾಗಿದ್ದು, ಇವರ ವಯಸ್ಸು ಕ್ರಮವಾಗಿ ಆರು ಮತ್ತು ಎರಡು ವರ್ಷ. ಈ ಮೂವರು ಒಂದೇ ರೀತಿ ಕ್ಯೂಟ್ ಆಗಿ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ಆದರೆ ಫೋಟೋ ಸಕತ್ ಟ್ರೋಲ್ಗೂ ಒಳಗಾಗಿದೆ. ಸೈಫ್ ಅಲಿ ಖಾನ್ ಅವರು ಸ್ಮಾಲ್, ಮೀಡಿಯಮ್ ಮತ್ತು ಲಾರ್ಜ್ ಸೈಜ್ನಲ್ಲಿ ಲಭ್ಯ ಇರುವುದಾಗಿ ಹೇಳಲಾಗುತ್ತಿದೆ. ಅಂದಹಾಗೆ ಸೈಫ್ ಅವರು ತಮ್ಮ ಮೊದಲ ಪತ್ನಿಯ ಜೊತೆ ಸಂಪರ್ಕದಲ್ಲಿ ಇಲ್ಲದಿದ್ದರೂ ಅವರ ಮಕ್ಕಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈ ಪೈಕಿ ಸಾರಾ ಅಲಿ ಖಾನ್ ಇತ್ತೀಚಿಗೆ ತುಂಬಾ ಸುದ್ದಿಯಲ್ಲಿರುವ ನಟಿ. ಅಮ್ಮನಂತೆ ಅಪ್ಪಟ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾರಿ ಟೀಕೆ-ಗಲಾಟೆಗಳ ನಡುವೆಯೇ ಕೇದಾರನಾಥ, ಅಮರನಾಥ ಯಾತ್ರೆಯನ್ನೂ ಮುಗಿಸಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಮೊನ್ನೆಯಷ್ಟೇ ರಕ್ಷಾ ಬಂಧನದ ಸಮಯದಲ್ಲಿ, ಸೈಫ್ ಅಲಿ ಖಾನ್ ಕರೀನಾ ಕಪೂರ್, ನಾಲ್ವರು ಮಕ್ಕಳು ಹಾಗೂ ಸೈಫ್ ಅಲಿಯ ಸಹೋದರರಿಯರ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಇದಕ್ಕೆ ಟ್ರೋಲ್ಗೂ ಒಳಗಾಗಿದ್ದರು. ನಾಲ್ವರು ಖಾನ್ ಮಕ್ಕಳು ಸಾಕಾಗಿದ್ಯೋ ಅಥವಾ ಇನ್ನೂ ಬರುವುದು ಇದೆಯೋ ಎಂದು ಒಬ್ಬಾತ ಪ್ರಶ್ನೆ ಮಾಡಿದರೆ, ಲವ್ ಜಿಹಾದ್ನ ಪ್ರತಿರೂಪ ಈ ಫೋಟೋ ಎನ್ನುತ್ತಿದ್ದಾರೆ. ಸಾರಾ ಅಲಿಯ ಅಮ್ಮ ಅಮೃತಾ ಸಿಂಗ್ ಇದ್ದರೆ ಈ ಫೋಟೋ ಕಂಪ್ಲೀಟ್ ಎನಿಸುತ್ತಿತ್ತು ಎಂದು ಇನ್ನೋರ್ವ ಕಮೆಂಟ್ ಮಾಡಿದ್ದಾರೆ.
ಅಮೃತಾ ಸಿಂಗ್ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.