ಆಮೀರ್ ಖಾನ್ ಮನೆಗೆ ಸಲ್ಮಾನ್ ದಿಢೀರ್ ಭೇಟಿಯ ಕಾರಣ ಬಹಿರಂಗ; ಫ್ಯಾನ್ಸ್ ಫುಲ್ ಖುಷ್

Published : Jan 27, 2023, 11:20 AM IST
ಆಮೀರ್ ಖಾನ್ ಮನೆಗೆ ಸಲ್ಮಾನ್ ದಿಢೀರ್ ಭೇಟಿಯ ಕಾರಣ ಬಹಿರಂಗ; ಫ್ಯಾನ್ಸ್ ಫುಲ್ ಖುಷ್

ಸಾರಾಂಶ

ಆಮೀರ್ ಖಾನ್ ಮನೆಗೆ ಸಲ್ಮಾನ್ ಖಾನ್ ದಿಢೀರ್ ಭೇಟಿ ಕೊಟ್ಟಿರುವ ಹಿಂದಿನ ಕಾರಣ ಬಹಿರಂಗವಾಗಿದೆ. 

ಬಾಲಿವುಡ್‌ನಲ್ಲಿ ಖಾನ್ ತ್ರಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಹವಾ ಒಂದು ಕಾಲದಲ್ಲಿ ಜೋರಾಗಿತ್ತು. ಬಾಲಿವುಡ್ ಅಂದರೆ ಖಾನ್ ತ್ರಯರು ಎನ್ನುವ ಮಟ್ಟಕ್ಕೆ ಇತ್ತು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾಲಿವುಡ್ ಆಳುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಖಾನ್ ತ್ರಯರ ಹವಾ ಕಡಿಮೆಯಾಗಿದೆ. ಸಿನಿಮಾಗಳು ಹಿಟ್ ಆಗದೆ ಕಂಗಾಲಾಗಿದ್ದಾರೆ. ಸಾಲು ಸಾಲು ಸೋಲಿನಿಂದ ಬೇಸತ್ತಿದ್ದ ಶಾರುಖ್ ಖಾನ್ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ಪಠಾಣ್ ಮೂಲಕ ಅಭಿಮಾನಿಗಳ ಮುಂದೆ ಬಂದು ಸೂಪರ್ ಸಕ್ಸಸ್ ಸಿನಿಮಾ ನೀಡಿದ್ದಾರೆ. ಸತತ ಎರಡು ಸಿನಿಮಾಗಳ ಹೀನಾಯ ಸೋಲಿನ ಕಾರಣ ಆಮೀರ್ ಖಾನ್ ಸದ್ಯ ನಟನೆಯಿಂದ ಬ್ರೇಕ್ ಪಡೆದಿರುವುದಾಗಿ ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ಆಮೀರ್ ಖಾನ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಆದರೆ ಸಲ್ಮಾನ್ ಖಾನ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಈ ನಡುವೆ ಸಲ್ಮಾನ್ ಖಾನ್, ಆಮೀರ್ ಖಾನ್ ಮನೆಗೆ ದಿಡೀರ್ ಭೇಟಿ ನೀಡಿದ್ದಾರೆ. ಒಂದು ಕಾಲದಲ್ಲಿ ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್‌ಗೂ ಆಗ್ತಿರಲಿಲ್ಲ. ಬದ್ದ ವೈರಿಗಳ ಹಾಗೆ ಆಡುತ್ತಿದ್ದರು. ಆದರೀಗ ಖಾನ್ ತ್ರಯರ ನಡುವಿನ ಬಾಂಧವ್ಯ ಗಟ್ಟಿಯಾಗಿದೆ. ಆದರೂ ಸಲ್ಮಾನ್ ಮತ್ತು ಆಮೀರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಆಮೀರ್ ಖಾನ್ ಮನೆಗೆ ದಿಢೀರ್ ಭೇಟಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ. 

Salman - Aamir Khan: ಆಮೀರ್​ ಖಾನ್​ ಮನೆಗೆ ಮಧ್ಯರಾತ್ರಿ ಬಂದ ಸಲ್ಮಾನ್,​ ಕಾರಣವೇನು?

ಇಬ್ಬರ ಭೇಟಿಯ ಬಳಿಕ ಬಾಲಿವುಡ್‌ನಲ್ಲಿ ಹೊಸ ಸುದ್ದಿ ಗುಲ್ಲಾಗಿದೆ. ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಈ ವಿಚಾರವಾಗಿ ಮಾತುಕತೆ ನಡೆಸಲು ಸಲ್ಮಾನ್ ಖಾನ್ ಹೋಗಿದ್ದರು ಎನ್ನಲಾಗಿದೆ. ಆಮೀರ್ ಖಾನ್ ಸದ್ಯ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದಾರೆ. ಹಾಗಾಗಿ ಆಮೀರ್ ಖಾನ್ ಅವರನ್ನು ವಾಪಾಸ್ ಸಿನಿಮಾಗೆ ಕರೆತರುವ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.  

ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಇಬ್ಬರೂ ಅಂದಾಜ್ ಅಪ್ನ ಅಪ್ನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ನಟಿಸಿದ್ದು ಇದೇ ಮೊದಲು ಮತ್ತು ಕೊನೇ ಸಿನಿಮಾ. ಇಬ್ಬರನ್ನು ಒಟ್ಟಿಗೆ ಕರೆತಂದಿದ್ದರು ನಿರ್ದೇಶಕ ರಾಜ್‌ಕುಮಾರ್ ಸಂತೋಷಿ. ಇತ್ತೀಚಿಗಷ್ಟೆ ಮಾತನಾಡಿದ್ದ ರಾಜ್ ಕುಮಾರ್ ಸಂತೋಷಿ ಮತ್ತೆ ಇಬ್ಬರ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಹಾಗಾಗಿ ಸಲ್ಮಾನ್ ಖಾನ್ ಯಾವುದೇ ಪಾರ್ಟಿ, ಕಾರ್ಯಕ್ರಮವಿಲ್ಲದ್ದರೂ ಆಮೀರ್ ಖಾನ್ ಮನೆಗೆ ಹೋದ ಕಾರಣ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಲು ಎನ್ನುವ ಮಾತು ಕೇಳಿಬರುತ್ತಿದೆ. 

ಪ್ರಮೋಷನ್​ ಇಲ್ದೇ ಚಿತ್ರ ಗೆಲ್ತೇವೆ! ರಿಯಾಲಿಟಿ ಶೋಗೆ ಹೋಗಲು ಶಾರುಖ್ ನಕಾರ!

ಒಂದು ವೇಳೆ ಉತ್ತಮ ಸ್ಕ್ರಿಪ್ಟ್ ಬಂದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ನಟನೆಯಿಂದ ಬ್ರೇಕ್ ಪಡೆದಿರುವ ಆಮೀರ್ ಖಾನ್, ಸಲ್ಮಾನ್ ಖಾನ್ ಜೊತೆ ಮತ್ತೆ ತೆರೆಮೇಲೆ ಬಂದರೂ ಅಚ್ಚರಿ ಇಲ್ಲ. ಇಬ್ಬರೂ ಒಟ್ಟಿಗೆ ಮತ್ತೆ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಸಹ ಹಾರೈಸುತ್ತಿದ್ದಾರೆ. ಈ ಸುದ್ದಿ ನಿಜವಾಗುತ್ತಾ ಎಂದು ಕಾದುನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?