ಎದ್ದು ನಿಲ್ಲಲು ಕಷ್ಟಪಟ್ಟ ಸಲ್ಮಾನ್ ಖಾನ್: ನಮ್ ಹೀರೋಗೆ ವಯಸ್ಸಾಯ್ತು ಎಂದು ಬೇಸರಿಸಿದ ಫ್ಯಾನ್ಸ್

By Anusha Kb  |  First Published Aug 29, 2024, 3:57 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ 58ರ ಹರೆಯದರಲ್ಲೂ ತರುಣನಂತೆ ಕಾಣುವ ನಟ. ಆದರೆ ಇತ್ತೀಚೆಗೆ ಸಲ್ಮಾನ್ ಖಾನ್ ಎದ್ದು ನಿಲ್ಲಲು ಬಹಳ ಕಷ್ಟಪಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. 


ಬಾಲಿವುಡ್ ನಟ ಸಲ್ಮಾನ್ ಖಾನ್ 58ರ ಹರೆಯದರಲ್ಲೂ ತರುಣನಂತೆ ಕಾಣುವ ನಟ. ಆದರೆ ಇತ್ತೀಚೆಗೆ ಸಲ್ಮಾನ್ ಖಾನ್ ಎದ್ದು ನಿಲ್ಲಲು ಬಹಳ ಕಷ್ಟಪಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಪಾರಾಜಿ ಪೇಜ್‌ಗಳಲ್ಲಿ ನಟನ ವೀಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಕಳವಳದಿಂದ ಕಾಮೆಂಟ್ ಮಾಡಿದ್ದಾರೆ.

ಪರಿಸರ ಸ್ನೇಹಿ ಗಣೀಶನನ್ನು ಕೂರಿಸಲು ಜನರನ್ನು ಉತ್ತೇಜಿಸುವ ಕಾರ್ಯಕ್ರಮವೊಂದರಲ್ಲಿನ ವೀಡಿಯೋ ಇದಾಗಿದೆ. ಅದೇ ಕಾರ್ಯಕ್ರಮಕ್ಕೆ ನಟಿ ಸೋನಾಲಿ ಬೇಂದ್ರೆ ಕೂಡ ಆಗಮಿಸಿದ್ದು, ಸೋನಾಲಿ ಬೇಂದ್ರೆಯನ್ನು ನೋಡಿದ ನಟ ಆಕೆಯನ್ನು ಮಾತನಾಡಿಸಲು ಬಹಳ ಕಷ್ಟಪಟ್ಟು ಎದ್ದು ನಿಲ್ಲುತ್ತಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಾಲಿವುಡ್‌ನ ಈ ಭಜರಂಗಿ ಭಾಯ್‌ಜಾನ್‌ ನಟನಿಗೆ ದೇಶಾದ್ಯಂತ ಲಕ್ಷಾಂತರ ಫಾಲೋವರ್ಸ್‌ಗಳಿದ್ದಾರೆ.  ಸಲ್ಮಾನ್ ಖಾನ್ ಹಾಗೂ ಸೋನಾಲಿ ಬೇಂದ್ರೆ 1999ರ ಹಮ್ ಸಾಥ್ ಸಾಥ್ ಹೈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. 

Tap to resize

Latest Videos

Bigg Bossಗೆ ಬರಲು ಒಲ್ಲೆ ಅಂತಿದ್ದಾರೆ ಸಲ್ಮಾನ್ ಖಾನ್ ಎಕ್ಸ್ ಗರ್ಲ್ ಫ್ರೆಂಡ್!

ಸಲ್ಮಾನ್ ಖಾನ್‌ಗೆ 58 ವರ್ಷ ವಯಸ್ಸಾದರೂ ಅಭಿಮಾನಿಗಳ ಪಾಲಿಗೆ ನಟನಿನ್ನೂ ಚಿರ ಯುವಕ. ಆತನಿಗೆ ವಯಸ್ಸಾಗುತ್ತಿರುವುದನ್ನು ಅಭಿಮಾನಿಗಳಿಗೆ ಮಾತ್ರ ನೋಡಲಾಗುತ್ತಿಲ್ಲ, ಆದರೆ ವಯಸ್ಸು ಓಡುವುದನ್ನು ಯಾರಿಗೂ ನಿಲ್ಲಿಸಲಾಗದು. ಅದೇ ರೀತಿ 58 ವರ್ಷದ ಸಲ್ಮಾನ್‌ ಖಾನ್‌ ಕೂಡ ವಯೋಸಹಜ ಎಂಬಂತೆ ಎದ್ದು ನಿಲ್ಲಲು ತಡವರಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಸಲ್ಮಾನ್ ಖಾನ್ ಸೋಪಾದಲ್ಲಿ ಕುಳಿತಿದ್ದು, ಇದೇ ಕಾರ್ಯಕ್ರಮಕ್ಕೆ ಬಂದ  ಸಹ ನಟಿ ಗೆಳತಿ ಸೋನಾಲಿ ಬೇಂದ್ರೆಯನ್ನು ನೋಡಿ ಆಕೆಯನ್ನು ಮಾತನಾಡಿಸುವ ಸಲುವಾಗಿ ಸಲ್ಮಾನ್ ಖಾನ್ ಎದ್ದು ನಿಲ್ಲಲು ಮುಂದಾಗಿದ್ದು, ಆದರೆ ಒಂದೇ ಏಟಿಗೆ ಅವರಿಗೆ ಎದ್ದ ನಿಲ್ಲಲು ಸಾಧ್ಯವಾಗಿಲ್ಲ, ನಿಧಾನವಾಗಿ ಎದ್ದು ನಿಂತ ಅವರು ಬಳಿಕ ಸೋನಾಲಿ ಬೇಂದ್ರೆಯನ್ನು ಮಾತನಾಡಿಸಿ ಹಗ್ ಮಾಡುತ್ತಾರೆ. 

ಬರೀ ಸಲ್ಮಾನ್ ಖಾನ್ ಮಾತ್ರವಲ್ಲ, ಈ ಬಾಲಿವುಡ್ ನಟರೂ ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈ!

ಈ ವೀಡಿಯೋ ನೆಟ್ಟಿಗರನ್ನು ತೀವ್ರ ಭಾವುಕರನ್ನಾಗಿಸಿದೆ. ಬಹುತೇಕರು ಭಾಯಿಜಾನ್ ಗೆಟ್ಟಿಂಗ್ ಓಲ್ಡ್‌ , ಭಾಯಿಜಾನ್‌ಗೆ ವಯಸ್ಸಾಗ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಬಾಲ್ಯದ ಫೇವರೇಟ್ ಹೀರೋಗೆ ವಯಸ್ಸಾಗ್ತಿದೆ. ಯಾವುದು ಶಾಶ್ವತವಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಕಾಮೆಂಟ್ ಮಾಡಿದ್ದಾರೆ. ಲೇಜೆಂಡ್‌ಗೆ ವಯಸ್ಸಾಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಫೇವರೇಟ್ ಹೀರೋಗೆ ವಯಸ್ಸಾಗ್ತಿರೋದು ನೋಡಿ ಬೇಜಾರಾಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಸೋಪಾ ತುಂಬಾ ಮೃದುವಾಗಿರೋದ್ರಿಂದ ಏಳೋದಿಕೆ ಕಷ್ಟವಾಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಅಂದಹಾಗೆ  ಮೈನೇ ಪ್ಯಾರ್ ಕಿಯಾ ಹೀರೋ ಆಗಿ ಸಲ್ಮಾನ್ ಖಾನ್ ಅವರ ಮೊದಲ ಸಿನಿಮಾವಾಗಿದೆ. ಇದು ಆಗಸ್ಟ್ 23ರಂದು ಮತ್ತೆ ರಿಲೀಸ್ ಆಗಿತ್ತು. ಪ್ರಸ್ತುತ ಸಲ್ಮಾನ್ ಖಾನ್ ಎಆರ್‌ ಮುರುಗದೋಸ್ ಅವರ ಸಿಕಂದರ್ ಸಿನಿಮಾಗೆ ಕೆಲಸ ಮಾಡುತ್ತಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ. 

 

 

 

click me!