ಸಲ್ಮಾನ್​ಗೆ ಜೀವ ಬೆದರಿಕೆ ಮೇಲ್​ ಬಂದಿದ್ದಾದ್ರೂ ಎಲ್ಲಿಂದ? ಕೊನೆಗೂ ಸಿಕ್ತು ಸುಳಿವು!

By Suvarna NewsFirst Published Mar 23, 2023, 6:03 PM IST
Highlights

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್‌ ಅವರಿಗೆ ಲಾರೆನ್ಸ್ ಬಿಷ್ಣೋಯ್‌ ಅವರಿಂದ ಕೊಲೆ ಬೆದರಿಕೆ ಬರುತ್ತಿದ್ದು, ಈಗ ಬಂದಿರುವ ಇ-ಮೇಲ್​ ಎಲ್ಲಿಯದ್ದು ಎಂದು ಪೊಲೀಸರು ಕಂಡುಹಿಡಿದಿದ್ದಾರೆ.
 
 

ಕಳೆದ ಕೆಲ ತಿಂಗಳುಗಳಿಂದ ಸಲ್ಮಾನ್ ಖಾನ್ (Salman Khan) ಅವರಿಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನಿಂದ  ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಕಳೆದ 2-3 ದಿನಗಳಿಂದ ಬೆದರಿಕೆ ಬರುವುದು ಹೆಚ್ಚಾಗಿದೆ. ಕಳೆದ ಭಾನುವಾರ ರಾತ್ರಿ ಕೂಡ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಇಮೇಲ್ ಕಳುಹಿಸಿದ್ದ. ಸಲ್ಮಾನ್ ಅವರ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಅವರು ಇ-ಮೇಲ್ ಸ್ವೀಕರಿಸಿದ ತಕ್ಷಣ ಪೊಲೀಸ್ ದೂರು ನೀಡಿದ್ದರು.  ಪ್ರಶಾಂತ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಸಲ್ಮಾನ್‌ ಖಾನ್‌ ಮತ್ತು ಅವರ ಮನೆಯ ಸುತ್ತ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.  ಬೆದರಿಕೆಯ ಬಗ್ಗೆ ಅವರ ಕುಟುಂಬ ಸದಸ್ಯರು ತುಂಬಾ ಚಿಂತಿತರಾಗಿದ್ದು, ಆತಂಕದಲ್ಲಿ ಸಮಯ ಕಳೆಯುತ್ತಿದ್ದಾರೆ.  ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಸದ್ಯ  ಯಾವುದೇ  ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸಲ್ಮಾನ್‌ ಅವರಿಗೆ ಸೂಚಿಸಲಾಗಿದೆ.  ಮುಂಬೈ ಪೊಲೀಸರು ಬಾಂದ್ರಾದಲ್ಲಿರುವ (Bandra) ಸಲ್ಮಾನ್‌ನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಕೂಲಂಕಷವಾಗಿ ತಪಾಸಣೆ ನಡೆಸುತ್ತಿರುವ ದೃಶ್ಯ ಭಾನುವಾರ ಕಂಡುಬಂತು.

ಇ-ಮೇಲ್​ ಬೆನ್ನಟ್ಟಿದ ಪೊಲೀಸರಿಗೆ ಕೆಲವೊಂದು ಅಂಶಗಳು ತಿಳಿದುಬಂದಿವೆ.  ಈ ಮೇಲ್ ಅವರಿಗೆ ಎಲ್ಲಿಂದ ಕಳುಹಿಸಲಾಗಿದೆ ಎಂಬುದು ಇತ್ತೀಚಿನ ಬಹಿರಂಗವಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈನ ಬಾಂದ್ರಾ  ಪೊಲೀಸರು ಸಲ್ಮಾನ್ ಖಾನ್ ಇಮೇಲ್ ಸ್ವೀಕರಿಸಿದ ಮೊಬೈಲ್ ಸಂಖ್ಯೆ ಇಂಗ್ಲೆಂಡ್​ನಿಂದ  ಬಂದಿದೆ ಎಂದು ಬಹಿರಂಗಪಡಿಸಿದ್ದಾರೆ.  ಸ್ನೇಹಿತ ಪ್ರಶಾಂತ್ ಗುಂಜಾಲ್ಕರ್ ಅವರಿಗೆ ಬಂದಿರುವ ಮೇಲ್​ ಬಂದಿರುವುದು  ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ವ್ಯಕ್ತಿ ಎಂದು ಹೇಳಲಾದ ರೋಹಿತ್ ಗಾರ್ಗ್ (Rohith Garg) ಎಂಬಾತನಿಂದ.

ಇದರ ಆಳಕ್ಕೆ ಹೋದ ಪೊಲೀಸರಿಗೆ ಈ ಇ-ಮೇಲ್​ ಬಂದಿರುವುದು ಇಂಗ್ಲೆಂಡ್​ನಿಂದ ಎಂದು ತಿಳಿದುಬಂದಿದೆ. ಸಲ್ಮಾನ್ ಖಾನ್ ತಂಡಕ್ಕೆ ಬೆದರಿಕೆ ಇ-ಮೇಲ್ ಬಂದ ನಂತರ ಮುಂಬೈ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದರೋಡೆಕೋರ ಗೋಲ್ಡಿ ಬ್ರಾರ್ (Goldy Brar) ಸಲ್ಮಾನ್ ಅವರೊಂದಿಗೆ ಮಾತನಾಡಲು ಬಯಸಿದ್ದರು ಮತ್ತು ಅವರ ತಂಡದ ಸಮಯವನ್ನು ನಿಗದಿಪಡಿಸುವಂತೆ ಕೇಳಿಕೊಂಡಿದ್ದರು ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.  ಇಮೇಲ್ ಅನ್ನು ಸಲ್ಮಾನ್ ಖಾನ್ ತಂಡದ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಸ್ವೀಕರಿಸಿದ್ದಾರೆ. ರೋಹಿತ್ ಗಾರ್ಗ್ ಎಂಬುವವರು ಈ ಮೇಲ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ದರೋಡೆಕೋರ ಲಾರೆನ್ಸ್​ ಬಿಷ್ಣೋಯಿಗೂ ಸಲ್ಮಾನ್​ ಖಾನ್​ಗೂ ಏನ್​ ಸಂಬಂಧ? ಯಾರೀತ?

ಇದರ ನಡುವೆಯೇ ಸಲ್ಮಾನ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರ ವೇಳಾಪಟ್ಟಿಯನ್ನು ಬದಲಾಯಿಸಲು ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.  ಮುಂದಿನ ಕೆಲವು ದಿನಗಳವರೆಗೆ ಯಾವುದೇ ರೀತಿಯ  ಗ್ರೌಂಡ್ ಈವೆಂಟ್ ತಪ್ಪಿಸಲು ಸಲ್ಮಾನ್‌ ಅವರ ತಂಡಗಳಿಗೆ ಪೊಲಿಸರು ಸೂಚಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.  ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸಬೇಕಿತ್ತು. ಆದರೆ ಅದಕ್ಕೂ ಸದ್ಯ ಬ್ರೇಕ್‌ ಹಾಕುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಲ್ಮಾನ್‌ ಅವರು ಸದ್ಯ ಮುಂಬೈನಲ್ಲಿಲ್ಲ (Mumbai) ಮತ್ತು ಅವರು ಯಾವಾಗ ಹಿಂದಿರುಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. 

ಏತನ್ಮಧ್ಯೆ, ಬೆದರಿಕೆಯಿಂದಾಗಿ ಸಲ್ಮಾನ್ ಖಾನ್ ಅವರ ಕೋಲ್ಕತ್ತಾದ (Kolkata) ಲೈವ್ ಶೋ ಅನ್ನು ಮುಂದೂಡಲಾಗಿದೆ ಎಂಬ ಗುಸುಗುಸು ಇದೆ. ಈ ಮೊದಲು ಏಪ್ರಿಲ್‌ನಲ್ಲಿ ನಡೆಯಲಿದೆ, ಆದರೆ ಸಂಘಟಕರು ನಂಬುವುದಾದರೆ, ಈಗ ಮೇ ಅಥವಾ ಜೂನ್‌ನಲ್ಲಿ ಪ್ರದರ್ಶನ ನಡೆಯಲಿದೆ.  ಮತ್ತೊಂದೆಡೆ, ಸಲ್ಮಾನ್ ಖಾನ್ ತಮ್ಮ ಎಲ್ಲಾ ಪ್ರವಾಸಗಳನ್ನು ನಿಷೇಧಿಸಿದ್ದಾರೆ. ಆದರೆ, ಅವರ ಮುಂಬರುವ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕೆಲಸ ಮುಂದುವರೆಯಲಿದೆ. ಏಕೆಂದರೆ ಇದು ಮುಂದಿನ ತಿಂಗಳು ಈದ್‌ಗೆ ಬಿಡುಗಡೆಯಾಗಲಿದೆ.

Salman Khan ಮನೆಗೆ ಫುಲ್‌ ಸೆಕ್ಯುರಿಟಿ: ಎಲ್ಲಾ ಕಾರ್ಯಕ್ರಮ ಸ್ಥಗಿತ!

click me!