ಆತ್ಮಹತ್ಯೆಗೆ ಯತ್ನಿಸಿಲ್ಲವಷ್ಟೇ ಬಾಲಿವುಡ್ ಮಾಫಿಯಾದಿಂದ ತೀವ್ರ ಕಿರುಕುಳ

Published : Jul 21, 2022, 04:33 PM ISTUpdated : Jul 21, 2022, 04:38 PM IST
ಆತ್ಮಹತ್ಯೆಗೆ ಯತ್ನಿಸಿಲ್ಲವಷ್ಟೇ ಬಾಲಿವುಡ್ ಮಾಫಿಯಾದಿಂದ ತೀವ್ರ ಕಿರುಕುಳ

ಸಾರಾಂಶ

ಈ ಹಿಂದೆ ದಿ ಕಾಶ್ಮೀರ್‌ ಫೈಲ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀ ದತ್‌ ಈಗ ಮತ್ತೆ ಮತ್ತೊಂದು ಆರೋಪದೊಂದಿಗೆ ಮುನ್ನೆಲೆಗೆ ಬಂದಿದ್ದಾರೆ. 

ಮುಂಬೈ: ಈ ಹಿಂದೆ ದಿ ಕಾಶ್ಮೀರ್‌ ಫೈಲ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀ ದತ್‌ ಈಗ ಮತ್ತೆ ಮತ್ತೊಂದು ಆರೋಪದೊಂದಿಗೆ ಮುನ್ನೆಲೆಗೆ ಬಂದಿದ್ದಾರೆ. ತಾನು ಬಾಲಿವುಡ್ ಮಾಫಿಯಾ ಹಾಗೂ ಮಹಾರಾಷ್ಟ್ರದ ರಾಜಕೀಯ ಸುಳಿಯಿಂದ ತುಂಬಾ ಕೆಟ್ಟ ರೀತಿಯಲ್ಲಿ ಕಿರುಕುಳಕ್ಕೊಳಗಾಗಿದ್ದೆ ಎಂದು ನಟಿ ತನುಶ್ರೀ ದತ್‌ ಹೇಳಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಉದ್ದವಾದ ಬರಹವನ್ನು ಬರೆದುಕೊಂಡಿರುವ ಅವರು ಬಾಲಿವುಡ್ ಮಾಫಿಯಾದಿಂದ ತಾನು ಟಾರ್ಗೆಟ್‌ ಆದ ನಂತರ ತನಗೆ ತೀವ್ರವಾಗಿ ಕಿರುಕುಳ ನೀಡಲಾಗಿತ್ತು. ತಾನು ತೀವ್ರವಾಗಿ ಮಾನಸಿಕ ಹಾಗೂ ದೈಹಿಕ ಒತ್ತಡದಲ್ಲಿದ್ದರೂ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

2018 ದೇಶದಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ಮೀ ಟೂ ಚಳುವಳಿ ವ್ಯಾಪಕವಾಗಿ ಮುನ್ನೆಲೆಗೆ ಬಂದಾಗ ತನುಶ್ರೀ ಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದರು. ಪ್ರಸ್ತುತ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತನುಶ್ರೀ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ತಾನು ಹಲವು ಸಿನಿಮಾ ಪ್ರಾಜೆಕ್ಟ್‌ಗಳಿಗೆ ಮಾತುಕತೆ ನಡೆಸಿದ್ದೆ. ಕೆಲವು ಘಟನೆಗಳಿಂದಾಗಿ ಸಾವಿನಿಂದ ಕೆಲ ಅಂತರದಲ್ಲಿ ತಾನು ಪಾರಾಗಿದ್ದೆ. ಆದರೂ ಎಲ್ಲೂ ಹೋಗದೇ ಇಲ್ಲೇ ಉಳಿದು ಸಾಧಿಸಲು ನಿಂತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ನನ್ನ ಜೀವನದಲ್ಲಿ ಸಾಲು ಸಾಲು ಕೆಟ್ಟ ಘಟನೆಗಳು ನಡೆದವು ಮೊದಲಿಗೆ ಕಳೆದ ಒಂದು ವರ್ಷದಲ್ಲಿ ನನ್ನ ಬಾಲಿವುಡ್‌ ಕೆಲಸಗಳನ್ನು ಹಾಳು ಮಾಡಲಾಯಿತು. ಇದಾದ ಬಳಿಕ ನನ್ನ ಕೆಲಸದಾಕೆ ನನ್ನ ಕುಡಿಯುವ ನೀರಿನಲ್ಲಿ ಕೆಲವು ಔಷಧಿ ಹಾಗೂ ಸ್ಟಿರಾಯಿಡ್‌ಗಳನ್ನು ಮಿಶ್ರಣ ಮಾಡಿದ್ದಳು, ಇದು ನನನಗೆ ತೀವ್ರ ಆರೋಗ್ಯ ಸಮಸ್ಯೆಗೆ ಕಾರಣವಾಯಿತು. ನಂತರ ಮೇ ತಿಂಗಳಲ್ಲಿ ನಾನು ಉಜ್ಜಯಿನಿಗೆ ಹೊರಟು ಹೋಗುತ್ತಿರಬೇಕಾದರೆ ನನ್ನ ವಾಹನ ಎರಡೆರಡು ಭಾರಿ ಅಪಘಾತಕ್ಕೀಡಾಯಿತು. ನಾನು ಸಾವಿನಿಂದ ಕೂದೆಲೆಳೆ ಅಂತರದಲ್ಲಿ ಪಾರಾಗಿ 40 ದಿನಗಳ ನಂತರ ಮುಂಬೈಗೆ ಮರಳಿ ಬಂದು ಕೆಲಸ ಮಾಡಲು ಶುರು ಮಾಡಿದೆ. ಈಗ ನನ್ನ ಫ್ಲಾಟ್‌ನ ಹೊರಗೆ ಕೆಲವು ವಿಚಿತ್ರ ಸಂಗತಿಗಳು ನಡೆಯುತ್ತಿವೆ. ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಎಲ್ಲರೂ ಇದನ್ನು ತೆರೆದ ಕಿವಿಯಿಂದ ಕೇಳಿ, ನಾನು ಎಲ್ಲಿಗೂ ಹೋಗುವುದಿಲ್ಲ. ನಾನು ನನ್ನ ಸಾರ್ವಜನಿಕ ಜೀವನವನ್ನು ಇನ್ನು ಅತ್ಯುತ್ತಮಗೊಳಿಸಲು ಹಾಗೂ ಪುನರುತ್ಥಾನಗೊಳಿಸಲು ಇಲ್ಲೇ ಉಳಿಯುವೆ ಎಂದು ಆಶಿಕ್ ಬನಾಯ ಆಪ್‌ ನೇ ನಟಿ ತನುಶ್ರೀ ಬರೆದುಕೊಂಡಿದ್ದಾರೆ. 

Me Too ಫೇಮ್‌ನ ನಟಿ Tanushree Dutta ಕಾರು ಅಪಘಾತ!

ಇದೆಲ್ಲದರ ಹಿಂದೆ ನಾನು ಲೈಂಗಿಕ ಕಿರುಕುಳದ (ಮೀಟೂ) ಆರೋಪ ಮಾಡಿದ ಕೆಲ ಸೆಲೆಬ್ರಿಟಿಗಳು ಇದ್ದಾರೆ. ಈ ಹಿಂದೆ ತನುಶ್ರೀ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2008ರಲ್ಲಿ ಹಾರ್ನ್‌ ಓಕೆ ಪ್ಲೀಸ್ ಸಿನಿಮಾದ ಹಾಡೊಂದರ ಶೂಟಿಂಗ್ ವೇಳೆ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ತನುಶ್ರೀ ಆರೋಪಿಸಿದ್ದಾರೆ. ಅಲ್ಲದೇ ಹಾಡಿನ ಕೊರಿಯೋಗ್ರಾಫರ್ ಗಣೇಶ್ ಅಚಾರ್ಯ ವಿರುದ್ಧವೂ ಆರೋಪ ಮಾಡಿದ್ದರು. ಲ್ಲದೇ ತನ್ನ ಆರೋಪವನ್ನು ಅನೇಕರು ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ತನುಶ್ರೀ ದತ್ ಹೇಳಿದ್ದಾರೆ. ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ಆರೋಪ ಮಾಡಿದ ತನು, ವಿವೇಕ್ ತನಗೆ ಬಟ್ಟೆ ಬಿಚ್ಚಿ ಕುಣಿಯುವಂತೆ ಹೇಳಿದ್ದರೂ ಎಂದು ಈ ಹಿಂದೆ ಆರೋಪಿಸಿದ್ದರು. 

15ಕೆಜಿ ತೂಕ ಇಳಿಸಿಕೊಂಡ ನಟಿ; ಟಾಂಗ್‌ ಕೊಟ್ಟೋರಿಗೆ ಉತ್ತರಾನೇ ಇದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?