ಕಾರ್ಯಕ್ರಮವೊಂದರಲ್ಲಿ ನಟಿ ಸೋನಾಲಿ ಬೇಂದ್ರೆಯನ್ನು ತಬ್ಬಿಕೊಳ್ಳಲು ಸಲ್ಮಾನ್ ಖಾನ್ ಪರದಾಡಿದ ಘಟನೆ ನಡೆದಿದ್ದು ಅದರ ವಿಡಿಯೋ ವೈರಲ್ ಆಗಿದೆ. ಆದರೆ ಆಮೇಲೆ ಆಗಿದ್ದೇ ಬೇರೆ!
ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರೋ ಸಲ್ಮಾನ್ ಖಾನ್ ಅವರಿಗೆ ಈಗ 58 ವರ್ಷ ವಯಸ್ಸು. ಹಾಗೆಂದು ವರ್ಚಸ್ಸಿಗೇನೂ ಕಮ್ಮಿಯಾಗಿಲ್ಲ. ಇಷ್ಟೇ ವಯಸ್ಸಿನ ಶಾರುಖ್ ಖಾನ್ರಂತೆ ಇಂದಿಗೂ ಹೀರೋ ಆಗಿಯೇ ಮಿಂಚುತ್ತಿದ್ದಾರೆ. ಮಗಳ ವಯಸ್ಸಿನಂತಿರುವ ಹೀರೋಯಿನ್ಗಳ ಜೊತೆ ಬಿಂದಾಸ್ ಆಗಿ ರೊಮಾನ್ಸ್ ಮಾಡುತ್ತಾರೆ. ಆದರೆ ಎಲ್ಲಾ ಸಂದರ್ಭಗಳೂ ಒಂದೇ ರೀತಿ ಇರುವುದಿಲ್ಲವಲ್ಲ. ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವುದನ್ನು ಈ ನಟ ಸಾಬೀತು ಮಾಡಿದರೂ, ಕೆಲವೊಮ್ಮೆ ವಯಸ್ಸಿಗೆ ತಕ್ಕಂತೆ ದೇಹ ನಡೆದುಕೊಂಡು ಬಿಡುತ್ತದೆ. ಎಷ್ಟೇ ವರ್ಕ್ಔಟ್ ಮಾಡಿದರೂ ಕೆಲವು ಸಲ ದೇಹ ಮಾತೇ ಕೇಳುವುದಿಲ್ಲ. ವಯಸ್ಸಾಯಿತು ಎಂದು ಹೇಳಿಬಿಡುತ್ತದೆ. ಇದೀಗ ಸಲ್ಮಾನ್ ಖಾನ್ಗೂ ಇದೇ ರೀತಿ ಆಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ವಯಸ್ಸಿಗೆ ಮೀರಿದ ಮೋಡಿಗಾಗಿ ಹೆಸರುವಾಸಿಯಾದ ಸಲ್ಮಾನ್ ಖಾನ್ ನಟಿ ಸೋನಾಲಿ ಬೇಂದ್ರೆ ಅವರನ್ನು ಕಾರ್ಯಕ್ರಮವೊಂದರಲ್ಲಿ ತಬ್ಬಿಕೊಂಡು ಸ್ವಾಗತ ಮಾಡಲು ಎದ್ದೇಳಾಗದೇ ಪರದಾಡಿದ ವಿಡಿಯೋ ಇದಾಗಿದೆ. ಕಾರ್ಯಕ್ರಮವೊಂದರಲ್ಲಿ ಸೋಫಾದಿಂದ ಎದ್ದೇಳಲು ನಟ ಹೆಣಗಾಡುತ್ತಿರುವುದನ್ನು ಕಾಣಬಹುದು. ಅಷ್ಟಕ್ಕೂ ಈ ಕಾರ್ಯಕ್ರಮವನ್ನು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗಳನ್ನು ಉತ್ತೇಜಿಸಲು ಆಯೋಜಿಸಲಾಗಿತ್ತು. ಸಲ್ಮಾನ್ ಖಾನ್ ಮೊದಲೇ ಆಗಮಿಸಿದ್ದರು. ನಂತರ ನಟಿ ಸೋನಾಲಿ ಬೇಂದ್ರೆ ಬಂದರು. ಸಲ್ಮಾನ್ ಖಾನ್ 1999 ರ ಚಲನಚಿತ್ರ ಹಮ್ ಸಾಥ್ ಸಾಥ್ ಹೇನಲ್ಲಿ ಸೋನಾಲಿ ಬೇಂದ್ರೆ ಎದುರು ಜೋಡಿಯಾಗಿದ್ದರು. ನಟಿ ಬಂದ ತಕ್ಷಣ ಆಕೆಯನ್ನು ಸ್ವಾಗತಿಸಲು ಕುಳಿತಲ್ಲಿನಿಂದ ನಟ ಏಳಲು ಹೋದರೆ ಏಳಲು ಆಗಲೇ ಇಲ್ಲ.
ಬಾಲಕಿಯ ಜೀವ ಉಳಿಸಲು ಸಲ್ಮಾನ್ ಖಾನ್ ಅಸ್ಥಿಮಜ್ಜೆ ದಾನ: ಭಾರತದ ಮೊದಲ ದಾನಿ ಎಂಬ ಹೆಗ್ಗಳಿಕೆ!
ಇದರ ವಿಡಿಯೋ ವೈರಲ್ ಆಗುತ್ತಲೇ ಸಿನಿಮಾದಿಂದ ನಿವೃತ್ತಿ ತೆಗೆದುಕೊಳ್ಳುವ ಟೈಂ ಬಂದಿದೆ ಎಂದು ಹಲವರು ನಟನ ಕಾಲೆಳೆಯುತ್ತಿದ್ದಾರೆ. ಆದರೆ ಏಳಲು ನಟ ಶ್ರಮಪಟ್ಟಿದ್ದರೂ, ಕೊನೆಗೆ ನಟಿಯರನ್ನು ತಬ್ಬಿಕೊಂಡ ಬಳಿಕ ಚೇತರಿಸಿಕೊಂಡು ಬಿಟ್ಟರು. ನಟಿಯನ್ನು ಅಪ್ಪಿಕೊಳ್ಳುತ್ತಿದ್ದಂತೆಯೇ ಅವರಲ್ಲಿ ಉತ್ಸಾಹ ಮೂಡಿತು. ಅದು ಎಷ್ಟರಮಟ್ಟಿಗೆ ಎಂದರೆ ಅವರು, ವಾಂಟೆಡ್‌ನ ಜಲ್ವಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದರು, ಜೊತೆಗೆ ಅಭಿಮಾನಿಗಳನ್ನು ಹುರಿದುಂಬಿಸಿದರು. ಸಲ್ಮಾನ್ ಖಾನ್ ಕೂಡ ಸಭಿಕರತ್ತ ಮುತ್ತು ಬೀಸಿದರು. ಇವರ ಈ ಸ್ಟೆಪ್ಗೆ ಅಭಿಮಾನಿಗಳು ಫಿದಾ ಆದರು.
ಅಂದಹಾಗೆ, ನಟ ಸಲ್ಮಾನ್ ಖಾನ್ ಅವರ ಐಕಾನಿಕ್ ಹಿಟ್ ಮೈನೆ ಪ್ಯಾರ್ ಕಿಯಾ, ಆಗಸ್ಟ್ 23 ರಂದು ಥಿಯೇಟರ್‌ಗಳಲ್ಲಿ ಮರು-ಬಿಡುಗಡೆಯಾಗಿದೆ. ಹಳೆಯ ಸಂದರ್ಶನವೊಂದರಲ್ಲಿ, ಸಲ್ಮಾನ್ ತನ್ನ ಕಣ್ಣಲ್ಲಿ ನೀರು ತರಿಸಿದ ಪ್ರಸಿದ್ಧ ಹಾಡಿನ ಕಬೂತರ್ ಜಾ ಜಾ ಚಿತ್ರೀಕರಣದ ಕ್ಷಣವನ್ನು ನೆನಪಿಸಿಕೊಂಡರು. ಅವರು ಹಂಚಿಕೊಂಡಿದ್ದಾರೆ, "ನನಗೆ ಸುಮಾರು 18 ವರ್ಷ ವಯಸ್ಸಾಗಿತ್ತು, ಮತ್ತು ಕಬೂತರ್ ಜಾ ಜಾ ಜಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ಇದು ನನ್ನ ಪಾತ್ರ ಎಂದು ಇದ್ದಕ್ಕಿದ್ದಂತೆ ತಿಳಿದಾಗ ನಿಜವಾಗಿಯೂ ಸ್ಮರಣೀಯ ಕ್ಷಣವಾಗಿತ್ತು ಎಂದಿದ್ದಾರೆ.
ಸಲ್ಮಾನ್ ಖಾನ್ರ ಸೆಕ್ಸ್- ಕಿಸ್ ಬಗ್ಗೆ ಓಪನ್ನಾಗಿ ಹೀಗೆ ಮರ್ಯಾದೆ ತೆಗೆಯೋದಾ ಅಣ್ಣ ಅರ್ಬಾಜ್!