
ನವದೆಹಲಿ (ಜು.19): ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದು ಅಭಿಮಾನಿಗಳಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ವೈರಲ್ ವಿಡಿಯೋದಲ್ಲಿ ಸಲ್ಮಾನ್ ಖಾನ್ ಮುಖ ಸಂಪೂರ್ಣವಾಗಿ ಸುಕ್ಕುಗಟ್ಟಿಹೋಗಿದೆ.ಅವರ ದೈಹಿಕ ಸ್ಥಿತಿ ತೀರಾ ಹದಗೆಟ್ಟಿರುವಂತೆ ಕಂಡುಬರುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಯೂಸರ್ ಒಬ್ಬರು, ಸಲ್ಮಾನ್ ಖಾನ್ ಅವರ ಸ್ಥಿತಿ ಈಗ ಹಿರಿಯ ನಟ ಧರ್ಮೇಂದ್ರ ಅವರಂತೆ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ನೆಟ್ಟಿಗರು ನಟನ ಈ ಸ್ಥಿತಿಯನ್ನು ಕಂಡು ಲೇವಡಿ ಮಾಡಿದ್ದು, ಕೆಲವರು ಇದು ಅತಿಯಾದ ಮದ್ಯಪಾನದ ಪರಿಣಾಮ ಎಂದರೆ, ಇನ್ನೂ ಕೆಲವರು ಇದು 'ಸ್ಟೆರಾಯ್ಡ್‌ಗಳ ಚಮತ್ಕಾರ' ಎಂದು ವ್ಯಂಗ್ಯವಾಡಿದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಲನಚಿತ್ರದ ಬಿಡುಗಡೆಯ ಕುರಿತು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮನೆಮಾಡಿದೆ. ಈ ಸಿನಿಮಾ ಆರಂಭದಲ್ಲಿ ಏಪ್ರಿಲ್ ತಿಂಗಳಿನಲ್ಲಿ ತೆರೆಕಾಣಬೇಕಿತ್ತು. ಮೊದಲು ಈ ಚಿತ್ರಕ್ಕೆ 'ಬ್ಯಾಟಲ್ ಆಫ್ ಗಲ್ವಾನ್' ಎಂದು ಹೆಸರಿಡಲಾಗಿತ್ತು, ಆದರೆ ನಂತರ ಅದನ್ನು ಬದಲಾಯಿಸಿ 'ಮಾತೃಭೂಮಿ' ಎಂದು ಮರುನಾಮಕರಣ ಮಾಡಲಾಗಿದೆ. ಸಲ್ಮಾನ್ ಅವರ ಈ ಬಹುನಿರೀಕ್ಷಿತ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನಟನ ವಿಡಿಯೋ ಅಭಿಮಾನಿಗಳ ನಿದ್ದೆ ಗೆಡಿಸಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರ ಪರಿಸ್ಥಿತಿ ಎಷ್ಟು ಬದಲಾಗಿದೆ ಎಂದರೆ, ಮೊದಲ ನೋಟದಲ್ಲಿ ಅವರನ್ನು ಗುರುತಿಸುವುದು ಕೂಡ ಅಸಾಧ್ಯ ಎನ್ನುವಂತಿದೆ.
ಗಗನ್ ಚೌಧರಿ ಎಂಬ ವ್ಯಕ್ತಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ಮೊದಲ ನೋಟದಲ್ಲಿ ಇವರು ಸಲ್ಮಾನ್ ಖಾನ್ ಎಂಬುದನ್ನು ನಂಬಲು ನನಗೇ ಸಾಧ್ಯವಾಗಲಿಲ್ಲ. ಆದರೆ, ಅವರ ಪಕ್ಕದಲ್ಲಿದ್ದ ವೈಯಕ್ತಿಕ ಬಾಡಿಗಾರ್ಡ್ ಶೇರಾ ಅವರನ್ನು ನೋಡಿದ ನಂತರವಷ್ಟೇ ಇವರು ಸಲ್ಮಾನ್ ಭಾಯ್ ಎಂದು ಖಚಿತವಾಯಿತು ಎಂದು ಬರೆದುಕೊಂಡಿದ್ದಾರೆ. ಮುಂದುವರಿದು, ನಟನ ಪರಿಸ್ಥಿತಿ ಈಗ ಹಿರಿಯ ನಟ ಧರ್ಮೇಂದ್ರ ಅವರಂತಾಗಿದ್ದು, ಗುರುತಿಸಲಾರದಷ್ಟು ಬದಲಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ ಅಭಿಮಾನಿಗಳು ನಟನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಕಡೆ ಕೆಲವರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಯೂಸರ್ ಒಬ್ಬರು ಕಾಮೆಂಟ್ ಮಾಡಿ, ಹೆಚ್ಚು ಮದ್ಯಪಾನ ಮಾಡುವುದರಿಂದ ಹೀಗೆಯೇ ಆಗುತ್ತದೆ ಎಂದು ಬರೆದರೆ, ಇನ್ನೊಬ್ಬರು ಇದು ಜಿಮ್‌ಗಾಗಿ ಬಳಸುವ ಸ್ಟೆರಾಯ್ಡ್‌ಗಳ ಅಡ್ಡಪರಿಣಾಮದ ಚಮತ್ಕಾರ ಎಂದಿದ್ದಾರೆ. ಇನ್ನು ಕೆಲವು ಯೂಸರ್‌ಗಳು, ಅವರು ಮಾಡಿದ ಹಳೆಯ ತಪ್ಪುಗಳಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದೂ ಕೂಡ ಟೀಕಿಸಿದ್ದಾರೆ.
ಸಲ್ಮಾನ್ ಖಾನ್ ಅವರು ತಾವು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ಈ ಹಿಂದೆಯೇ ಅಭಿಮಾನಿಗಳ ಮುಂದೆ ಮುಕ್ತವಾಗಿ ಒಪ್ಪಿಕೊಂಡಿದ್ದರು. ಅವರಿಗೆ 'ಎವಿಎಂ' (AVM - Arteriovenous Malformation) ಎಂಬ ಅಪರೂಪದ ಕಾಯಿಲೆಯಿದ್ದು, ಇದು ನೇರವಾಗಿ ನರಮಂಡಲದ (Nervous System) ಮೇಲೆ ಪ್ರಭಾವ ಬೀರುತ್ತದೆ. ಈ ಕಾಯಿಲೆಯ ತೀವ್ರ ಸ್ಥಿತಿಯಲ್ಲಿ ದೇಹದ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುವ ಅಪಾಯವಿರುತ್ತದೆ. ಆದರೆ, ಸಲ್ಮಾನ್ ಖಾನ್ ಅವರು ತಾವೀಗ ಆರಾಮವಾಗಿರುವುದಾಗಿ ಮತ್ತು ಚಿಕಿತ್ಸೆ ಪಡೆಯುತ್ತಿರುವುದಾಗಿ ಅಭಿಮಾನಿಗಳಿಗೆ ಈ ಹಿಂದೆ ಆಶ್ವಾಸನೆ ನೀಡಿದ್ದರು.
What happened to Salman Khan?? At first I thought it's not him but saw shera too there
He is ageing like Dharmendra. pic.twitter.com/u52EZHx4KX— Gagan Choudhary (@trigguuuu) July 19, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.