ಜನರ ಪ್ರಾಣ ತೆಗೆವ ಕೆಲಸ ಮಾಡಿದ್ರಾ ನಟಿ? ಸಮಂತಾರನ್ನು ಜೈಲಿಗೆ ಅಟ್ಟಿ ಎಂದ ಖ್ಯಾತ ವೈದ್ಯ! ನಟಿ ಹೇಳಿದ್ದೇನು?

By Suchethana D  |  First Published Jul 5, 2024, 6:17 PM IST

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಾಡ್​ಕಾಸ್ಟ್​ನಲ್ಲಿ ಲಿವರ್​ ಕುರಿತು ತಪ್ಪು ಮಾಹಿತಿ ನೀಡಿದ್ರಾ ನಟಿ ಸಮಂತಾ ರುತ್​ ಪ್ರಭು? ಈ ವೈದ್ಯರು ಹೇಳ್ತಿರೋದೇನು? ನಟಿ ಹೇಳಿದ್ದೇನು?
 


ಮಯೋಸೈಟಿಸ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನಟಿ  ಸಮಂತಾ ರುತ್​ ಪ್ರಭು ಆರೋಗ್ಯದ ವಿಷಯದಲ್ಲಿ ಜನರಿಗೆ ಟಿಪ್ಸ್​ ಕೊಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಈ ರೀತಿ ಟಿಪ್ಸ್​ ನೀಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟ ಆಡಿರುವ ನಟಿಯನ್ನು ಜೈಲಿಗೆ ಹಾಕುವಂತೆ ಖ್ಯಾತ ವೈದ್ಯ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಹೇಳಿದ್ದು, ಈ ವಿಚಾರ ಕೆಲ ತಿಂಗಳುಗಳಿಂದ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. ಅಷ್ಟಕ್ಕೂ ನಟಿ,  ಮಯೋಸೈಟಿಸ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ನಡುವೆಯೇ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ನಟಿ  ತಮ್ಮ ಮಯೋಸೈಟಿಸ್‌ ಕಾಯಿಲೆ ಹಾಗೂ ತಾವು ಅನುಭವಿಸಿದ ತೊಂದರೆ ಕುರಿತು ಮಅತನಾಡಿದ್ದರು.  ಮಯೋಸೈಟಿಸ್ ಸಮಸ್ಯೆ ಎದುರಿಸುವುದು ನನಗೆ   ಅತ್ಯಂತ ಕಷ್ಟಕರವಾಗಿತ್ತು. ಪ್ರತಿ ವರ್ಷವೂ ಹಿಂಸೆ ಅನುಭವಿಸಿದ್ದೇನೆ.  ನನ್ನ ಮ್ಯಾನೇಜರ್ ಹಿಮಾಂಕ್ ಮತ್ತು ನಾನು ಮುಂಬೈನಿಂದ ಹಿಂತಿರುಗುತ್ತಿದ್ದ ದಿನ ಅದು. ನನಗೆ ಬಹಳ ಸಮಯದಿಂದ ಶಾಂತಿ ಎಂಬುದೇ ಇರಲಿಲ್ಲ. ಅಂತಿಮವಾಗಿ ನಾನು ಹಾಯಾಗಿ ನಿದ್ರೆ ಮಾಡಬಹುದು ಎಂದು ನನಗೆ ಅನಿಸಿತ್ತು. ಹೀಗೆ ಎಂದುಕೊಳ್ಳುವಾಗಲೇ ನನಗೆ ಮಯೋಸೈಟಿಸ್ ಕಾಣಿಸಿಕೊಂಡಿತು ಎಂದು ಸಮಂತಾ ಹೇಳುವ ಮೂಲಕ ನೋವನ್ನು ತೋಡಿಕೊಂಡಿದ್ದರು. 

ಇದರ ನಡುವೆಯೇ ನಟಿ, ಅವರ ಪಾಡ್​ಕಾಸ್ಟ್​ ‘ಟೇಕ್​ 20’ (Take 20) ಕಾರ್ಯಕ್ರಮದಲ್ಲಿ ಕೆಲವೊಂದು ಆರೋಗ್ಯಕರ ಟಿಪ್ಸ್​ ಹೇಳಿದ್ದೇ ಈಗ ಎಡವಟ್ಟಿಗೆ ಕಾರಣವಾಗಿದೆ.  ಅಷ್ಟಕ್ಕೂ, ನಟಿ  ಟೇಕ್ 20: ಹೆಲ್ತ್ ಪಾಡ್ ಕ್ಯಾಸ್ಟ್ ಸೀರಿಸ್ ನಲ್ಲಿ ಪಾಡ್ ಕ್ಯಾಸ್ಟ್ ನ ಮೊದಲ ಸಂಚಿಕೆ ಆಟೊ ಇಮ್ಯುನಿಟಿಯ ಕುರಿತಂತೆ ಒಂದು ಸಂಚಿಕೆ ಮಾಡಿದ್ದರು. ಇದರಲ್ಲಿ ಯಕೃತ್ತು ಅಂದರೆ ಲಿವರ್​ ಆರೋಗ್ಯದ ಬಗ್ಗೆ ಕೆಲವೊಂದು ಮಾಹಿತಿ ಶೇರ್​ ಮಾಡಿಕೊಳ್ಳಲಾಗಿದೆ.  ನಟಿ ಸಮಂತಾ ಅವರು ಪಾಡ್​ಕಾಸ್ಟ್​ಗೆ ಬಂದಿರುವ  ಅತಿಥಿ ಜೊತೆ ಇದರ ವಿಷಯದ ಬಗ್ಗೆ ಮಾತನಾಡಿದ್ದಾರೆ. ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ನಟಿ ಹೇಳಿದ್ದರು.  ಇದರ ವಿರುದ್ಧ ವೈದ್ಯರಿಂದ  ಆಕ್ರೋಶ ವ್ಯಕ್ತವಾಗಿದ್ದು, ನಟಿಯನ್ನು ಜೈಲಿಗೆ ಹಾಕುವಂತೆ ಹೇಳಿದ್ದಾರೆ.  

Tap to resize

Latest Videos

ಖೋಟಾನೋಟ್​ನಲ್ಲಿ ಸಿಕ್ಕಿಬಿದ್ದ ಬೆಳಗಾವಿಯ ಗ್ಯಾಂಗ್: ಶಾಹಿದ್​ ಕಪೂರ್​, ವಿಜಯ್​ ಸೇತುಪತಿಯೇ ಇವರ ಲೀಡರ್​
  
ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಅವರು ಸಮಂತಾ ಅವರ ಸಲಹೆಯನ್ನು ಟೀಕಿಸಿದ್ದು,  ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ’ ಎಂದು ಕರೆದಿದ್ದರು. ಪ್ರಭಾವಿ ನಟಿ ಸಮಂತಾ ಅವರು ವಿಜ್ಞಾನ ಹಾಗೂ ಆರೋಗ್ಯದ ಬಗ್ಗೆ ಯಾವುದೇ ಜ್ಞಾನ ಹೊಂದಿಲ್ಲ. ಅವರು ಸೋಷಿಯಲ್​ ಮೀಡಿಯಾದಲ್ಲಿ 33 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿದ್ದು ಅವರ ಜೀವದ ಜೊತೆ ಚೆಲ್ಲಾಟವಾಡಿದ್ದದಾರೆ.  ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ಅವರು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ, ಇದು ಆರೋಗ್ಯಕ್ಕೆ ಅಪಾಯಕಾರಿ. ಎಂದು ಹೇಳಿದೆ. ಆದರೆ ಅದನ್ನೇ ನಟಿ ಹೇಳುವ ಮೂಲಕ ಜನರ ದಾರಿ ತಪ್ಪಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
  
ಇದೀಗ ನಟಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಸುದೀರ್ಘ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.  ‘ಉತ್ತಮ ಉದ್ದೇಶದಿಂದ’ ಹೈಡ್ರೋಜನ್ ಪೆರಾಕ್ಸೈಡ್ ನೆಬ್ಯುಲೈಸೇಶನ್ ಅನ್ನು ನಾನು ಸಜೆಸ್ಟ್​ ಮಾಡಿದ್ದೆ.  ಲಿವರ್ ಡಾಕ್ಟರ್ ಎಂದೇ ಫೇಮಸ್ ಆಗಿರುವ ವೈದ್ಯರು ತಮ್ಮ ಮಾತುಗಳಲ್ಲಿ ಸ್ವಲ್ಪ ದಯೆ ಮತ್ತು ಸಹಾನುಭೂತಿ ಇಡಬಹುದಾಗಿತ್ತು. ಅದರಲ್ಲೂ ವಿಶೇಷವಾಗಿ ನನ್ನನ್ನು ಜೈಲಿಗೆ ಹಾಕಬೇಕೆಂದು ಅವರು ಸೂಚಿಸುತ್ತಾರೆ. ಪರವಾಗಿಲ್ಲ. ನಾನು ಸೆಲೆಬ್ರಿಟಿಯಾಗಿರುವ ಸ್ಪೇಸ್​​ನಲ್ಲಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಯಾಗಿ ಪೋಸ್ಟ್ ಮಾಡಿದ್ದೇನೆ. ಸೆಲೆಬ್ರಿಟಿಯಾಗಿ ಪೋಸ್ಟ್ ಮಾಡಿಲ್ಲ ಎಂದಿದ್ದಾರೆ.ನ ನ್ನ ಹಿಂದೆ ಬರುವುದರ ಬದಲಾಗಿ ಹೆಚ್ಚಾಗಿ ನನ್ನ ಪೋಸ್ಟ್‌ನಲ್ಲಿ ನಾನು ಟ್ಯಾಗ್ ಮಾಡಿದ ನನ್ನ ವೈದ್ಯರನ್ನು ಸಂಪರ್ಕಿಸಬಹುದಾಗಿತ್ತು. ಅವರನ್ನು ನಯವಾಗಿ ಚರ್ಚೆಗೆ ಆಹ್ವಾನಿಸಿದ್ದರೆ ಚೆನ್ನಾಗಿರುತ್ತಿತ್ತು. ಇಬ್ಬರು ಹೆಚ್ಚು ಅರ್ಹ ವೃತ್ತಿಪರರ ನಡುವಿನ ಚರ್ಚೆಯಿಂದ ನಾನು ಕಲಿಯಲು ಇಷ್ಟಪಡುತ್ತಿದ್ದೆ ಎಂದು ನಟಿ ಬರೆದಿದ್ದಾರೆ. 

ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟ ದೀಪಿಕಾ ಪಡುಕೋಣೆಯಿಂದ ಇದೆಂಥ ಹೇಳಿಕೆ? ಬಾಲಿವುಡ್​ನಲ್ಲಿ ಹಲ್​ಚಲ್​!

click me!