Kubera ಚಿತ್ರದ ರಶ್ಮಿಕಾ ಫಸ್ಟ್ ಲುಕ್ ರಿವೀಲ್, ದುಡ್ಡಿನ ಸೂಟ್‌ಕೇಸ್ ನೋಡಿ ಕುತೂಹಲ ಹುಟ್ಟಿಸಿದೆ ಸಿನಿಮಾ!

Published : Jul 05, 2024, 02:40 PM IST
Kubera ಚಿತ್ರದ ರಶ್ಮಿಕಾ ಫಸ್ಟ್ ಲುಕ್ ರಿವೀಲ್, ದುಡ್ಡಿನ ಸೂಟ್‌ಕೇಸ್ ನೋಡಿ ಕುತೂಹಲ ಹುಟ್ಟಿಸಿದೆ ಸಿನಿಮಾ!

ಸಾರಾಂಶ

ಒಂದಾದ್ಮೇಲೆ ಒಂದು ಸೂಪರ್ ಹಿಟ್ ಚಿತ್ರ ನೀಡ್ತಿರುವ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ಧಮಾಲ್ ಮಾಡಲು ಸಿದ್ಧವಾಗಿದ್ದಾರೆ. ಅವರು ಅಭಿನಯದ ಕುಬೇರಾ ಚಿತ್ರದಲ್ಲಿ ಅವರ ಪಾತ್ರವೇನು ಎಂಬುದು ರಿವಾಲ್ ಆಗಿದೆ. ದೃಶ್ಯ ನೋಡಿದ ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಂಡಿದೆ.   

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೆ ಹಿಟ್ ಚಿತ್ರಗಳನ್ನು ನೀಡಿರುವ ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ (National Crush Rashmika Mandanna) ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ರಶ್ಮಿಕಾ ನೆಕ್ಸ್ಟ್ ಸಿನಿಮಾ ಬಗ್ಗೆ ಕಾತುರದಿಂದ ಕಾಯ್ತಿರುವ ಅಭಿಮಾನಿಗಳಿಗೆ ನಟಿ ಸೂಪರ್ ಗಿಫ್ಟ್ ನೀಡಿದ್ದಾರೆ. ಕುಬೇರಾ ಚಿತ್ರದಲ್ಲಿ ರಶ್ಮಿಕಾ ರೋಲ್ ರಿವಾಲ್ ಆಗಿದೆ. ಶೇಖರ್ ಕಮ್ಮುಲ ನಿರ್ದೇಶನದ ಕುಬೇರಾ ಚಿತ್ರದಲ್ಲಿ, ರಶ್ಮಿಕಾ ಹೇಗೆ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು ಒಂದು ಕಡೆಯಾದ್ರೆ, ದೃಶ್ಯ ನೋಡಿದ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡುವ ಆತುರದಲ್ಲಿದ್ದಾರೆ. 

ಕುಬೇರ (Kubera) ಚಿತ್ರ ತಂಡ, ನಿನ್ನೆಯೇ ರಶ್ಮಿಕಾ (Rashmika) ಪಾತ್ರ ಪರಿಚಯ ಮಾಡೋದಾಗಿ ತಿಳಿಸಿತ್ತು. ಅದರಂತೆ ಇಂದು ಕುತೂಹಲಕಾರಿ ಪರಿಚಯದ ವೀಡಿಯೊವನ್ನು ಅನಾವರಣಗೊಳಿಸಿದೆ. ರಶ್ಮಿಕಾ ಮಂದಣ್ಣ ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಸಿನಿಮಾ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ಕುಬೇರಾ ಎಂದು ಬರೆದಿರುವ ಅವರು ಹಾರ್ಟ್ ಸಿಂಬಲ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ತುಂಬಾ ಸಿಂಪಲ್ ಆಗಿ ಕಾಣ್ತಿದ್ದಾರೆ. ಸರಳವಾದ ಜೋಡಿದಾರ್ ಧರಿಸಿರುವ ರಶ್ಮಿಕಾ ಮಂದಣ್ಣ, ಕತ್ತಲ ಜಾಗಕ್ಕೆ ಒಬ್ಬರೇ ಬರ್ತಾರೆ. ಅಲ್ಲಿ ಹೊಂಡ ತೆಗೆದು ಟ್ರಾಲಿ ಬ್ಯಾಗ್ ಒಂದನ್ನು ಹೊರಗೆ ತೆಗೆಯುವ ಅವರು ಅದ್ರಲ್ಲಿ ತುಂಬ ತುಂಬಿರುವ ಹಣ ನೋಡಿ ಖುಷಿಯಾಗ್ತಾರೆ. ಕೈ ಮುಗಿದು, ಬ್ಯಾಗ್ ಎಳೆದುಕೊಳ್ತಾ ಹೋಗುವ ದೃಶ್ಯ ಅಧ್ಬುತವಾಗಿದೆ.

ಮತ್ತೆ ತೆರೆ ಮೇಲೆ ರಶ್ಮಿಕಾ-ವಿಜಯ್ ದೇವರಕೊಂಡ, ಅಭಿಮಾನಿಗಳಿಗೆ ಹಿಂಟ್ ನೀಡಿದ್ರಾ ನಿರ್ದೇಶಕ?

ರಶ್ಮಿಕಾ ತಮ್ಮ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿ ಅರ್ಧಗಂಟೆ ಕೂಡ ಆಗ್ಲಿಲ್ಲ. ಆಗ್ಲೇ ಒಂದು ಲಕ್ಷ 25 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಅಭಿಮಾನಿಗಳಿಗೆ ರಶ್ಮಿಕಾ ಲುಕ್ ಇಷ್ಟವಾಗಿದೆ. ಚಿತ್ರದ ಈ ದೃಶ್ಯ, ಸಿನಿಮಾ ವೀಕ್ಷಣೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.  

ಕುಬೇರ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ್ ನಿರ್ದೇಶನ ಮಾಡಿದ್ದಾರೆ. ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅಕ್ಕಿನೇನಿ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಶಿವರಾತ್ರಿಯಂದು ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೈಲರ್ ರಿವೀಲ್ ಆಗಿತ್ತು. ಗಡ್ಡ ಬಿಟ್ಟ ಧನುಶ್, ಶಿವ – ಪಾರ್ವತಿ ಫೋಟೋ ಮುಂದೆ ನಿಂತಿದ್ದರು. ಈ ಚಿತ್ರದಲ್ಲಿ ಧನುಶ್ ಮೊದಲ ಬಾರಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ಧನುಶ್ ಜೊತೆ ರಶ್ಮಿಕಾ ನಟನೆ ಮಾಡ್ತಿರೋದು ಇನ್ನೊಂದು ವಿಶೇಷ. ಧನುಶ್, ನಾಗಾರ್ಜುನ್ ಅಕ್ಕಿನೇನಿ ಹಾಗೂ ರಶ್ಮಿಕಾ ಮೂವರನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. 

ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್‌!

ಈಗಾಗಲೇ ರಣಬೀರ್ ಕಪೂರ್ ಜೊತೆ ಎನಿಮಲ್ ಚಿತ್ರದಲ್ಲಿ ಅಧ್ಬುತವಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಬಳಿ ಸಾಕಷ್ಟು ಚಿತ್ರಗಳಿವೆ. ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಅಭಿಮಾನಿಗಳಿಗೆ ನೀಡಲಿದ್ದಾರೆ. ಕುಬೇರ್ ಜೊತೆಗೆ ಅವರು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ ಪುಷ್ಪ 2 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2021 ರಲ್ಲಿ ಬಿಡುಗಡೆಯಾದ ಪುಷ್ಪಾ ಚಿತ್ರದ ಮುಂದುವರಿದ ಭಾಗವಾಗಿದೆ. ಇದಲ್ಲದೆ ಅವರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಸಿಕಂದರ್‌ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಎಆರ್ ಮುರುಗೋದಾಸ್ ನಿರ್ದೇಶಿಸುತ್ತಿದ್ದಾರೆ. ಇದಲ್ಲದೆ ನಟಿ ವಿಕ್ಕಿ ಕೌಶಲ್ ಜೊತೆ ಛಾವಾ ಚಿತ್ರದಲ್ಲಿ ರಶ್ಮಿಕಾ ಭಿನ್ನ ರೋಲ್ ನಲ್ಲಿ ನಟಿಸಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?