
ಸಮಂತಾ ಅಕ್ಕಿನೇನಿ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಗಾರ್ಡನಿಂಗ್ ಅಂದ್ರೆ ಅಚ್ಚುಮೆಚ್ಚು. ಇದು ಎಲ್ಲರಿಗೂ ತಿಳಿದಿದೆ. ನಟಿ ಮುದ್ದಾದ ಫ್ರೆಂಚ್ ಬುಲ್ಡಾಗ್ ಅನ್ನು ಸಾಕುತ್ತಿದ್ದಾರೆ, ಈಗ ನಟಿ ಮತ್ತೊಂದು ರೋಮದಿಂದ ತುಂಬಿದ ಕ್ಯೂಟ್ ಬೇಬಿಯನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ತಾಯಿಯಾಗಿದ್ದಾರೆ ನಟಿ.
ನಟಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ನ್ನ ಹೊಸ ಮಗುವಿನ ಪೋಟೋವನ್ನು ಹಂಚಿಕೊಂಡಿದ್ದಾರೆ. ಬಿಸಿ ಹಬೆಯಾಡೋ ಕಾಫಿ ಹಿಡಿದು ಕೂತಿದ್ರಷ್ಟೇ ಸಮಂತಾ.. ಪುಟ್ಟ ಕ್ಯೂಟ್ ಬೇಬಿ ಮೂತ್ರ ಮಾಡಿ ಓಡುತ್ತಿತ್ತು. ಕಾಫಿ ಬಿಟ್ಟು ಓಡಿ ಹೋಗಿ ಕ್ಲೀನ್ ಮಾಡಿದ ಸಮಂತಾ. ಇವರು ಸ್ವೀಟ್ ಮಾಮ್ ಅಲ್ವಾ?
ಚಿತ್ರವನ್ನು ಶೇರ್ ಮಾಡಿದ ನಟಿ ಇಂದು 19 ನೇ ಸಲ ಮೂತ್ರವನ್ನು ಸ್ವಚ್ಛಗೊಳಿಸಿದೆ. ಇನ್ನೂ ಕೇವಲ 9 ಗಂಟೆ. ಆದರೆ ಕೇಕ್ ಮೇಲೆ ಚೆರ್ರಿ ನಾನು ಕಾಫಿಯೊಂದಿಗೆ ಕುಳಿತುಕೊಂಡ ಕ್ಷಣವಾಗಿದೆ ಇದು!! ಈಗ 5 ನಿಮಿಷಗಳ ಶಾಂತತೆ.. ಅಷ್ಟೊತ್ತಿಗೆ ನನ್ನ ಗಮನ ಸೆಳೆದಿದ್ದು ಮೂತ್ರ ಮಾಡಿ ಮನೆ ತುಂಬಾ ಓಡುತ್ತಿದ್ದ ಪುಟ್ಟ ಬೇಬಿ. ಸಾಶಾಗೆ ಹಲೋ ಹೇಳಿ ಎಂದಿದ್ದಾರೆ.
ಸಮಂತಾ - ರಶ್ಮಿಕಾ : ದಕ್ಷಿಣ ಭಾರತದ ನಟಿಯರ ಸೆಕ್ಸಿ ಆಬ್ಸ್!
ನಟಿಯ ಪ್ರೀತಿಯ ಸಾಶಾ ಬೇಬಿ ಬೂದು ಬಣ್ಣದಲ್ಲಿದೆ. ಚಿತ್ರದಲ್ಲಿ ಸಮಂತಾಳ ಫ್ರೆಂಚ್ ಬುಲ್ಡಾಗ್ ಹ್ಯಾಶ್ ಮತ್ತು ಸಾಶಾ ಅವಳೊಂದಿಗೆ ಸುತ್ತಾಡುತ್ತಿರುವುದನ್ನು ಕಾಣಬಹುದು. ಸಮಂತಾ ನಾಯಿಗಳನ್ನು ಪ್ರೀತಿಸುತ್ತಾರೆ. ಹಾಶ್ ಅನ್ನು ತನ್ನೊಂದಿಗೆ ಕೆಲಸದ ಸ್ಥಳಕ್ಕೂ ಕರೆದುಕೊಂಡು ಹೋಗುತ್ತಾರೆ.
ಸಮಂತಾ ಅಕ್ಕಿನೇನಿ ಅವರನ್ನು ಕೊನೆಯದಾಗಿ ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿ ನಟಿಸಿದ್ದರು. ಸಮಂತಾ ಅಕ್ಕಿನೇನಿ ತನ್ನ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.