ಹೆಲ್ತ್ ಅಪ್‌ಡೇಟ್ ನೀಡಿದ ಸಮಂತಾ; ಚಿಕಿತ್ಸೆ ಬಗ್ಗೆ ಹೇಳಿದ್ದೇನು?

By Shruthi Krishna  |  First Published Feb 12, 2023, 11:08 AM IST

ಸೌತ್  ಸ್ಟಾರ್ ಸಮಂತಾ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು ಹೊಸ ಚಿಕಿತ್ಸೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. 


ಟಾಲಿವುಡ್ ಸ್ಟಾರ್ ನಟಿ ಸಮಂತಾ ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಸ್ಯಾಮ್ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಮತ್ತೆ ವರ್ಕೌಟ್ ಪ್ರಾರಂಭಿಸಿರುವ ಸಮಂತಾ ಕೈಯಲ್ಲಿ ಡ್ರಿಪ್ ಇದ್ದರೂ ಜಿಮ್ ನಲ್ಲಿ ಬೆವರಿಳುತ್ತಿದ್ದಾರೆ.  ಸಮಂತಾ ಕ್ಯಾಮರಾ ಮುಂದೆ ಬರದೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅನೇಕ ತಿಂಗಳುಗಳೇ ಆಗಿತ್ತು. ಶಾಕುಂತಲಂ ಸಿನಿಮಾ ಪ್ರಮೋಷನ್ ಸಮಯದಲ್ಲಿ ಸಮಂತಾ ಕ್ಯಾಮರಾ ಮುಂದೆ ಬಂದಿದ್ದರು, ಕಣ್ಣೀರಾಕಿದ್ರು. ಶಾಕುಂತಲಂ ಪ್ರಮೋಷನ್ ಜೊತೆಗೆ ಸಮಂತಾ ಹಿಂದಿಯ ಸಿಟಾಡೆಲ್ ವೆಬ್ ಸೀರಿಸ್‌ನಲ್ಲೂ ಬ್ಯುಸಿಯಾಗಿದ್ದಾರೆ. 

ಸಿನಿಮಾ ಶೂಟಿಂಗ್ ಗಳ ನಡುವೆ ಸಮಂತಾ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. IVIg ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ತನ್ನ ಆಪ್ತ ಸ್ನೇಹಿತೆ ನಂದಿನಿ ರೆಡ್ಡಿ ನಿರ್ದೇಶಕ ರಾಹುಲ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದರು. ಭೇಟಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ತಿಂಗಳ  IVIG ಪಾರ್ಟಿ, ಹೊಸದು' ಎಂದು ಹೇಳಿದ್ದಾರೆ. IVIG ಎಂದರೆ ಥೆರಪಿಯಾಗಿದೆ.  "ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ." ಸದ್ಯ ಸಮಂತಾ ಕೂಡ ಇದೇ ಚಿಕಿತ್ಸೆಯನ್ನು ಅನುಸರಿಸುತ್ತಿದ್ದಾರೆ. 

Tap to resize

Latest Videos

ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆಯ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ. ಸಮಂತಾ ಫೋಟೋವನ್ನು ಶೇರ್ ಮಾಡಿದ್ದಾರೆ. ಡ್ರಿಪ್ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಆದರೆ ಅವರ ಮುಖ ಕಾಣುವುದಿಲ್ಲ. ಸಮಂತಾ ಬೇಗ ಗುಣಮುಖರಾಗಲಿ, ಹೆಚ್ಚು ಸಿನಿಮಾಗಳನ್ನು ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಸಮಂತಾ ಭಾಗಿ; ವರುಣ್ ಧವನ್ ನಾಯಕ

ಶಾಕುಂತಲಂ ಸಿನಿಮಾ ಬಗ್ಗೆ 

ಸದ್ಯ ಸಮಂತಾ ಶಾಕುಂತಲಂ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ  ಸಿನಿಮಾ ಇದೇ ತಿಂಗಳು ರಿಲೀಸ್ ಆಗಬೇಕಿತ್ತು. ಆದರೆ ಏಪ್ರಿಲ್ ತಿಂಗಳಿಗೆ ಮುಂದಕ್ಕೆ ಹೋಗಿದೆ. ಏಪ್ರಿಲ್ 14ರಂದು ಶಾಕುಂತಲಂ ರಿಲೀಸ್ ಆಗುತ್ತಿದೆ. ಶಾಕುಂತಲಂ, ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಬಂದ ಸಿನಿಮಾವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಶಾಕುಂತಲಂ ಹೇಗೆ ಮೂಡಿಬಂದಿದೆ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. 

ಇದು ಕಾಳಿದಾಸ ಅವರ ಅಭಿಜ್ಞಾನ ಶಾಕುಂತಲ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾ ಶಾಕುಂತಲಾ ಮತ್ತು ರಾಜ ದುಶ್ಯಂತ ಮಹಾಕಾವ್ಯದ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಸಮಂತಾ ಮತ್ತು ದೇವ್ ಮೋಹನ್ ಜೊತೆಗೆ ಕಬೀರ್ ಬೇಡಿ, ಪ್ರಕಾಶ್ ರಾಜ್, ಸಚಿನ್ ಖೇಡೇಕರ್, ಜಿಶು ಸೇನ್‌ಗುಪ್ತ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ.

Citadel First Look: ಅನಾರೋಗ್ಯದ ಬಳಿಕ ಸಮಂತಾ ಮಾಸ್ ಎಂಟ್ರಿ; ಫ್ಯಾನ್ಸ್ ಫುಲ್ ಖುಷ್

ಸಮಂತಾ ಕೊನೆಯದಾಗಿ ಯಶೋದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನಾನರೋಗ್ಯದ ಬಳಿಕ ರಿಲೀಸ್ ಆದ ಸಮಂತಾ ಅವರ ಮೊದಲ ಸಿನಿಮಾವಾಗಿತ್ತು. ಇದೀಗ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹಿಂದಿಯ ಸಿಟಾಡೆಲ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

click me!