ಇದೊಳ್ಳೆ ಕಥೆಯಾಯ್ತಲ್ಲ...! ಫುಲ್​ ಡ್ರೆಸ್​ ಹಾಕಿದ್ರೂ ಮಲೈಕಾಳನ್ನು ಬಿಡದ ನೆಟ್ಟಿಗರು!

Published : Jan 11, 2023, 04:55 PM ISTUpdated : Jan 11, 2023, 05:42 PM IST
ಇದೊಳ್ಳೆ ಕಥೆಯಾಯ್ತಲ್ಲ...! ಫುಲ್​ ಡ್ರೆಸ್​ ಹಾಕಿದ್ರೂ ಮಲೈಕಾಳನ್ನು ಬಿಡದ ನೆಟ್ಟಿಗರು!

ಸಾರಾಂಶ

ಅರ್ಧಂಬರ್ಧ ಡ್ರೆಸ್​ ಹಾಕುವುದರಲ್ಲಿಯೇ ಫೇಮಸ್​ ಆಗಿರೋ ಬಾಲಿವುಡ್​ ನಟಿ ಮಲೈಕಾ ಅರೋರಾ ಫುಲ್​ ಡ್ರೆಸ್​ ಧರಿಸಿ ಫೋಟೋಗೆ ಪೋಸ್​ ಕೊಟ್ಟಾಗ ನೆಟ್ಟಿಗರು ಏನಂದ್ರು ನೋಡಿ...  

ಕೆಲ ದಶಕಗಳ ಹಿಂದೆ ಅಂಗಾಂಗ ತೋರಿಸುವುದಕ್ಕಾಗಿ ಚಲನಚಿತ್ರದಲ್ಲಿ ಒಂದಿಷ್ಟು ತಾರೆಯರು ಇರುತ್ತಿದ್ದರು. ನಾಯಕಿಯಾದವಳು ಸಭ್ಯತೆ ಮೀರಬಾರದು ಎಂಬ ಕಾರಣದಿಂದ ಆಕೆಗೆ ಸಭ್ಯವಾದ ಡ್ರೆಸ್​ ಹಾಕಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ  ತಾರೆಯರು ತಮ್ಮ ಮೈಮಾಟ ತೋರಿಸುವುದು  ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಹಲವು ಸಲ ತೀರಾ ಅಸಹ್ಯ ಎನ್ನುವಷ್ಟರ ಮಟ್ಟಿಗೆ ಅಂಗಾಂಗ ಪ್ರದರ್ಶನ ಮಾಡುವುದೂ ಇದೆ. ಅದರಲ್ಲಿಯೂ ಒಂದಾದ ಮೇಲೊಂದರಂತೆ ಚಿತ್ರ ತೋಪೆದ್ದು ಹೋದಷ್ಟೂ ಅಂಗಾಗ ಪ್ರದರ್ಶನ ಹೆಚ್ಚುತ್ತಲೇ ಸಾಗುತ್ತದೆ. ಹೀಗೆ ತಮ್ಮ ಅಂಗಾಂಗ ಪ್ರದರ್ಶನದಿಂದಲೇ ಪ್ರಸಿದ್ಧಿಯಾಗುತ್ತಿರುವ ನಟಿಯಲ್ಲಿ ಒಬ್ಬರು ಬಾಲಿವುಡ್​ನ ಮಲೈಕಾ ಅರೋರಾ. ವಯಸ್ಸು 49 ಆದರೂ ಫಿಟ್​ನೆಸ್​ (Fitness) ಕಾಪಾಡಿಕೊಂಡಿರುವ ನಟಿ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ರಿಯಾಲಿಟಿ ಷೋಗಳಿಗೆ ಜಡ್ಜ್​ ಆಗಿ ಬರುವುದರಿಂದ ಹಿಡಿದು ಹೊರಗಡೆ ಎಲ್ಲಿಯೇ ಹೋಗುವುದಿದ್ದರೂ ಅರ್ದಂಬರ್ಧ ಡ್ರೆಸ್​ ಧರಿಸುತ್ತಾರೆ.  ತಮ್ಮ ಫಿಟ್‌ನೆಸ್‌ನಿಂದ ಯುವ  ನಟಿಯರೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಫಿಟ್ ಆಗಿಟ್ಟುಕೊಳ್ಳಲು ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ.

ಇತ್ತೀಚೆಗೆ ಅವರು ತುಂಬಾ ಸುದ್ದಿಯಲ್ಲಿ ಇರಲು ಕಾರಣ, ಗರ್ಭಿಣಿ (Pregnant) ಯಾಗಿದ್ದಾರೆ ಎಂಬ ವದಂತಿ ಹರಡಿದ್ದ ಕಾರಣ, ಕೆಲ ದಿನಗಳ ಹಿಂದೆ ತಮ್ಮ ಮಾಜಿ ಪತಿ ಅರ್ಬಾಜ್​ ಖಾನ್​ (Arbaaz Khan) ಮತ್ತು ಮತ್ತ ತಮ್ಮ ಮದುವೆ ವಿಷಯದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಾವಾಗಿಯೇ  ಅರ್ಬಾಜ್ ಖಾನ್ ಗೆ ಪ್ರಪೋಸ್ ಮಾಡಿದ್ದ ವಿಷಯವನ್ನೂ ಹೇಳಿದ್ದರು. ನಂತರ ಅವರಿಗೆ ಡಿವೋರ್ಸ್​ ಕೊಟ್ಟಿದ್ದರು. ಈಗ ಅವರ ಹೆಸರು ಸೇರಿಕೊಂಡಿರುವುದು ಅವರಿಗಿಂತ 12 ವರ್ಷ ಚಿಕ್ಕವರಾಗಿರುವ  37 ವರ್ಷದ ಅರ್ಜುನ್ ಕಪೂರ್ (Arjun Kapoor)  ಜೊತೆಗೆ. ಇವರು ಕೆಲ ವರ್ಷಗಳಿಂದ ಒಟ್ಟಿಗೇ ಇದ್ದಾರೆ ಎನ್ನಲಾಗುತ್ತಿದ್ದು, ಅವರಿಂದಲೇ ಮಲೈಕಾ  ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯನೂ ಹರಡುತ್ತಿದೆ. ಅದೇನೇ ಇರಲಿ.

ಆಗಲೇ ಡುಮ್ಮಿ ಎನ್ನುತ್ತಿದ್ದರು, ಈಗ ಮಾಡ್ತೀನಿ ಅಂದ್ರೆ ಅವಕಾಶನೇ ಕೊಡಲ್ಲ: ಶಿಲ್ಪಾ ಶಿರೋಡ್ಕರ್

ಈಗಿನ ಹೊಸ ಸುದ್ದಿ ಏನು ಎಂದರೆ, ಮಲೈಕಾ ಅರೋರಾ ಎಂದ ತಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ದೇಹ ಪ್ರದರ್ಶಿಸುವ ನಟಿಯೆಂದೇ. ಆದರೆ ಅವರಿಗೆಲ್ಲಾ ಶಾಕ್​ ನೀಡುವಂತೆ ಮಲೈಕಾ ಫುಲ್​ ಡ್ರೆಸ್​ ಧರಿಸಿ ಮನೆಯಿಂದ ಹೊರಕ್ಕೆ ಬಂದಿದ್ದು, ಅದರ ಫೋಟೋ ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ನೋಡಿ ಅವರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಮಲೈಕಾ (Malaika Arora) ಅವರಿಗೆ ಫುಲ್​ ಡ್ರೆಸ್​ ಕೂಡ ಹಾಕಲು ಬರುತ್ತದೆಯೇ ಎಂದು ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಈಗ ವೈರಲ್​ ಆಗಿರುವ ಫೋಟೋಗಳಲ್ಲಿ  ಮಲೈಕಾ ಅರೋರಾ ಅವರು ಕಪ್ಪು ಬಣ್ಣದ ಟಾಪ್ ಮತ್ತು ಗ್ರೇ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ.  ಕಪ್ಪು ಬಣ್ಣದ ಟೋಪಿ ಧರಿಸಿದ್ದಾರೆ.

ಈ ಫೋಟೋದಲ್ಲಿ ನಟಿ ತಮ್ಮ ವಯಸ್ಸಿಗಿಂತ ತೀರಾ ಚಿಕ್ಕವರಂತೆ ಹಾಗೂ ಸುಂದರವಾಗಿ ಕಾಣುತ್ತಿದ್ದಾರೆ. ವಿಭಿನ್ನ ರೀತಿಯ ಪೋಸ್ ಕೊಟ್ಟು ಫೋಟೋ ಶೂಟ್​ (Photo Shoot)ಮಾಡಿಸಿಕೊಂಡಿದ್ದಾರೆ.  ಆದರೆ ಕೆಲವು ತರ್ಲೆ ನೆಟ್ಟಿಗರು ಮಲೈಕಾ ಅವರ ಕಾಲೆಳೆದಿದ್ದಾರೆ. ಮಲೈಕಾ... ಅದೂ... ಫುಲ್​ ಡ್ರೆಸ್​... ಸಾಧ್ಯವೇ ಇಲ್ಲ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಇದರಿಂದ ನೆಟ್ಟಿಗರು ಅವರನ್ನು ಟ್ರೋಲ್​  ಮಾಡುತ್ತಿದ್ದಾರೆ. ಹೆಚ್ಚಿನ ಪಕ್ಷಗಳಲ್ಲಿ ದೇಹ ಪ್ರದರ್ಶನ ಮಾಡಿದರೆ ನಟಿಯರನ್ನು ಟ್ರೋಲ್​ (Troll) ಮಾಡುವ ನೆಟ್ಟಿಗರು ಈಗ ಮಲೈಕಾ ಅವರ ಫುಲ್​ ಡ್ರೆಸ್​ಗೆ ಕಮೆಂಟ್​ಗಳ ಸುರಿಮಳೆಗೈದಿದ್ದಾರೆ. 

ನಟ ಅಕ್ಷಯ್​ ಕುಮಾರ್​ ಇನ್ನೊಂದು ಮುಖ ಬಯಲು: ಯುವತಿಗೆ ಹೊಸ ಲೈಫ್​

"ಅಂತಿಮವಾಗಿ ದೀದಿ ಚಳಿಯನ್ನು ಅನುಭವಿಸಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದು, ಈ ಕಮೆಂಟ್​ಗೆ ಸಿಕ್ಕಾಪಟ್ಟೆ ರೆಸ್​ಪಾನ್ಸ್​ ಬಂದಿದೆ. ಅದಕ್ಕೆ ಒಬ್ಬ ಅಭಿಮಾನಿ ಇದೊಳ್ಳೆ ಕಥೆಯಾಯಿತಲ್ಲ, ಫುಲ್​ ಡ್ರೆಸ್​ ಹಾಕಿದರೂ ಸಮಸ್ಯೆಯೇ ಎಂದು ಕೇಳಿದ್ದಾನೆ. ಅದಕ್ಕೆ ಇನ್ನೊಬ್ಬರು ಮಲೈಕಾ ಅರೋರಾ ಅವರನ್ನು ನಾನು ಫುಲ್​ ಡ್ರೆಸ್(Full Dress) ​ನಲ್ಲಿ ಕನಸಿನಲ್ಲಿಯೂ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಫೋಟೋ ನೋಡಿದರೆ ಚಿತ್ರದಲ್ಲಿ ಇರುವವರು ಮಲೈಕಾ ಅವರಲ್ಲ, ಬೇರೆ ಯಾರೋ ಇರಬೇಕು ಎನ್ನಿಸುತ್ತಿದೆ ಎಂದಿದ್ದಾರೆ! ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಫುಲ್​ ಡ್ರೆಸ್​ ಟ್ರೋಲ್​ ಮಾಡುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!