
ಬಾಲಿವುಡ್ ನಟ ನಟಿಯರು ಧರ್ಮ, ಜಾತಿಯ ಭೇದವಿಲ್ಲದೆ ಗಣೇಶನ ಹಬ್ಬವನ್ನು ಸಂಭ್ರಮಿಸುತ್ತಾರೆ. ಇದಕ್ಕೆ ಶಿಲ್ಪಾ ಶೆಟ್ಟಿಯೂ ಹೊರತಲ್ಲ. ಪತಿ ಮಕ್ಕಳು ಅತ್ತೆ, ಅಮ್ಮ, ತಂಗಿ ಜೊತೆ ಪ್ರತಿ ವರ್ಷ ಭಾರೀ ಸಂಭ್ರಮದಿಂದ ಹಬ್ಬ ಮಾಡುತ್ತಾರೆ ನಟಿ. ಆದರೆ ಈ ಬಾರಿ ಹಾಗಲ್ಲ. ಪ್ರತಿ ವರ್ಷದಂತಿಲ್ಲ ನಟಿಯ ಪರಿಸ್ಥಿತಿ. ಆದರೆ ಹಬ್ಬದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಶಿಲ್ಪಾ. ಸಂಭ್ರಮದಿಂದ ಪುಟ್ಟ ಗಣಪನ ಮನೆಗೆ ಕರೆ ತಂದಿದ್ದಾರೆ.
ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್ ಕುಂದ್ರಾ ಬಂಧನದ ನಡುವೆ, ನಟಿ ಶಿಲ್ಪಾ ಶೆಟ್ಟಿ ಪ್ರತಿವರ್ಷದಂತೆ ಗಣೇಶನ ಮೂರ್ತಿಯನ್ನು ತಮ್ಮ ನಿವಾಸದಲ್ಲಿ ತಂದಿದ್ದಾರೆ. ಗಣೇಶ ಚತುರ್ಥಿಯ ಮುನ್ನ, ನಟಿ ಗಣೇಶನನ್ನು ನಗುಮುಖದೊಂದಿಗೆ ಸ್ವಾಗತಿಸುತ್ತಿರುವುದು ಕಂಡುಬಂದಿತು.
ಶಿಲ್ಪಾ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಪಾಪರಾಜಿಗಾಗಿಗಳು ಫೋಟೋ ಕ್ಲಿಕ್ಕಿಸಿದ್ದಾರೆ. ಪತಿಯ ಬಂಧನದ ನಂತರ ಇದೇ ಮೊದಲ ಬಾರಿ ಸ್ವಲ್ಪ ನಗುವನ್ನು ಚೆಲ್ಲಿದ ನಟಿಯ ಸಂತೋಷದ ಫೋಟೋ ಕ್ಲಿಕ್ಕಿಸಲಾಗಿದೆ. ನಟಿ ಗಣೇಶನನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ.
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾನ ಮದ್ವೆಯಾದಾಗ ಡಿಪ್ರೆಷನ್‌ಗೊಳಗಾಗಿದ್ದ ಶಮಿತಾ
ಶಿಲ್ಪಾ ತನ್ನ ಪತಿಯ ಬಂಧನದ ನಂತರ ತನ್ನ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋನ ಸೆಟ್‌ಗಳಿಗೂ ನಟಿ ಮರಳಿ ಬಂದಿದ್ದಾರೆ. ಅಶ್ಲೀಲ ವಿಡಿಯೋ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಯಿತು. ಬಂಧನದ ನಂತರ, ಶಿಲ್ಪಾ ಕುಟುಂಬದ ಪರವಾಗಿ ಹೇಳಿಕೆಯನ್ನು ಕೊಡುವ ಮೂಲಕ ಮೌನ ಮುರಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.