ಬಾಲಿವುಡ್ ನಟಿ ಮಲೈಕಾ ಅರೋರಾಗೆ ಇನ್ನೊಬ್ಬ ಪಾರ್ಟನರ್ ಸಿಕ್ಕಂತಿದೆ. ವಿವಾಹಿತ ವ್ಯಕ್ತಿ ಜೊತೆ ಮಲೈಕಾ ಕಾಣಿಸಿಕೊಂಡಿದ್ದು, ಇಬ್ಬರೂ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಾಲಿವುಡ್‌ನ ಫಿಟ್‌ನೆಸ್ ಕ್ವೀನ್ ಮಲೈಕಾ ಅರೋರಾ (Bollywood fitness queen Malaika Arora), ಡೇಟಿಂಗ್ ವಿಷ್ಯಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದ್ಕಡೆ ಬ್ರೇಕ್ ಅಪ್ ಆಗ್ತಿದ್ದಂತೆ ಇನ್ನೊಬ್ಬರ ಜೊತೆ ಮಲೈಕಾ ಅರೋರಾ ಸುತ್ತಾಟ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ. ಸಿನಿಮಾ ನಟನ ಜೊತೆ ಪ್ರೀತಿಯಲ್ಲಿದ್ದ ಮಲೈಕಾ ಆಯ್ಕೆ ಈಗ ಕ್ರಿಕೆಟ್ ಗೆ ಬದಲಾದಂತಿದೆ. ಅರ್ಜುನ್ ಕಪೂರ್ ರಿಂದ ದೂರವಾದ್ಮೇಲೆ ಸ್ವಲ್ಪ ದಿನ ಒಂಟಿಯಾಗಿದ್ದ ಮಲೈಕಾ ಅರೋರಾಗೆ ಈಗ ಪಾರ್ಟರ್ ಸಿಕ್ಕಂತಿದೆ. ಸದ್ಯ ಮಲೈಕಾ ಹೆಸರು ಶ್ರೀಲಂಕಾದ ದಂತಕಥೆ ಕ್ರಿಕೆಟಿಗ ಕುಮಾರ್ ಸಂಗಕ್ಕಾರ (Cricketer Kumar Sangakkara) ಅವರ ಜೊತೆ ಥಳುಕು ಹಾಕಿಕೊಂಡಿದೆ. ಕುಮಾರ್ ಸಂಗಕ್ಕಾರ್ ಜೊತೆ ಮಲೈಕಾ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಮಲೈಕಾ ಅರೋರಾ ಕುಮಾರ್ ಸಂಗಕ್ಕಾರ ಜೊತೆ ಡೇಟಿಂಗ್ ? : ಐಪಿಎಲ್ ಮ್ಯಾಚ್ ಈ ಅನುಮಾನಕ್ಕೆ ಮೂಲ ಕಾರಣ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪಂದ್ಯ ಗೆದ್ದಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆದಿತ್ತು. ಈ ಟೈಂನಲ್ಲಿ ಮಲೈಕಾ ಅರೋರಾ ರಾಜಸ್ಥಾನ ರಾಯಲ್ಸ್ ಮಾಜಿ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವ್ರ ಜೊತೆ ಕಾಣಿಸಿಕೊಂಡಿದ್ದಾರೆ. ಮಲೈಕಾ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯದ ವೇಳೆ ಕ್ಯಾಮರಾ ಅವರ ಮೇಲಿತ್ತು. ಸೋಶಿಯಲ್ ಮೀಡಿಯಾದಲ್ಲೂ ಕುಮಾರ್ ಸಂಗಕ್ಕಾರ ಜೊತೆ ಇರುವ ಫೋಟೋ ವೈರಲ್ ಆಗಿದೆ. ಕುಮಾರ್ ಸಂಗಕ್ಕಾರ , ಮಲೈಕಾ ಅರೋರಾ ಪಕ್ಕದಲ್ಲಿ ಕುಳ್ತಿರೋದನ್ನು ಕಾಣ್ಬಹುದು. ಇದು ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ವದಂತಿಗೆ ಕಾರಣವಾಗಿದೆ.
ನಿತಿನ್ ಸೂಪರ್ ಹಿಟ್ ಸಿನಿಮಾದಲ್ಲಿ ಆ್ಯಂಕರ್ ರಶ್ಮಿ ಗೌತಮ್ ಹೀರೋಯಿನ್ ಆಗಬೇಕಿತ್ತು.. ಆದರೆ ಟ್ವಿಸ್ಟ್ ಬೇರೇನೇ ಇತ್ತು!
ಕುಮಾರ್ ಸಂಗಕ್ಕಾರ ಹಲವಾರು ಋತುಗಳಲ್ಲಿ ರಾಯಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಆರ್‌ಆರ್ ತಂಡದ ಕ್ರಿಕೆಟ್ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಸಂಗಕ್ಕಾರ ಅವರ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ಡೆಕ್ಕನ್ ಚಾರ್ಜರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
ಸೋಶಿಯಲ್ ಮೀಡಿಯಾ ಬಳಕೆದಾರರ ಕಮೆಂಟ್ : ಮಲೈಕಾ ಮತ್ತು ಸಂಗಕ್ಕಾರ ಅವರ ಫೋಟೋ ವೈರಲ್ ಆದ ನಂತ್ರ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ಮಲೈಕಾ ಅರೋರಾ ಸಂಗಕ್ಕಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಬರೆದಿದ್ದಾರೆ, ಮಲೈಕಾ ಅರೋರಾ ಸಂಗಕ್ಕಾರ ಜೊತೆ ಕುಳಿತಿದ್ದಾರೆ. ಏನೋ ನಡೆಯುತ್ತಿದೆ. ನಟಿ ಮತ್ತು ಆರ್ ಆರ್ ನಡುವೆ ಯಾವುದೇ ಸಂಬಂಧ ನನಗೆ ಕಾಣುತ್ತಿಲ್ಲ ಎಂದಿದ್ದಾರೆ.
ಪವರ್‌ಫುಲ್ ಆರ್ಮಿ ಆಫೀಸರ್ ಪಾತ್ರದಲ್ಲಿ ಪ್ರಭಾಸ್: ಸ್ಪಿರಿಟ್ ಶೂಟಿಂಗ್ ಅಪ್‌ಡೇಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ!
ಅರ್ಜುನ್ ಕಪೂರ್ ಜೊತೆ ಮಲೈಕಾ ಬ್ರೇಕ್ ಅಪ್ : ಮಲೈಕಾ ಮತ್ತು ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ ಕಳೆದ ವರ್ಷ ಸಂಬಂಧ ಮುರಿದುಬಿದ್ದಿತ್ತು. ಸಿಂಘಮ್ ಅಗೇನ್ ಸಿನಿಮಾ ಪ್ರಚಾರದ ಸಮಯದಲ್ಲಿ, ಅರ್ಜುನ್ ಕಪೂರ್ ತಾನು ಒಂಟಿ ಎನ್ನುವ ಮೂಲಕ ಸಂಬಂಧ ಮುರಿದು ಬಿದ್ದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. 51 ವರ್ಷದ ಮಲೈಕಾ ಅರೋರಾ, ಅರ್ಬಾಜ್ ಖಾನ್ ಮದುವೆಯಾಗಿದ್ದರು. ಆದ್ರೆ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 2017 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದಾದ್ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದರು. ಈಗ ಅರ್ಜುನ್ ರಿಂದಲೂ ದೂರವಾಗಿರುವ ಮಲೈಕಾ ಒಂಟಿಯಾಗಿದ್ದಾರೆ. ಇನ್ನು 47 ವರ್ಷದ ಕುಮಾರ್ ಸಂಗಕ್ಕಾರ ವಿವಾಹಿತರು. ಅವರು 2003 ರಲ್ಲಿ ಯೆಹಾಲಿ ಸಂಗಕ್ಕಾರ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿವೆ.
Is Malaika Arora dating sangakaara ??? pic.twitter.com/P1c66nsNjK
— Aditi (@glamourworld77)