ಋತುಮತಿಯರಾದವರು ದೇವಾಲಯ ಪ್ರವೇಶಿಸಬಾರದು ಎಂದು ಸಂಪ್ರದಾಯದ ವಿರುದ್ಧ ನಟಿ ಐಶ್ವರ್ಯಾ ರಾಜೇಶ್ ಹೇಳಿದ್ದೇನು?
ಋತುಮತಿಯಾಗುವುದು ಪ್ರಕೃತಿ ಸಹಜ. ಹೆಣ್ಣೊಬ್ಬಳು ತಾಯಿಯಾಗುವ ಹಂತಕ್ಕೆ ಬಂದಿದ್ದಾಳೆ ಎಂದು ತೋರಿಸುವ ಹೆಮ್ಮೆಯ ಕ್ರಿಯೆ ಇದು. ಆದರೆ ಕೆಲವೆಡೆಗಳಲ್ಲಿ ಋತುಮತಿಯಾದವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುವ ಪದ್ಧತಿಗಳು ಇವೆ. ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಸೇರಿದಂತೆ ಹೆಣ್ಣಿನ ಭಾವನಾತ್ಮಕ ಮತ್ತು ದೈಹಿಕ ಕ್ರಿಯೆಗಳಲ್ಲಿ ಏರುಪೇರಾಗುವ ಕಾರಣದಿಂದ ಮನೆಗೆಲಸ ಮಾಡಲು ಆಕೆಗೆ ಈ ದಿನಗಳಲ್ಲಿ ಬಿಡುತ್ತಿರಲಿಲ್ಲ. ದೊಡ್ಡ ಸಂಸಾರವಿದ್ದ ಕಾಲದಲ್ಲಿ ಅಷ್ಟೂ ಕೆಲಸವನ್ನು ಈ ಸಮಯದಲ್ಲಿ ಮಾಡುವುದು ಕಷ್ಟಕರ ಎನ್ನುವ ಒಳ್ಳೆಯ ಕಾರಣದಿಂದಾಗಿ ಹಿರಿಯರು ಹೀಗೊಂದು ಸಂಪ್ರದಾಯ ಮಾಡಿದ್ದರು. ಆದರೆ ಬರಬರುತ್ತಾ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ಋತುಮತಿ ಸಮಯದಲ್ಲಿ ಅತ್ಯಂತ ಹೇಯವಾಗಿ ನಡೆಸಿಕೊಳ್ಳಲಾಗುತ್ತಿದೆ.
ಭಾರತೀಯ ಸಂಪ್ರದಾಯದಲ್ಲಿ ಋತುಮತಿಯಾದರು (menstruation) ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದಿಲ್ಲ, ದೇವಸ್ಥಾನದೊಳಗೆ ಪ್ರವೇಶಿಸುವುದಿಲ್ಲ. ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಈ ಸಂಪ್ರದಾಯವನ್ನು ಬಹುತೇಕ ಹಿಂದೂಗಳು ಅನುಸರಿಸುವುದು ಇದೆ. ಆದರೆ ಇದರ ಬಗ್ಗೆ ಕೆಲವರ ವಿರೋಧವೂ ಇದೆ. ಮಾಂಸ ತಿಂದ ಸಂದರ್ಭದಲ್ಲಿ ದೇವಾಲಯ ಪ್ರವೇಶಿಸಬಾರದು, ಋತುಮತಿಯಾದಾಗ ದೇಗುಲದ ಸಮೀಪ ಹೋಗಬಾರದು ಎನ್ನುವ ಕಾರಣಕ್ಕೆ ಒಬ್ಬೊಬ್ಬರದ್ದು ಒಂದೊಂದು ಅನಿಸಿಕೆ. ಈಗ ಇದೇ ವಿಷಯವನ್ನು ನಟಿಯೊಬ್ಬಳು ಹೇಳಿದ್ದು, ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಋತುಮತಿ ಮತ್ತು ದೇವರ ಬಗ್ಗೆ ಹೇಳಿಕೆ ಕೊಟ್ಟು ಭಾರಿ ಸುದ್ದಿಯಲ್ಲಿರುವ ನಟಿಯೆಂದರೆ ಐಶ್ವರ್ಯಾ ರಾಜೇಶ್ (Aishwarya Rajesh).
Shraddha Arya: 35 ವರ್ಷಗಳಲ್ಲಿ 10 ಮದ್ವೆಯಾದೆ: ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ!
ಕಣ್ಣ, ತಿಟ್ಟಂ ಇರಂಡು, ವಡ ಚೆನ್ನೈ, ಜಮುನಾ ಡ್ರೈವರ್ (Jamuna driver) ಚಿತ್ರಗಳ ಮೂಲಕ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಟಿ ಐಶ್ವರ್ಯಾ ಇದೀಗ ನೀಡಿರುವ ಹೇಳಿಕೆ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. 'ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಅವರು ಮುಟ್ಟಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ತಮಿಳಿನ ದಿ ಗ್ರೇಟ್ ಇಂಡಿಯನ್ ಕಿಚನ್ ಮಲಯಾಳದ ರಿಮೇಕ್ ಆಗಿದೆ. ಸಿನಿಮಾವನ್ನು ಆರ್‌ಡಿಸಿ ಮೀಡಿಯಾದ ಬ್ಯಾನರ್‌ನಡಿಯಲ್ಲಿ ನೀಲ್ ಮತ್ತು ದುರುಗುರಾಮ್ ಚೌಧರಿ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಐಶ್ವರ್ಯಾ ರಾಜೇಶ್ ಮತ್ತು ರಾಹುಲ್ ರವೀಂದ್ರನ್ ಇದರಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ನಟಿ, 'ಯಾರು ದೇವಾಲಯದ (temple) ಆವರಣವನ್ನು ಪ್ರವೇಶಿಸಬಹುದು ಅಥವಾ ಪ್ರವೇಶಿಸಬಾರದು ಎಂಬ ಬಗ್ಗೆ ದೇವರು ಜನರಿಗೆ ತಾರತಮ್ಯ ಮಾಡುವುದಿಲ್ಲ. ಋತುಮತಿಯಾದ ಮಹಿಳೆಯರು ಪವಿತ್ರ ಸ್ಥಳವನ್ನು ಪ್ರವೇಶಿಸಿದರೆ ಯಾವುದೇ ದೇವರು ಅಥವಾ ದೇವತೆಗಳು ಅಸಮಾಧಾನಗೊಳ್ಳುವುದಿಲ್ಲ' ಎಂದು ಹೇಳಿದ್ದಾರೆ. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶದ ಕುರಿತಾಗಿ ಭಾರಿ ವಿವಾದವೊಂದು ಕೆಲ ವರ್ಷಗಳ ಹಿಂದೆ ಎದ್ದಿತ್ತು. 10 ರಿಂದ 50 ವರ್ಷದ ಒಳಗಿನ ಮಹಿಳೆಯರು ಶಬರಿಮಲೆ (Shabarimale) ದೇವಸ್ಥಾನ ಪ್ರವೇಶಿಸಿದಂತೆ ಕಾನೂನಾತ್ಮಕವಾಗಿ ನಿಷೇಧ ವಿಧಿಸುವಂತೆ ಕೋರಿ 1990ರಲ್ಲಿ ಅರ್ಜಿಯೊಂದು ದಾಖಲಾಗಿತ್ತು.
ಅಲ್ಲಿಂದ ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಲೇ ಇದೆ. ಈ ಬಗ್ಗೆಯೂ ನಟಿ ಮಾತನಾಡಿದ್ದಾರೆ. 'ಶಬರಿಮಲೆಗೆ ಮುಟ್ಟಾಗುವ ಮಹಿಳೆಯರು ಪ್ರವೇಶಿಸಿದರೆ ತಪ್ಪಿಲ್ಲ. ದೇವರು ಎಲ್ಲರಿಗೂ ಒಂದೇ ರೀತಿ. ದೇವರ ದೃಷ್ಟಿಯಲ್ಲಿ ಸ್ತ್ರೀಪುರುಷರ ಭೇದವಿಲ್ಲ. ದೇವಸ್ಥಾನದ ಆವರಣವನ್ನು ಪ್ರವೇಶಿಸಬಹುದಾದವರು ಮತ್ತು ಪ್ರವೇಶಿಸಲಾಗದವರು ಎಂಬ ಭೇದಭಾವವನ್ನು ದೇವರು ತೋರಿಸುವುದಿಲ್ಲ. ಇದು ಕೇವಲ ಮಾನವ ನಿರ್ಮಿತ ಕಾನೂನುಗಳು (Laws). ಶಬರಿಮಲೆ ದೇವಸ್ಥಾನದಲ್ಲಿ ಮಾತ್ರವಲ್ಲ, ಯಾವುದೇ ದೇವಾಲಯದಲ್ಲಿರುವ ಯಾವುದೇ ದೇವರು ಕೂಡ ಪವಿತ್ರ ಸ್ಥಳವನ್ನು ಪ್ರವೇಶಿಸುವ ಭಕ್ತರ ಬಗ್ಗೆ ಅಸಮಾಧಾನಗೊಳ್ಳಲು ಸಾಧ್ಯವಿಲ್ಲ' ಎಂದು ಐಶ್ವರ್ಯಾ ಹೇಳಿದ್ದಾರೆ.
Vijay Antony: ಶೂಟಿಂಗಲ್ಲಿ ನಡೆದ ಅವಘಡದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ವಿಜಯ್ ಈಗ ಹೇಗಿದ್ದಾರೆ?
ಮಾಂಸ (Non Veg) ತಿಂದು ದೇವಸ್ಥಾನಕ್ಕೆ ಹೋಗುವ ಕುರಿತೂ ಮಾತನಾಡಿರುವ ನಟಿ, ಏನು ತಿನ್ನಬೇಕು, ತಿನ್ನಬಾರದು ಎಂದು ದೇವರು ಹೇಳುವುದಿಲ್ಲ. ಒಬ್ಬ ಭಕ್ತ ಪರಿಶುದ್ಧನಾಗಿರಲಿ ಅಥವಾ ಪರಿಶುದ್ಧನಲ್ಲವೇ ಎಂಬುದರ ಕುರಿತು ದೇವರು ಕಾನೂನನ್ನು ರಚಿಸಿಲ್ಲ ಎಂದಿದ್ದಾರೆ. ಸದ್ಯ ಈ ಹೇಳಿಕೆ ಭಾರಿ ವೈರಲ್ (Viral) ಆಗಿದ್ದು, ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ.