Kamal Hassan ಮದುವೆಯಾದ ದಿನವೇ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕಮಲ್ ಹಾಸನ್; ಏನಿದು ವಿಚಾರ?

Published : Nov 08, 2022, 12:35 PM IST
Kamal Hassan ಮದುವೆಯಾದ ದಿನವೇ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕಮಲ್ ಹಾಸನ್; ಏನಿದು ವಿಚಾರ?

ಸಾರಾಂಶ

68ನೇ ಹುಟ್ಟುಹಬ್ಬದ ಪ್ರಯುಕ್ತ ಕಮಲ್ ಹಾಸನ್ ಪರ್ಸನಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಈ ವೇಳೆ ಮೊದಲ ಬಗ್ಗೆ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ... 

ಬಹುಭಾಷಾ ನಟ ಇಂಡಿಯನ್ ಸೂಪರ್ ಸ್ಟಾರ್ ಕಮಲ್ ಹಾಸನ್ ನವೆಂಬರ್ 7ರಂದು 68ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನವೇ 234ನೇ ಸಿನಿಮಾವನ್ನು ಘೋಷಿಸಿದ್ದಾರೆ. ಬಹುಕಾಲದ ಗೆಳೆಯ ಮಣಿರತ್ನಂ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಲ್ಲಿರುವ ಕಮಲ್ ಹಾಸನ್ ಸದ್ಯಕ್ಕೆ ಟೈಟಲ್‌ನ KH234 ಎಂದು ಅನೌನ್ಸ್‌ ಮಾಡಿದ್ದಾರೆ. ಆನ್‌ಸ್ಕ್ರೀನ್‌ ಕತೆ ರೀತಿ ಕಮಲ್ ಹಾಸನ್‌ ಪರ್ಸನಲ್ ಲೈಫ್‌ನಲ್ಲಿ ಬಣ್ಣ ಮತ್ತು ಡ್ರಾಮಾ ಹೆಚ್ಚಿತ್ತು..

ಹೌದು! ಕಮಲ್ ಹಾಸನ್ ಎರಡು ಮದವೆಯಾಗಿರುವ ನಟ. 1978ರಲ್ಲಿ ಡ್ಯಾನ್ಸರ್ ವಾಣಿ ಗಣಪತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 10 ವರ್ಷಳ ಕಾಲ ಜೊತೆಗಿದ್ದು 1988ರಲ್ಲಿ ವಿಚ್ಛೇದನ ಪಡೆದುಕೊಂಡರು. ವಿಚ್ಛೇದನ ಪಡೆದ ವರ್ಷವೇ ಸಾರಿಕಾರನ್ನು ಮದುವೆಯಾದ್ದರು. ಸಾರಿಕಾ ಮತ್ತು ಕಮಲ್ ಡೇಟಿಂಗ್ ಮಾಡುತ್ತಿದ್ದರು, ಸಾರಿಕಾಳಿಗಾಗಿ ವಾಣಿ ಅವರನ್ನು ಬಿಟ್ಟಿದ್ದು ಎನ್ನುವ ವಿಚಾರ ಹಬ್ಬಿತ್ತು.

ಕಮಲ್ ಹಾಸನ್‌ ಜೊತೆ ಸಾರಿಕಾ ಕ್ಲೋಸ್‌ ಇದ್ದ ಕಾರಣ ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದರು ಎನ್ನಲಾಗಿದೆ. ಸಿಮಿ ಅಗರ್ವಾಲ್‌ ಜೊತೆ ನಡೆದ ಸಂದರ್ಶನದಲ್ಲಿ ಕಮಲ್ ಹಾಸನ್ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ, ನಾನು ಖುಷಿಯಾಗಿರಲಿಲ್ಲ ಎಂದಿದ್ದಾರೆ. 

'ನನ್ನ ಪ್ರಕಾರ ನನ್ನ ಮೊದಲ ಮದುವೆ ವರ್ಕ್‌ ಆಗುತ್ತಿರಲಿಲ್ಲ. ಇದು ನನ್ನ ದೃಷ್ಟಿಯಲ್ಲಿ. ಈ ವಿಚಾರದ ಬಗ್ಗೆ ಸುಳ್ಳು ಹೇಳಲು ಆಗುವುದಿಲ್ಲ. ಕಾಳಜಿ ಅತಿಯಾಗಿ ಸಂಬಂಧ ಒರಟಾಯಿತ್ತು ಆಗ ನಾನು ಖುಷಿಯಾಗಿರುವುದು ಮುಖ್ಯವಾಗಿತ್ತು. ಮದುವೆ ವಿಚಾರ ಅದರ ಆಚಾರ ವಿಚಾರಗಳಲ್ಲಿ ನಾನು ನಂಬಿಕೆ ಕಳೆದುಕೊಂಡೆ. ಮದುವೆ ವಿಚಾರ ಏನೇ ಇದ್ದರೂ ನಾನು ಗಟ್ಟಿ ಧ್ವನಿಯಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದೆ. ಜನರು ಗಾಬರಿ ಆಗುತ್ತಿದ್ದರು. ನಿಜ ಹೇಳಬೇಕು ಅಂದ್ರೆ ಮದುವೆಯಾದ ದಿನವೇ ಮದುವೆ ಬೇಡ ಎಂದು ನಾನು ಹೇಳಿಕೆ ಕೊಟ್ಟಿದೆ' ಎಂದು ಕಮಲ್ ಹಾಸನ್ ಮಾತನಾಡಿದ್ದಾರೆ. 

ಕಮಲ್ ಹಾಸನ್ ಅವರ ಆಸ್ತಿ, ಐಷಾರಾಮಿ ಜೀವನಶೈಲಿ ಮತ್ತು ನಿವ್ವಳ ಮೌಲ್ಯ ಎಷ್ಟಿದೆ

ಮದುವೆ ಬಗ್ಗೆ ನೆಗೆಟಿವ್ ಮಾತನಾಡುತ್ತಾರೆ ಕಮಲ್ ಎಂದು ನೆಟ್ಟಿಗರು ಆರೋಪ ಮಾಡಿದ್ದಾಗ ಇಲ್ಲ ವಾಣಿ ಗಣಪತಿಯಿಂದ ದೂರವಾಗಲು ಕೊಂಚ ಕಷ್ಟವಾಯಿತ್ತು ಆದರೆ ಸಾರಿಕಾ ತುಂಬಾನೇ ಅಟ್ರ್ಯಾಕ್ಟಿವ್ ಮಹಿಳೆ ಹೀಗಾಗಿ ಬೇಗ ಆತ್ಮೀಯಳಾದರು. ಆದರೆ 2004ರಲ್ಲಿ ಕಮಲ್ ಮತ್ತು ಸಾರಿಕಾ ವಿಚ್ಛೇದನ ಪಡೆದುಕೊಂಡರು. ಶ್ರುತಿ ಹಾಸನ್ ಮತ್ತು ಅಕ್ಷರಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಾರಿಕಾಳಿಂದ ದೂರ ಆದ ನಂತರ 2004 ರಿಂದ 2016ರ ವರೆಗೂ ಗೌತಮಿ ತಡಿಮಲ್ಲನ್ನು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. 

Kamal Haasan Birthday; 35 ವರ್ಷಗಳ ಬಳಿಕ ಮಣಿರತ್ನಂ ಜೊತೆ ಕಮಲ್ ಹಾಸನ್ ಸಿನಿಮಾ

'ತಂದೆ ತಾಯಿ ದೂರ ಆದ ಮೇಲೆ ಮಕ್ಕಳ ಯಾರ ಜೊತೆಗಿರಬೇಕು ಅನ್ನೋದು ಅವರ ಆಯ್ಕೆ ಆಗಿರುತ್ತದೆ. ಇದರಲ್ಲಿ ನನ್ನ ನಿರ್ಧಾರ ಏನೂ ಇಲ್ಲ. ನಾನು ನೋಡಿರುವ ಹಾಗೆ ದೇವರಿಗೂ ಇಬ್ಬರು ಹೆಂಡತಿಯರು ಇದ್ದಾರೆ ಶ್ರೀವಿಷ್ಣು ಮತ್ತು ಕೃಷ್ಣ ನೋಡಿ...ಈಗ ನಾನು ಮಾಡಿರುವುದು ತಪ್ಪು ಅನಿಸುತ್ತಿಲ್ಲ ಒಂದೇ ಸಮಸ್ಯೆ ಏನೆಂದರೆ ಇಬ್ಬರು ಹೆಂಡತಿಯರು ಒಂದೇ ಸಮಯದಲ್ಲಿ ನನ್ನ ಜೊತೆಗಿರಲಿಲ್ಲ. ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಆಯ್ಕೆಗಳು ಹೆಚ್ಚಿರ ಬೇಕು ನನ್ನ ಲೈಫ್‌ನಲ್ಲಿ ಎಲ್ಲರಿಗೂ ಅವರದ್ದೇ ಆದ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ಸಿನಿಮಾದಲ್ಲೂ ಮುತ್ತು ದೃಶ್ಯ ಇರುತ್ತದೆ ಇರಲ್ಲ ಅನ್ನೋ ಚರ್ಚೆ ಇದೆ ನಿಜ ಹೇಳಬೇಕು ಅಂದ್ರೆ ನನ್ನ ಜೀವನದ್ಲಿ ಕಿಸ್ ಬಹು ದೊಡ್ಡ ಪಾತ್ರವಹಿಸುತ್ತದೆ. ಸಂಬಂಧ ಗಟ್ಟಿಯಾಗಲು ಕಿಸ್ ಮುಖ್ಯವಾಗುತ್ತದೆ ಈಗ ಸಿನಿಮಾದಲ್ಲಿ ಮರ್ಡರ್‌ ತೋರಿಸುತ್ತೀನಿ ಅಂತ ನಾನು ಮಾರ್ಡರ್‌ ಮಾಡಿದ್' ಎಂದು ಕಮಲ್ ABN ತೆಲುಗು ಸಂದರ್ಶನದಲ್ಲಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?