
ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ರಣಬಾಲಿ ಸದ್ದು ಮಾಡಲು ಸಿದ್ಧವಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರಿಯಲ್ ಲೈಫ್ ನಲ್ಲಿ ಮಾತ್ರವಲ್ಲ ರೀಲ್ ಲೈಫ್ ನಲ್ಲೀ ದಂಪತಿಯಾಗಿ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರದ ಹಿನ್ನೆಲೆಯಲ್ಲಿ ಜೋಡಿ ಅನೇಕ ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡ್ತಿವೆ. ಈ ಬಾರಿ ಕನ್ನಡ ಯೂಟ್ಯೂಬ್ ನಲ್ಲಿ ಜೋಡಿ ಕಾಣಿಸಿಕೊಂಡಿದ್ದು ಸಾಕಷ್ಟು ವಿಶೇಷವಾಗಿದೆ.
ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಮಾತುಕತೆ ವೇಳೆ ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿರುವ ಅವರನ್ನು ಕನ್ನಾಭಿಮಾನಿಗಳು ಮನಸ್ಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿದ್ದಾರೆ. ನಮಸ್ಕಾರ ನಿಮಗೆ, ಎಲ್ಲರಿಗೂ ಎನ್ನುತ್ತಲೇ ಮಾತು ಶುರು ಮಾಡಿದ ವಿಜಯ್ ದೇವರಕೊಂಡ ಅನುಶ್ರೀ ಅವರನ್ನು ಹೊಗಳಿದ್ದಾರೆ. ನೀವು ತುಂಬಾ ಮುದ್ದಾಗಿದ್ದೀರಿ ಎಂದಿದ್ದಾರೆ. ಅಷ್ಟೇ ಅಲ್ಲ ಅನುಶ್ರೀ ಕೇಳ್ತಿದ್ದ ಎಲ್ಲ ಕನ್ನಡ ಪ್ರಶ್ನೆಗಳನ್ನು ಅರ್ಥ ಮಾಡ್ಕೊಂಡು ಅದಕ್ಕೆ ಉತ್ತರ ನೀಡುವ ಪ್ರಯತ್ನವನ್ನು ವಿಜಯ್ ದೇವರಕೊಂಡ ಮಾಡಿದ್ದಾರೆ. ಅವರು ಕನ್ನಡದಲ್ಲಿ ಮಾತು ಶುರು ಮಾಡ್ತಿದ್ದಂತೆ ಅನುಶ್ರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಅಳಿಯ
ವಿಜಯ್ ದೇವರಕೊಂಡ ಕೊಡಗಿನ ಅಳಿಯ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಇನ್ನು ನಿರೂಪಕಿ ಅನುಶ್ರೀ ಕೊಡಗಿನ ಸೊಸೆ. ಸಂದರ್ಶನದಲ್ಲಿ ಅನುಶ್ರೀ ಈ ವಿಷ್ಯವನ್ನು ಹೇಳಿದ್ದಲ್ಲದೆ ಕೊಡಗಿನ ಡಾನ್ಸ್ ನಿಮಗೆ ಬರುತ್ತಾ ಅಂತ ವಿಜಯ್ ಅವರನ್ನು ಕೇಳಿದ್ದಾರೆ. ಅದಕ್ಕೆ ಹೌದು, ಕಲಿಸಿದ್ದೇನೆ ಅಂತ ರಶ್ಮಿಕಾ ಹೇಳಿದ್ರೆ, ಕುಳಿತಲ್ಲೇ ಸ್ಪೆಪ್ ಹಾಕಿ ತೋರಿಸಿದ್ದಾರೆ ವಿಜಯ್.
ರಶ್ಮಿಕಾ ಮೇಲೆ ಮುನಿಸು
ಸಂದರ್ಶನದ ರೀಲ್ಸ್ ಪೋಸ್ಟ್ ಆಗ್ತಿದ್ದಂತೆ ಕನ್ನಡಿಗರು ರಶ್ಮಿಕಾ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ. ರಶ್ಮಿಕಾಗಿಂತ ವಿಜಯ್ ಶುದ್ಧವಾಗಿ, ಸ್ಪಷ್ಟವಾಗಿ ಹಾಗೂ ಹೆಚ್ಚು ಕನ್ನಡ ಮಾತನಾಡ್ತಾರೆ. ರಶ್ಮಿಕಾಗೆ ಕನ್ನಡ ಬರೋದಿಲ್ಲ ಎನ್ನುವ ಕಮೆಂಟ್ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.