Shakuntalam; ಅಬ್ಬಾ..!! ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ ಇಷ್ಟೊಂದಾ?

By Shruthi Krishna  |  First Published Jan 11, 2023, 5:00 PM IST

ಸೌತ್ ಸುಂದರಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಧರಿಸಿದ್ದ ಸೀರಿಯ ಬೆಲೆ ಕೇಳಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. 


ಸೌತ್ ಸುಂದರಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಅನೇಕ ದಿನಗಳ ಬಳಿಕ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಸಾಮಾಜಿಕ ಜಾಲತಾಣ ಮತ್ತು ಯಾವುದೇ ಕಾರ್ಯಕ್ರಮ ಹಾಗೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಶಾಕುಂತಲಂ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಅನೇಕ ದಿನಗಳ ಬಳಿಕ ಸಮಂತಾ ನೋಡಿ ಅಭಿಮಾನಿಗಳು ಫುಲ್ ಆದರು. ಆದರೆ ಇನ್ನೂ ಕೆಲವರು ಟ್ರೋಲ್ ಆಗಿದ್ದರು. 

ಸಮಂತಾ ನೋಡಿದ ಖುಷಿಯ ಜೊತೆಗೆ ಅವರು ಧರಿಸಿದ್ದ ಸೀರೆ ಕೂಡ ಎಲ್ಲರ ಗಮನ ಸೆಳೆದಿತ್ತು. ಬಿಳಿ ಬಣ್ಣದ ಸೀರೇ ಧರಿಸಿದ್ದ ಸಮಂತಾ ಸಖತ್ ಕ್ಲಾಸ್ ಆಗಿ ಕಾಣಿಸುತ್ತಿದ್ದರು. ಅಂದಹಾಗೆ ಸಮಂತಾ ಧರಿಸಿದ್ದ ಈ ಸೀರೆ ಬೆಲೆ ಈಗ ರಿವೀಲ್ ಆಗಿದ್ದು ಇಷ್ಟೊಂದಾ ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ. ಸಮಂತಾ ಸರಳವಾಗಿ ಕಾಣಿಸಿಕೊಂಡಿದ್ದರೂ ಸೀರೆಯ ಬೆಲೆ ಬರೋಬ್ಬರಿ 48 ಸಾವಿರ ರೂಪಾಯಿ. ಬಿಳಿ ಬಣ್ಣದ ಸೀರೆಯ ಮೇಲೆ ಎಂಬ್ರಾಯಿಡರಿ ಕೂಡ ಇದೆ. ಈ ಸೀರೆಯ ದೇವನಗರಿಯಲ್ಲಿ ತಾಯಾರಿಸಲಾಗಿದೆ. 

ನನ್ನ ಸ್ಥಿತಿ ನಿಮಗೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ; ಟ್ರೋಲಿಗರಿಗೆ ನಟಿ ಸಮಂತಾ ಪ್ರತಿಕ್ರಿಯೆ ವೈರಲ್

Tap to resize

Latest Videos

ಸರಳವಾಗಿ ಕಾಣಿಸಿಕೊಂಡಿದ್ದ ಸಮಂತಾ ಸೀರೆಗೆ ಯಾವುದೇ ಆಭರಣ ಧರಿಸಿರಲಿಲ್ಲ. ಕೊರಳಿಗೆ ಮತ್ತು ಕಿವಿಗೆ ಯಾವುದೇ ಆಭರಣ ಹಾಕಿರಲಿಲ್ಲ. ಸರಳವಾಗಿ ಕಾಣಿಸಿಕೊಂಡಿದ್ದರು. ದೊಡ್ಡದಾದ ಕನ್ನಡಕ ಹಾಕಿದ್ದರು. ಸಮಂತಾ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಸರಳವಾಗಿ ಕಾಣಿಸುತ್ತಿದ್ದ ಸಮಂತಾ ಅವರನ್ನು ಎಲವರು ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಟ್ರೋಲ್ ಮಾಡಿದ್ದರು. ಟ್ರೋಲಿಗರಿಗೆ ಸಮಂತಾ ತಿರುಗೇಟು ನೀಡಿದ್ದರು. ಸಮಂತಾ ಪರವಾಗಿ ಬಾಲಿವುಡ್ ನಟ ವರುಣ್ ಧವನ್ ಕೂಡ ತಿರುಗೇಟು ನೀಡಿದ್ದಾರೆ. 

ಎಷ್ಟೇ ಕಷ್ಟ ಬಂದರೂ ಸಿನಿಮಾ ಪ್ರೀತಿ ಕಳೆದುಕೊಂಡಿಲ್ಲ; ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕಣ್ಣೀರಿಟ್ಟ ಸಮಂತಾ

ಸ್ಯಾಮ್ ಕೈಯಲ್ಲಿ ರುದ್ರಾಕ್ಷಿ ಮಾಲೆ

ಆರೋಗ್ಯ ಮತ್ತು ಶಾಂತಿಗಾಗಿ ಪ್ರತಿದಿನ 10,008 ಜಪವನ್ನು ಪಠಿಸುವುದಾಗಿ ಸಮಂತಾ ಹೇಳಿದ್ದಾರೆ. ಕ್ರಿಶ್ಚಿಯನ್ನರು ಕೂಡ ಜಪಮಾಲೆ ಬಳಸುತ್ತಾರೆ. ಇದೀಗ ಸಮಂತಾ ಕೂಡ ಆರೋಗ್ಯ ಮತ್ತು ಶಾಂತಿಗಾಗಿ ರುದ್ರಾಕ್ಷಿ ಮಾಲೆ ಹಿಡಿದಿದ್ದಾರೆ. ಅಂದಹಾಗೆ ಸಮಂತಾ ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಇದೀಗ ರುದ್ರಾಕ್ಷಿ ಕೂಡ ಮಾಲೆ ಹಿಡಿದು ಜಪ ಮಾಡುತ್ತಿದ್ದಾರೆ. ಪ್ರತಿ ದಿನ ಸಮಯ ಸಿಕ್ಕಾಗಲೆಲ್ಲಾ ಜಪ ಮಾಡುತ್ತಿರುತ್ತಾರೆ. ಹಾಗಾಗಿ ದಿನವಿಡಿ ಜಪಮಾಲೆ ಹಿಡಿದುಕೊಂಡಿರುತ್ತಾರೆ ಎನ್ನಲಾಗಿದೆ.   

click me!