ರಶ್ಮಿಕಾ ಮಗಳ ಜೊತೆನೂ ರೊಮಾನ್ಸ್​ ಮಾಡ್ತೇನೆ ನಿಮಗೇನ್ರಿ ಕಷ್ಟ? ಕಿಡಿಕಿಡಿಯಾದ ಸಲ್ಮಾನ್​ ಖಾನ್

ತಮಗಿಂತ 31 ವರ್ಷ ಕಿರಿಯ ನಟಿ ರಶ್ಮಿಕಾ ಮಂದಣ್ಣ ಜೊತೆ ರೊಮಾನ್ಸ್​ ಮಾಡಿದ ನಟ ಸಲ್ಮಾನ್​ ಖಾನ್​ ತೀವ್ರ ಟೀಕೆಗೆ ಗುರಿಯಾಗಿದ್ದು, ಅದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದು ಹೀಗೆ...
 

Salman Khan said when Rashmika gets married and has a daughter will continue to work with her suc

 ಈಗಂತೂ ಚಲನಚಿತ್ರಗಳಲ್ಲಿ ರೊಮ್ಯಾನ್ಸ್​, ಲಿಪ್​ಲಾಕ್​ ಎಲ್ಲವೂ ಮಾಮೂಲಾಗಿದೆ. ಆದರೆ, ಈಗ ಆಗುತ್ತಿರುವುದು ಏನೆಂದರೆ, ಕೆಲವು ನಾಯಕ ನಟರು 50-60 ವಯಸ್ಸಾದರೂ ನಾಯಕರಾಗಿಯೇ ಮುಂದುವರೆಯುತ್ತಿದ್ದಾರೆ. ಈಗ ತಾನೇ ಸಿನಿಮಾಕ್ಕೆ ಎಂಟ್ರಿ ಕೊಡುವ 20-25 ವಯಸ್ಸಿನ ಯುವತಿಯರು ನಾಯಕಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ, ಮಗಳ ವಯಸ್ಸಿನವಳು ಆ ನಾಯಕನಿಗೆ ನಾಯಕಿಯಾಗಿರುತ್ತಾಳೆ. ಹೊಸ ನಟಿಯರು ಕೂಡ ಸಿನಿರಂಗದಲ್ಲಿ ನೆಲೆಯೂರಲು ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದರೆ, ಇನ್ನು ನಟರು ಸುಮ್ಮನೇ ಬಿಡುತ್ತಾರೆಯೆ? ಇದೇ ಕಾರಣಕ್ಕೆ ಮಗಳ ವಯಸ್ಸಿನ ನಟಿಯರ ಜೊತೆ ಲಿಪ್​ಲಾಕ್​, ಇಂಟಿಮೇಟ್​ ಸೀನ್​, ಚುಂಬನ ದೃಶ್ಯ, ರೊಮ್ಯಾನ್ಸ್​ ಎಲ್ಲವೂ ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಆದರೆ ಇದೀಗ ಇದಾಗಲೇ ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟಿರುವ ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಕೂಡ ಈ ಪಟ್ಟಿಗೆ ಸೇರಿರುವುದು ಆಕೆಯ ಅಭಿಮಾನಿಗಳಿಗೆ ಬಹಳ ಬೇಸರ ಮೂಡಿಸಿದೆ.

ಅಷ್ಟಕ್ಕೂ ಇದು ಸಿಕಂದರ್ ಸಿನಿಮಾದ ವಿಷಯ. ಇದರಲ್ಲಿ ಸಲ್ಮಾನ್​ ಖಾನ್​ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕುತೂಹಲದ ವಿಷಯ ಏನೆಂದರೆ ಸಲ್ಮಾನ್​ ಖಾನ್​, ರಶ್ಮಿಕಾ ಅಪ್ಪನಿಗಿಂತ ಮೂರು ವರ್ಷ ದೊಡ್ಡವರು. ಸಲ್ಮಾನ್​ ಖಾನ್​ಗೆ 59 ವರ್ಷ, ರಶ್ಮಿಕಾ ಅಪ್ಪನಿಗೆ 56 ವರ್ಷ ವಯಸ್ಸು. ಇದೀಗ ಇದು ಭಾರಿ ಟೀಕೆಗೆ ಗುರಿಯಾಗಿದೆ. ಅಂದರೆ ಇವರಿಬ್ಬರ ಏಜ್​ ಗ್ಯಾಪ್​ 31 ವರ್ಷ! ಇದರ ಬಗ್ಗೆ ಟೀಕೆ ವ್ಯಕ್ತವಾಗುತ್ತಲೇ ಸಲ್ಲು ಭಾಯಿ ಸಕತ್​ ಗರಂ ಆಗಿದ್ದಾರೆ. ನನಗೆ ಅವಳಿಗೆ ಒಟ್ಟಿಗೇ ಕೆಲ್ಸ ಮಾಡಲು ತೊಂದರೆ ಇಲ್ಲ ಅಂದ್ಮೇಲೆ ನೀವ್ಯಾರು ಕೇಳಲು ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ರಶ್ಮಿಕಾಗೆ ಮದ್ವೆಯಾಗಿ ಅವಳಿಗೆ ಮಗಳು ಹುಟ್ಟಿದ್ರೆ ಅವಳ ಜೊತೆನೂ ರೊಮಾನ್ಸ್​ ಮಾಡ್ತೇನೆ, ನಿಮಗೇನ್ರಿ ಕಷ್ಟ ಎಂದು ಸಲ್ಮಾನ್​ ಖಾನ್​ ಪ್ರಶ್ನಿಸಿದ್ದು, ಇನ್ನಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

Latest Videos

ನಟ ಉಪೇಂದ್ರ ಊಟ ಮಾಡೋ ರೀತಿಯೂ ವಿಚಿತ್ರ! ಶಿವಣ್ಣ ವಿವರಿಸಿದ್ದು ಕೇಳಿ ಅಬ್ಬಬ್ಬಾ ಅಂತಿರೋ ಫ್ಯಾನ್ಸ್​

ಇನ್ನು ಚಿತ್ರದ ಕುರಿತು ಹೇಳುವುದಾದರೆ, ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಸೂಪರ್ ಹಿಟ್ ಚಿತ್ರಗಳ ನಾಯಕಿ ರಶ್ಮಿಕಾ ಮಂದಣ್ಣ , ಸಲ್ಮಾನ್ ಖಾನ್‌ಗೆ ಜೋಡಿಯಾಗಿದ್ದಾರೆ. 200 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ಬಿಡುಗಡೆಯಾಗುವ ಮೊದಲೇ ಸಂಕಷ್ಟದಲ್ಲಿತ್ತು. ಸಿಕಂದರ್ ಬಾಕ್ಸ್ ಆಫೀಸ್‌ನಲ್ಲಿ   ವಿಫಲವಾಗಿದೆ. ನಾಲ್ಕು ದಿನಗಳ ಮುಂಗಡ ಬುಕಿಂಗ್‌ನಲ್ಲಿ, ಸಿಕಂದರ್ 18,000 ಪ್ರದರ್ಶನಗಳಿಂದ ಕೇವಲ 10 ಕೋಟಿ ರೂ. ಗಳಿಸಿತು. ಸಲ್ಮಾನ್ ಖಾನ್ ಚಿತ್ರಕ್ಕೆ ಇದು ಬಹಳ ಕಡಿಮೆ ಸಂಖ್ಯೆ. ಕಡಿಮೆ ಬಜೆಟ್ ಹೊಂದಿರುವ ಇತರ ಚಲನಚಿತ್ರಗಳು ಉತ್ತಮ ಪ್ರದರ್ಶನ ನೀಡಿವೆ. ಪೂರ್ವ-ಮಾರಾಟದಲ್ಲಿ ಟಾಪ್ 10 ರಲ್ಲಿ ಪ್ರವೇಶಿಸಲು,   ಇನ್ನೂ 2 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಬೇಕಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಟಿಕೆಟ್​ ಮಾರಾಟ ಆಗಲಿಲ್ಲ. ಚಿತ್ರ ಬಿಡುಗಡೆಯಾದ ಮೇಲೆ ಆರಂಭದಲ್ಲಿ ಒಳ್ಳೆಯ ರೀತಿ ಓಡಿದರೂ ಇದಾಗಲೇ ಚಿತ್ರ ಫ್ಲಾಪ್​ ಎಂದು ಸಾಬೀತಾಗಿದೆ. 

 ಈ ಚಿತ್ರ ಸೋಲಲು ಹಲವು ಕಾರಣಗಳನ್ನೂ ನೀಡಲಾಗಿದೆ. ಅದೇನೆಂದರೆ,, ಸಲ್ಮಾನ್‌ಗೆ ಈಗ 60 ವರ್ಷ ಸಮೀಪಿಸಿದೆ. ಅವರ ಆಕ್ಷನ್ ದೃಶ್ಯಗಳು ಮತ್ತು ನಟನಾ ಶೈಲಿಯು ವರ್ಷಗಳಲ್ಲಿ ಹೆಚ್ಚು ಬದಲಾಗಿಲ್ಲ. ಜನರು ಒಂದೇ ರೀತಿಯ ಪಾತ್ರಗಳನ್ನು ನೋಡಿ ಬೇಸರಗೊಳ್ಳುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಅವರ ಮ್ಯಾಜಿಕ್ ಮರೆಯಾಗುತ್ತಿರುವಂತೆ ತೋರುತ್ತಿದೆ. ಸಿಕಂದರ್   ಸಂಗೀತ ಜನಪ್ರಿಯವಾಗಿಲ್ಲ. ಜೋಹ್ರಾ ಜಬೀನ್ ಮತ್ತು ಸಿಕಂದರ್ ನಾಚೆಯಂತಹ ಹಾಡುಗಳು ಎಲ್ಲಿಯೂ ಟ್ರೆಂಡಿಂಗ್ ಆಗುತ್ತಿಲ್ಲ. ಸಲ್ಮಾನ್ ಖಾನ್ ಚಲನಚಿತ್ರವು ಸಾಮಾನ್ಯವಾಗಿ ಹಿಟ್ ಹಾಡುಗಳನ್ನು ಹೊಂದಿರುತ್ತದೆ - ಆದರೆ ಈ ಬಾರಿ ಅಲ್ಲ. ಸಂಗೀತವು ದೊಡ್ಡ ನಿರಾಶೆಯಾಗಿದೆ. ನಿರ್ದೇಶಕ ಎ ಆರ್ ಮುರುಗದಾಸ್ ಈ ಹಿಂದೆ ಹಿಟ್ ನೀಡಿದ್ದಾರೆ, ಆದರೆ ಈ ಬಾರಿ ಅವರು ತಮ್ಮ ಹಳೆಯ ಚಲನಚಿತ್ರಗಳನ್ನು ನಕಲಿಸಿದಂತೆ ಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗಲೇ ಕಥೆ ಹಳತಾಗಿದೆ ಮತ್ತು ನೀರಸವೆನಿಸಿದ್ದರಿಂದ ಜನರು ಧಾವಿಸಲಿಲ್ಲ.   

3ನೇ ಮದ್ವೆಗೆ ರೆಡಿಯಾದ್ರೂ ಆಮೀರ್ ಆ ತಲೆದಿಂಬು ಬಿಟ್ಟಿರಲಿಲ್ಲ! ಗುಟ್ಟು ರಿವೀಲ್​ ಮಾಡಿದ ಮಾಜಿ ಪತ್ನಿ
 

vuukle one pixel image
click me!