ಪುಷ್ಪಾದಲ್ಲಿ ಅಲ್ಲು ಜೋಡಿಯಾಗಿ ರಶ್ಮಿಕಾ: ಶ್ರೀವಲ್ಲಿ ಫಸ್ಟ್‌ ಲುಕ್ ರಿಲೀಸ್

By Suvarna News  |  First Published Sep 29, 2021, 10:47 AM IST
  • ಸ್ಟೈಲಿಷ್ ಸ್ಟಾರ್‌ಗೆ ಜೋಡಿಯಾದ ಕಿರಿಕ್ ಚೆಲುವೆ
  • ಪುಷ್ಪದಲ್ಲಿ ಶ್ರೀವಲ್ಲಿಯಾಗಿ ಮಿಂಚಲಿರೋ ರಶ್ಮಿಕಾ
  • ಟಾಲಿವುಡ್ ಬಹು ನಿರೀಕ್ಷಿತ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್ ಔಟ್

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಟಾಲಿವುಡ್‌ನ(Tollywood) ಬಹುನಿರೀಕ್ಷಿತ ಸಿನಿಮಾ ಪುಷ್ಪಾದಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಅವರ ಪಾತ್ರ ಹೇಗಿರಲಿದೆ ? ರಶ್ಮಿಕಾ ಯಾವ ರೀತಿ ಕಾಣಿಸಿಕೊಳ್ತಾರೆ ಎನ್ನುವುದರ ಬಗ್ಗೆ ಯಾವುದೇ ಐಟಿಯಾ ಇರಲಿಲ್ಲ. ಈಗ ರಶ್ಮಿಕಾ ಫ್ಯಾನ್ಸ್ ಕಾಯುವಿಕೆಗೆ ಫುಲ್‌ಸ್ಟಾಪ್ ಸಿಕ್ಕಿದೆ. ಪುಷ್ಪಾದಿಂದ ರಶ್ಮಿಕಾರ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್(Allu Arjun) ಅವರ ಪುಷ್ಪ(Pushpa) ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರವನ್ನು ಮಾಡಲಿದ್ದಾರೆ. ಪುಷ್ಪ ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರನವಾಗಿದೆ. ಪೋಸ್ಟರ್‌ನಲ್ಲಿ, ರಶ್ಮಿಕಾ ರೆಡಿಯಾಗುತ್ತಿರುವುದನ್ನು ಕಾಣಬಹುದು. ಪುಷ್ಪವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಪುಷ್ಪ: ದಿ ರೈಸ್ ಎಂಬ ಶೀರ್ಷಿಕೆಯ ಮೊದಲ ಭಾಗವು ಕ್ರಿಸ್‌ಮಸ್ 2021 ರಲ್ಲಿ ಬಿಡುಗಡೆಯಾಗಲಿದೆ.

Tap to resize

Latest Videos

undefined

ಬನ್ವರ್ ಸಿಂಗ್ ಪಾತ್ರದಲ್ಲಿ ಫಹಾದ್; ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ಮಿಷನ್ ಮಜ್ನು ಚಿತ್ರೀಕರಣವನ್ನು ಮುಗಿಸಿದರು. ಹಿಂದಿ ಸಿನಿಮಾವನ್ನು ಮುಗಿಸಿದ ನಂತರ, ಅವರು ಹೈದರಾಬಾದ್‌ನಲ್ಲಿ ಪುಷ್ಪಾ ಚಿತ್ರೀಕರಣವನ್ನು ಪುನರಾರಂಭಿಸಿದರು. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ಸೆಪ್ಟೆಂಬರ್ 29 ರಂದು ಬಿಡುಗಡೆ ಮಾಡಲಾಯಿತು.

Our fiercest 's heart melts at the sight of his love ❤️

Meet as 😍 🤙 pic.twitter.com/XTBei2377u

— Pushpa (@PushpaMovie)

ಪೋಸ್ಟರ್ ಪ್ರಕಾರ, ರಶ್ಮಿಕಾ ಈ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀವಲ್ಲಿ ಪುಷ್ಪಾ ರಾಜ್ (ಅಲ್ಲು ಅರ್ಜುನ್ ಪಾತ್ರ) ಪ್ರೇಯಸಿ. ಪೋಸ್ಟರ್‌ನಲ್ಲಿ, ಶ್ರೀವಲ್ಲಿ ತನ್ನ ಕಿವಿಯೋಲೆಗಳಲ್ಲಿ ಒಂದನ್ನು ಧರಿಸಿ ಏನಕ್ಕೋ ಸಿದ್ಧವಾಗುತ್ತಿರುವುದನ್ನು ಕಾಣಬಹುದು. ನಾವು ಒಂದು ದೊಡ್ಡ ತಟ್ಟೆಯಲ್ಲಿ ಸೀರೆ ಮತ್ತು ಅದರ ಮೇಲೆ ಹೂಗಳನ್ನು ನೋಡಬಹುದು.

click me!