Small Screen

ಸಲ್ಮಾನ್ ಖಾನ್ ನಡೆಸಿ ಕೊಡೋ ಬಿಗ್‌ಬಾಸ್ ಸ್ಪರ್ಧಿಗಳು ಯಾರು?

ವರ್ಷಗಳಿಂದ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಹಿಂದ್ 18 ಸ್ಪರ್ಧಿಗಳಿಗೆ ನೋ ಹೇಳಿದವರು ಯಾರು?

Image credits: others

Bigg Boss 18: 8 ಜನಪ್ರಿಯರಿಂದ ನೋ, ಮೇಕರ್ಸ್‌ಗೆ ಶಾಕ್!

ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಜೊತೆ ಹೆಸರು ಥಳಕು ಹಾಕ್ಕೊಂಡಿದ್ದ ನಟಿ ಮಣಿಯರು ಬಿಗ್ ಬಾಸ್ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. 

BB18 ಗೆ ನೋ ಹೆಳಿದ ಸೆಲೆಬ್ರಿಟಿಗಳು

ಬಿಗ್ ಬಾಸ್ 18 ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಹಲವು ಸೆಲೆಬ್ರಿಟಿಗಳನ್ನು ಆಗಲೇ ಸಂಪರ್ಕಿಸಲಾಗುತ್ತಿದೆ, ಆದರೆ ಕೆಲವರು ಭಾಗವಹಿಸಲು ನಿರಾಕರಿಸಿದ್ದಾರೆ. ಯಾರು? ಏಕೆ?

1. ಸೋಮಿ ಅಲಿ

ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ಬಿಗ್ ಬಾಸ್ 18 ರಲ್ಲಿ ಭಾಗವಹಿಸಬಹುದು ಎನ್ನಲಾಗಿತ್ತು. ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲ್ಲ ಎನ್ನೋ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. 

2. ಅನಿರುದ್ಧಾಚಾರ್ಯ

ಧರ್ಮಗುರು ಅನಿರುದ್ಧಾಚಾರ್ಯ ಅವರು ಸುದ್ದಿಯಲ್ಲಿದ್ದಾರೆ. ಅವರನ್ನೂ ಬಿಗ್ ಬಾಸ್ ಟೀಂ ಸಂಪರ್ಕಿಸಿತ್ತು. ಇಲ್ಲಿ ಆಗೋಲ್ಲ ಅಂದು ಬಿಟ್ಟರಂತೆ. 

3. ಅರ್ಜುನ್ ಬಿಜ್ಲಾನಿ

ಟಿವಿ ನಟ ಅರ್ಜುನ್ ಬಿಜ್ಲಾನಿ ಬಿಗ್ ಬಾಸ್‌ನಲ್ಲಿ ಪಾಲ್ಗೊಳ್ಳೋದು ಪಕ್ಕಾ ಎನ್ನಲಾಗಿತ್ತು. ಈಗವರೂ ಇಲ್ಲಿ ಅದು ಸುಳ್ಳು ಎನ್ನುತ್ತಿದ್ದಾರೆ. 

4. ಶೋಯೆಬ್ ಇಬ್ರಾಹಿಂ

ಬಿಗ್ ಬಾಸ್ 18 ರ ಶುರುವಾಗುತ್ತೆ ಎನ್ನುವಾಗಲೇ ಮೊದಲ ಸ್ಪರ್ಧಿ ಶೋಯೆಬ್ ಇಬ್ರಾಹಿಂ ಹೆಸರು ದೃಢೀಕರಿಸಲಾಗಿತ್ತು. ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ. 

5. ಸುರಭಿ ಜ್ಯೋತಿ

ಬಿಗ್ ಬಾಸ್ 18 ರ ನಿರ್ಮಾಪಕರು ಹಲವು ವರ್ಷಗಳಿಂದ ಟಿವಿ ನಟಿ ಸುರಭಿ ಜ್ಯೋತಿ ಅವರನ್ನು ಈ ಕಾರ್ಯಕ್ರಮಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ಈ ಸಾರಿಯೂ ಬಿಬಿ ಮನೆಗೆ ಬರೋಲ್ವಂತೆ. 

6. ಇಶಾ ಕೊಪ್ಪಿಕರ್

ಬಾಲಿವುಡ್ ನ ಖಲ್ಸಾ ಗರ್ಲ್ ಇಶಾ ಕೊಪ್ಪಿಕರ್ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದು, ನೋ ನಾನು ಹೋಗುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. 

7. ಅನಿತಾ ಹಸನ್

ಬಹು ಜನಪ್ರಿಯ ನಟಿ ಅನಿತಾ ಹಸನ್ ಅವರು ಬಿಗ್ ಬಾಸ್‌ಗೆ ನೋ ಹೇಳಿದ್ದು, ಸೆಪ್ಟೆಂಬರ್ 3 ರಿಂದ ಅವರ ಹೊಸ ಕಾರ್ಯಕ್ರಮ 'ಸುಮನ್ ಇಂದೋರಿ' ಪ್ರಾರಂಭವಾಗಲಿದೆ.

8. ವಿಶಾಲ್ ಪಾಂಡೆ

ಬಿಗ್ ಬಾಸ್ ಒಟಿಟಿ 3 ರ ವಿಶಾಲ್ ಪಾಂಡೆ ಸಹ ಒಮ್ಮೆ ಹೋಗಿ ಒಳಗೆ ಏನಿದೆ ಎಂದು ನೋಡಲಾಗಿದೆ. ಮತ್ತೆ ಹೋಗೋಲ್ಲ ಎಂದಿದ್ದಾರೆ. ಮತ್ತೊಂದು ದೊಡ್ಡ ಯೋಜನೆಯೊಂದರಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. 

ವೆಬ್ ಸೀರಿಸ್‌: ಬೋಲ್ಡ್ ಆಗಿ ಕಾಣಿಸಿಕೊಂಡವರಲ್ಲಿ ಸಮಂತಾ, ಶೋಭಿತಾ ಮುಂಚೂಣಿಯಲ್ಲಿ!

Shocking: ಕೆಬಿಸಿಗೆ ಅಮಿತಾಬ್ ಬಚ್ಚನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಅನುಪಮಾ ಮಹಾ ಟ್ವಿಸ್ಟ್: ಹೊಸ ವಿಲನ್ ಎಂಟ್ರಿ!

Bigg Boss: ಈ ಬಾರಿ ಧೂಳೆಬ್ಬಿಸಲು ಬರ್ತಿದ್ದಾರೆ ಎಂಟು ಮಹಿಳಾ ಸ್ಪರ್ಧಿಗಳು!