ನಾನಿನ್ನೂ ಸತ್ತಿಲ್ಲ; ಅನಾರೋಗ್ಯದ ಬಗ್ಗೆ ನಟಿ ಸಮಂತಾ ಕಣ್ಣೀರು

By Shruthi Krishna  |  First Published Nov 8, 2022, 12:42 PM IST

ನಟಿ ಸಮಂತಾ ಅನಾರೋಗ್ಯದ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಯಶೋದ ಸಿನಿಮಾದ ಪ್ರಮೋಷನ್ ವೇಳೆ ಸಮಂತಾ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ. 


ನಟಿ ಸಮಂತಾ ರುತ್ ಪ್ರಭು ಸದ್ಯ ಯಶೋದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ಸಮಂತಾ ಆಕ್ಷನ್ ದೃಶ್ಯಗಳಲ್ಲೂ ಮಿಂಚಿದ್ದಾರೆ. ಒಂದೆಡೆ ಯಶೋದ ಬಿಡುಗಡೆಗೆ ಸಜ್ಜಾಗಿದೆ ಆದರೆ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಂತ ಸಮಂತಾ ಮನೆಯಲ್ಲಿ ಕೂತಿಲ್ಲ. ಅನೋರಾಗ್ಯದ ನಡುವೆಯೂ ಯಶೋದ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಯಶೋದ ಸಿನಿಮಾ ವಿಚಾರವಾಗಿ ಸಂದರ್ಶನ ನೀಡಿದ್ದ ನಟಿ ಸಮಂತಾ ಅನಾರೋಗ್ಯದ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. 

ನಿರೂಪಕಿ ಸಮಂತಾ ಅವರಿಗೆ ಅನಾರೋಗ್ಯದ  ಬಗ್ಗೆ ಪ್ರಶ್ನೆ ಮಾಡಿದರು. ಭಾವುಕರಾದ  ಸಮಂತಾ ಕಣ್ಣೀರು ಹಾಕುತ್ತಲೇ ಪ್ರತಿಕ್ರಿಯೆ ನೀಡಿದರು. ಕೆಲವು ದಿನಗಳು ತುಂಬಾ ಒಳ್ಳೆಯದಾಗಿರುತ್ತೆ, ಕೆಲವು ದಿನಗಳು ಕೆಟ್ಟದ್ದಾಗಿರುತ್ತದೆ. ನಾನು ಒಂದು ಇಡುವುದು ಕಷ್ಟ ಎಂದು ಭಾವಿಸಿದ್ದೆ. ಈಗ ಹಿಂದೆ ತಿರುಗಿ ನೋಡಿದ್ರೆ ಇಲ್ಲಿವರೆಗೂ ಬಂದಿದ್ದೀನಾ ಎಂದು ನನಗೆ ಅಶ್ಚರ್ಯವಾಗುತ್ತದೆ. ನಾನಿಲ್ಲಿ ಫೈಟ್ ಮಾಡೋಕೆ ಇದ್ದೀನಿ' ಎಂದು ಹೇಳಿದರು. 

Samantha ಜೀವನ ಎಷ್ಟೇ ಖರಾಬ್ ಆಗಿರಲಿ ಇದನ್ನು ತಲೆಯಲ್ಲಿಟ್ಟುಕೊಳ್ಳಿ: ಮೊದಲ ಬಾರಿ ಮುಖ ತೋರಿಸಿದ ಸ್ಯಾಮ್

Tap to resize

Latest Videos

ಬಳಿಕ ಮಾತು ಮುಂದುವರೆಸಿದ ಸಮಂತಾ ಈ ಅನಾರೋಗ್ಯ ಎಂದರೆ ಜೀವನಕ್ಕೆ ಅಪಾಯಯ ಉಂಟುಮಾಡುವ ಸ್ಥಿತಿಯಲ್ಲಿ ಇಲ್ಲ ಎಂದರು. 'ಒಂದು ವಿಶಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಸ್ಥಿತಿ ಜೀವಕ್ಕೆ ಅಪಾಯಕಾರಿ ಎಂದು ಅನೇಕ ವರದಿಗಳನ್ನು ನೋಡಿದೆ. ಆದರೆ ಇದು ಜೀವಕ್ಕೆ ಅಪಾಯಕಾರಿಯಲ್ಲ. ನಾನು ಇನ್ನೂ ಸತ್ತಿಲ್ಲ. ಇಂಥ ಹೆಡ್ ಲೈನ್ ಗಳು ತುಂಬಾ ಅಗತ್ಯ ಎಂದು ಭಾವಿಸಿಲ್ಲ' ಎಂದು ಹೇಳಿದರು. ಬಳಿಕ ನಾನು ವಿನ್ ಆಗುತ್ತೀನಿ ಅಂತ ಹೇಳಿದರು. ಸಮಂತಾ ಭಾವುಕ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಧೈರ್ಯ ತುಂಬಿ ಸಂದೇಶ ಕಳುಹಿಸುತ್ತಿದ್ದಾರೆ. 

ಸಮಂತಾ ಸಿನಿಮಾ ವಿಚಾರಕ್ಕೆ ಬರುವುದಾ ಯಶೋದ ಜೊತೆಗೆ ಖುಷಿ, ಶಾಕುಂತಲಂ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಯಶೋದ ಚಿತ್ರವನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆ ವರಲಕ್ಷ್ಮಿ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಲಿ ಶರ್ಮಾ ಸೇರಿದಂತೆ ಅನೇಕರು ನಟಿಸಿದ್ದಾರೆ.   

ಸಮಂತಾಗೆ ಮೈಯೋಸಿಟಿಸ್ ಕಾಯಿಲೆ: ಭೇಟಿಯಾಗಲಿದ್ದಾರಾ ನಾಗಚೈತನ್ಯ?

ಸದ್ಯ ಸಮಂತಾ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಸಮಂತಾಗೆ ತುಂಬಾ ಕಷ್ಟದ ವರ್ಷವಾಗಿತ್ತು. ವಿಚ್ಛೇದನ ಬಳಿಕ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆದರೂ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮುಗಿಸಿದರು. ಬಾಲಿವುಡ್ ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಆದರೀಗ ಶೂಟಿಂಗ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಸಮಂತಾ ಮತ್ತಷ್ಟು ಸ್ಟ್ರಾಂಗ್ ಆಗಿ ವಾಪಾಸ್ ಆಗುವುದಾಗಿ ಹೇಳಿದ್ದಾರೆ.  


 

click me!