ನಾಗ ಚೈತನ್ಯ ಮಗುವಿಗೆ ತಾಯಾಗುತ್ತಿದ್ದಾರಾ ಸಮಂತಾ! ಆಪ್ತಮೂಲಗಳಿಂದ Good News

Suvarna News   | Asianet News
Published : Sep 30, 2021, 02:25 PM IST
ನಾಗ ಚೈತನ್ಯ ಮಗುವಿಗೆ ತಾಯಾಗುತ್ತಿದ್ದಾರಾ ಸಮಂತಾ! ಆಪ್ತಮೂಲಗಳಿಂದ Good News

ಸಾರಾಂಶ

ನಾಗ ಚೈತನ್ಯ- ಸಮಂತಾ ಜೋಡಿಯ ಡಿವೋರ್ಸ್ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದರೆ, ಇದೀಗ ಸಿಹಿ ಸುದ್ದಿಯೊಂದು ಬಂದಿದೆ. ಸಮಂತಾ ಮಗು ಹೊಂದುವ ಮನಸ್ಸು ಮಾಡಿದ್ದಾರೆ. ಒಂದು ವೇಳೆ ಹಾಗಾದರೆ ಇವರಿಬ್ಬರ ನಡುವಿನ ಬಿರುಕು ಶಾಶ್ವತವಾಗಿ ಅಳಿಸಿಹೋಗಬಹುದು.  

ಸಿನಿಮಾ (Movies) ಹೊರತಾದ ಕಾರಣಕ್ಕೆ ದಕ್ಷಿಣ ಭಾರತೀಯ (South India) ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವುದು ನಾಗಚೈತನ್ಯ (Naga Chaitanya) ಸಮಂತಾ (Samantha) ಜೋಡಿಯ ಡಿವೋರ್ಸ್ (Divorce) ವಿಚಾರ. ಟಾಲಿವುಡ್ ನಟಿ ಸಮಂತಾ ಹಾಗೂ ನಾಗಚೈತನ್ಯ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನುವ ವದಂತಿ ಕಳೆದ ಕೆಲವು ತಿಂಗಳಿಂದ ಕೇಳಿ ಬರುತ್ತಲೇ ಇದೆ. ಸದ್ಯದಲ್ಲೇ ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿಯೂ ಎಲ್ಲೆಡೆ ಹರಡಿದೆ. ಟಾಲಿವುಡ್ (Tollywood) ಬಿಡಿ, ಇಡೀ ಸೌತ್‌ ಇಂಡಿಯನ್ ಸಿನಿಮಾ ಜಗತ್ತಿಂದ ಹಿಡಿದು ಸಾಮಾನ್ಯ ಜನರೂ ಈ ಇಬ್ಬರ ದಾಂಪತ್ಯದ ಬಗ್ಗೇ ಮಾತಾಡುತ್ತಿದ್ದಾರೆ. ಈ ಸುದ್ದಿ ಇಷ್ಟೆಲ್ಲ ರೆಕ್ಕೆ ಪುಕ್ಕ ಮೂಡಿಸಿಕೊಂಡು ಹಾರಾಡುವುದಕ್ಕೆ ಮುಖ್ಯ ಕಾರಣ ಈ ಬಗ್ಗೆ ಸಮಂತಾ ಆಗಲೀ, ನಾಗಚೈತನ್ಯ ಆಗಲೀ ಕಮಕ್ ಕಿಮಕ್‌ ಅನ್ನದೇ ಇರೋದು. ಈ ವಿಚಾರ ಕೇಳಿದ ತಕ್ಷಣ ಇಬ್ಬರೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡ್ತಿದ್ದಾರೆ. ಇದು ಗಾಸಿಪ್‌ (Gossip) ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಆದರೆ ಇದಕ್ಕೂ ತನಗೂ ಸಂಬಂಧ ಇಲ್ಲ ಅನ್ನೋ ಹಾಗೆ ಸಮಂತಾ ಸುರಿಯೋ ಮಳೆಯಲ್ಲಿ 21 ಕಿಮೀ ಸೈಕಲ್ ಹೊಡೆದು ಬಂದರೆ, ನಾಗಚೈತನ್ಯ ಕ್ಯೂಟ್ ಸಾಯಿ ಪಲ್ಲವಿ  (Sai Pallavi) ಜೊತೆಗೆ 'ಲವ್‌ಸ್ಟೋರಿ' (Love Story) ಸಕ್ಸಸ್ ಮೀಟ್ ನಲ್ಲಿ ಖುಷಿಯಾಗಿದ್ದಾರೆ. 

ಸಮಂತಾ-ನಗಚೈತನ್ಯ ವಿಚ್ಛೇದನೆ: ಸ್ಟಾರ್ ಜೋಡಿಗೆ ನಟಿ ಶ್ರೀರೆಡ್ಡಿ ಕಿವಿಮಾತಿದು

ಆದರೆ ಈ ಎಲ್ಲ ಗಾಸಿಪ್‌ಗಳಾಚೆ ಇದೀಗ ಕೇಳಿ ಬರುತ್ತಿರುವ ಸುದ್ದಿ ಅಂದರೆ ಸಮಂತಾ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಅನ್ನುವುದು. ಸಮಂತಾ ಹಾಗೂ ನಾಗಚೈತನ್ಯ ಅವರ ಕುಟುಂಬಕ್ಕೆ ಆಪ್ತವಾಗಿರುವವರೇ ಈ ಸುದ್ದಿ ಬಾಯ್ಬಿಟ್ಟಿದ್ದಾರೆ. ಇದಕ್ಕೆ ಪೂರಕ ಅನ್ನೋ ಹಾಗೆ ಸಮಂತಾ ಇತ್ತೀಚೆಗೆ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಯಾವ್ಯಾವುದೋ ಜಾಹೀರಾತುಗಳಲ್ಲಿ, ಫೋಟೋಶೂಟ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಲೈಫನ್ನು ಎನ್‌ಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್‌ಲೋಡ್ ಮಾಡುತ್ತಿದ್ದಾರೆ. ಹೀಗಾಗಿ ಆಪ್ತ ಮೂಲಗಳು ಹೇಳ್ತಿರೋ ಸುದ್ದಿಯನ್ನು ಅಲ್ಲಗೆಳೆಯೋದಕ್ಕೆ ಆಗೋದಿಲ್ಲ. ಏಕೆಂದರೆ ಇತ್ತೀಚೆಗೆ ಸಮಂತಾ ಮುಂಬೈ (Mumbai)ಗೆ ಹೋಗಿ ಸೆಟಲ್ ಆಗ್ತಾರೆ ಅನ್ನುವ ಸುದ್ದಿಬಂತು. ಸಮಂತಾ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ರು. ಯಾವತ್ತಿದ್ರೂ ಹೈದರಾಬಾದೇ (Hyderabad) ತನ್ನ ಮನೆ ಅಂತ ಹೇಳಿದರು. 

ಸಮಂತಾರಂಥಾ ಪ್ರತಿಭಾನ್ವಿತ ನಟಿಗೆ ಮದುವೆಯ ಬಳಿಕವೂ ಸಿನಿಮಾ ಆಫರ್‌ಗಳ ಮೇಲೆ ಆಫರ್‌ಗಳು ಬರುತ್ತಲೇ ಇದ್ದವು. ಆದರೆ ಪ್ಯಾಮಿಲಿ ಮ್ಯಾನ್‌ 2ನಲ್ಲಿ (Family Man-2) ಕರಿ ಚಿರತೆಯಂತೆ ಅದ್ಭುತವಾಗಿ ಈಕೆ ನಟಿಸಿದ್ದೇ ಈಕೆಗೆ ಎರವಾದ ಹಾಗಿದೆ. ಇದರಲ್ಲಿ ಬಂದ ಕೆಲವು ದೃಶ್ಯಗಳೇ ಈಕೆ ಹಾಗೂ ನಾಗಚೈತನ್ಯ ನಡುವೆ ಬಿರುಕು ತಂದಿತ್ತು ಎನ್ನಲಾಗಿದೆ. ಆದರೆ ಸಿನಿಮಾದ ಬಗ್ಗೆ ವಿಶಾಲವಾಗಿ ಯೋಚಿಸುವವರು ಇದನ್ನು ನಟನೆಯ ಭಾಗವಾಗಿಯೇ ಪರಿಗಣಿಸುತ್ತಾರೆ. ಅಕ್ಕಿನೇನಿ ಕಲಾವಿದರ ಕುಟುಂಬದ ಕುಡಿ ನಾಗಚೈತನ್ಯಗೂ ಇಂಥದ್ದೊಂದು ಬ್ರಾಡ್‌ ಮೈಂಡೆಡ್ ನೆಸ್ ಇದ್ದೇ ಇರುತ್ತೆ.

ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಈ ನಟ ಪ್ರೀತಿ ಮತ್ತು ಬ್ರೇಕಪ್‌ಗೆ ಫೇಮಸ್‌!

ಆದರೆ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಯಲ್ಲಿರೋದಿಲ್ಲ. ಒಂದು ಸಣ್ಣ ಅನುಮಾನದ ಹುಳು ಚೆಂದದ ಸಂಸಾರವನ್ನೇ ಸರ್ವನಾಶ ಮಾಡಿಬಿಡುತ್ತದೆ. ಸಮಂತಾ ಕುಟುಂಬದ ವಿಚಾರದಲ್ಲೂ ಇದೇ ಆಯ್ತಾ ಅನ್ನೋದು ಸದ್ಯದ ಪ್ರಶ್ನೆ. ಇದಕ್ಕೆ ಪೂರಕ ಎಂಬಂತೆ ಜ್ಯೋತಿಷಿಯೊಬ್ಬರ ಭವಿಷ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ನಾಗಚೈತನ್ಯ ವಿವಾಹದ ಸಂದರ್ಭ ಆ ಜ್ಯೋತಿಷಿ ಇನ್ನೂ ನಾಲ್ಕು ವರ್ಷದಲ್ಲಿ ಇವರಿಬ್ಬರ ವಿಚ್ಛೇದನವಾಗುತ್ತದೆ. ಆ ಬಳಿಕ ನಾಗಚೈತನ್ಯ ಅವರ ಸಿನಿಮಾ ಕೆರಿಯರ್ ಗ್ರಾಫ್ ಏರುತ್ತಾ ಹೋಗುತ್ತದೆ. ಸಮಂತಾ ಸಿನಿಮಾ ಕೆರಿಯರ್ ಬಿದ್ದು ಹೋಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಜೊತೆಗೆ ಸಮಂತಾ ಮುಂಬೈಯಲ್ಲಿ ನೆಲೆಸುತ್ತಾರೆ ಎಂಬ ಮಾತನ್ನೂ ಹೇಳಿದ್ದರು. 

ಆದರೆ ಸಮಂತಾ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ಅನ್ನುವ ಸುದ್ದಿ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಟಾಲಿವುಡ್‌ನ ಕ್ಯೂಟ್ ದಂಪತಿಯ ದಾಂಪತ್ಯ (Married Life) ಕೊನೇವರೆಗೂ ಚೆನ್ನಾಗಿರಲಿ ಅಂತ ಎಲ್ಲರೂ ಹಾರೈಸುತ್ತಿದ್ದಾರೆ. 

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ತಮನ್ನಾ ಭಾಟಿಯಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?