ನನ್ನ ಸ್ಥಿತಿ ನಿಮಗೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ಸಮಂತಾ ಟ್ರೋಲಿಗರಿಗೆ ಪ್ರತಿಕ್ರಿಯೆ ನೀಡಿರುವುದು ವೈರಲ್ ಆಗಿದೆ.
ಸೌತ್ ಸ್ಟಾರ್ ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇತ್ತೀಚಿಗಷ್ಟೆ ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಮಂತಾ ಕೂಡ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಇದಾಗಿದೆ. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಕೆಲವರು ಸಮಂತಾ ತುಂಬಾ ಡಲ್ ಆಗಿದ್ದಾರೆ ಮೊದಲಿನ ಹಾಗೆ ಚಾರ್ಮ್ ಇಲ್ಲ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
Myositis ಕಾಯಿಲೆ ಇಂದ ಬಳಲುತ್ತಿರುವ ವಿಚಾರವನ್ನು ಸಮಂತಾ ಕಳೆದವರ್ಷ ಅಧಿಕೃತ ಮಾಡಿದರು. ಸದ್ಯ ಸಮಂತಾ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಸಿನಿಮಾಗಳಿಗೆ ಮರಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸಮಂತಾ ಫೋಟೋಗಳನ್ನು ಕೆಲವರು ಶೇರ್ ಮಾಡಿ, 'ಸಮಂತಾ ಮೊದಲಿನ ಚಾರ್ಮ್ ಉಳಿಸಿಕೊಂಡಿಲ್ಲ' ಎಂದು ಬರೆಯಲಾಗಿತ್ತು. ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್ನ ರೀಟ್ವೀಟ್ ಮಾಡಿರುವ ಸಮಂತಾ, ‘ನಾನು ತಿಂಗಳಗಟ್ಟಲೆ ಚಿಕಿತ್ಸೆ ಪಡೆದುಕೊಂಡಷ್ಟು ಮತ್ತು ಔಷಧಗಳನ್ನು ತೆಗೆದುಕೊಂಡಷ್ಟು ನೀವು ತೆಗೆದುಕೊಳ್ಳದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತಷ್ಟು ಚಾರ್ಮ್ ಪಡೆಯಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ’ ಎಂದು ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.
ಸಮಂತಾ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಸಮಂತಾ ಪ್ರತಿಕ್ರಿಯೆ ನೋಡಿ ಸರಿಯಾದ ಉತ್ತರ ಎಂದು ಹೇಳುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ನಂತರ ಸಮಂತಾ ಬಗ್ಗೆ ಅನೇಕರು ಈ ರೀತಿ ಹೇಳಿದರೂ ಎಷ್ಟು ಕೂಲ್ ಆಗಿ ಒಳ್ಳೆಯ ಮನಸ್ಸಿನಿಂದ ಟ್ವೀಟ್ ಮಾಡಿದ್ದಾರೆ ಖುಷಿಯ ವಿಚಾರ ಎಂದು ಅನೇಕರು ಬರೆದುಕೊಂಡಿದ್ದಾರೆ.
I pray you never have to go through months of treatment and medication like I did ..
And here’s some love from me to add to your glow 🤍 https://t.co/DmKpRSUc1a
ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದಿದ್ದೇಕೆ ಸಮಂತಾ? ದಿನಕ್ಕೆ 10,008 ಬಾರಿ ಜಪಿಸುತ್ತಾರಂತೆ ಸ್ಯಾಮ್
ಈವೆಂಟ್‌ನಲ್ಲಿ ಸಮಂತಾ ಕಣ್ಣೀರು
ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸಮಂತಾ ಕಣ್ಣೀರಿಟ್ಟರು. ಕಷ್ಟದಲ್ಲೂ ಒಂದೊಳ್ಳೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ಸಮಂತಾ ದುಃಖದ ಜೊತೆ ಸಂತೋಷದ ಕಣ್ಣೀರು ಹಾಕಿದ್ರು. ನಿರ್ದೇಶಕ ಗುಣಶೇಖರ್ ಸಮಂತಾ ಅವರ ಬಗ್ಗೆ ಮಾತನಾಡುವಾಗ ಸಮಂತಾ ಕಣ್ಣೀರು ಹಾಕಿದರು. ನಿರ್ದೇಶಕ ಗುಣ ಶೇಖರ್ ಅವರು ಸಮಂತಾ ಅವರನ್ನು ಈ ಸಿನಿಮಾದ ರಿಯಲ್ ಹೀರೋ ಎಂದು ಹೇಳಿದರು. ಬಳಿಕ ಸಮಂತಾ ಮಾತನಾಡಿ, 'ಈ ಕ್ಷಣಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ. ಎಷ್ಟೇ ಕಷ್ಟಗಳು ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನು ಪ್ರೀತಿಸುತ್ತಿದೆ' ಎಂದು ಸಮಂತಾ ಭಾವುಕರಾದರು.
ಎಷ್ಟೇ ಕಷ್ಟ ಬಂದರೂ ಸಿನಿಮಾ ಪ್ರೀತಿ ಕಳೆದುಕೊಂಡಿಲ್ಲ; ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕಣ್ಣೀರಿಟ್ಟ ಸಮಂತಾ
ಸ್ಯಾಮ್ ಕೈಯಲ್ಲಿ ರುದ್ರಾಕ್ಷಿ ಮಾಲೆ
ಆರೋಗ್ಯ ಮತ್ತು ಶಾಂತಿಗಾಗಿ ಪ್ರತಿದಿನ 10,008 ಜಪವನ್ನು ಪಠಿಸುವುದಾಗಿ ಸಮಂತಾ ಹೇಳಿದ್ದಾರೆ. ಕ್ರಿಶ್ಚಿಯನ್ನರು ಕೂಡ ಜಪಮಾಲೆ ಬಳಸುತ್ತಾರೆ. ಇದೀಗ ಸಮಂತಾ ಕೂಡ ಆರೋಗ್ಯ ಮತ್ತು ಶಾಂತಿಗಾಗಿ ರುದ್ರಾಕ್ಷಿ ಮಾಲೆ ಹಿಡಿದಿದ್ದಾರೆ. ಅಂದಹಾಗೆ ಸಮಂತಾ ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಇದೀಗ ರುದ್ರಾಕ್ಷಿ ಕೂಡ ಮಾಲೆ ಹಿಡಿದು ಜಪ ಮಾಡುತ್ತಿದ್ದಾರೆ. ಪ್ರತಿ ದಿನ ಸಮಯ ಸಿಕ್ಕಾಗಲೆಲ್ಲಾ ಜಪ ಮಾಡುತ್ತಿರುತ್ತಾರೆ. ಹಾಗಾಗಿ ದಿನವಿಡಿ ಜಪಮಾಲೆ ಹಿಡಿದುಕೊಂಡಿರುತ್ತಾರೆ ಎನ್ನಲಾಗಿದೆ.