ಮತ್ತೆ ಕೊರೊನಾ ಆತಂಕ; ಖ್ಯಾತ ನಟಿ ಕಿರಣ್ ಖೇರ್‌ಗೆ ಕೋವಿಡ್ ಪಾಸಿಟಿವ್

Published : Mar 21, 2023, 10:30 AM IST
ಮತ್ತೆ ಕೊರೊನಾ ಆತಂಕ; ಖ್ಯಾತ ನಟಿ ಕಿರಣ್ ಖೇರ್‌ಗೆ ಕೋವಿಡ್ ಪಾಸಿಟಿವ್

ಸಾರಾಂಶ

ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಬಾಲಿವುಡ್ ಖ್ಯಾತ ನಟಿ ಕಿರಣ್ ಖೇರ್‌ಗೆ ಕೋವಿಡ್ ಪಾಸಿಟಿವ್ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಬಾಲಿವುಡ್ ಖ್ಯಾತ ನಟಿ, ರಾಜಕಾರಣಿ ಕಿರಣ್ ಖೇರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಕಿರಣ್ ಖೇರ್ ಚೇತರಿಸಿಕೊಳ್ಳುಕ್ಕಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಿರಣ್ ಖೇರ್, 'ನಾನು ಕೋವಿಡ್ ಪರೀಕ್ಷೆ ಮಾಡಿಸಿದ್ದು ಪಾಸಿಟಿವ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದ ಯಾರಾದರೂ ಇದ್ದರೆ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಹೇಳಿದ್ದಾರೆ.   

ನಟಿ ಕಿರಣ್ ಖೇರ್ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 2021ರಲ್ಲಿ ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಬಳಿಕ ತಕ್ಷಣ ಚಿಕಿತ್ಸೆ ತೆಗೆದುಕೊಂಡರು. ಚೇತರಿಸಿಕೊಂಡಿರುವ ನಟಿ ಕಿರಣ್ ಖೇರ್  ಮತ್ತೆ ಮೊದಲಿನ ಹಾಗೆ ಆಗೆ ಆಕ್ಟೀವ್ ಆಗಿದ್ದಾರೆ. ಇದೀಗ ಮತ್ತೆ ಕೊರೊನಾ ಬಂದಿರುವುದು ಅವರ ಆತಂಕ ಹೆಚ್ಚಿಸಿದೆ. ಕಿರಣ್ ಖೇರ್ ಬೇಗ ಗುಣಮುಖರಾಗಿ ಎಂದು ಸ್ನೇಹಿತರು, ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ನಟಿ ಕಿರಣ್ ಖೇರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಅನೇಕ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಮಿಂಚಿದ್ದಾರೆ. ಹಾಗಾಗಿಯೇ ಅವರನ್ನು ಬಾಲಿವುಡ್‌ನಲ್ಲಿ ಸರ್ವೋತ್ಕೃಷ್ಟ ತಾಯಿ ಎಂದು ಕರೆಯುತ್ತಿದ್ದರು. ದೇವದಾಸ್, ರಂಗ್ ದೇ ಬಸಂತಿ, ಹಮ್ ತುಮ್, ದೋಸ್ತಾನಾ, ಮೈ ಹೂ ನಾ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳ ಪಾತ್ರಗಳಿಗಾಗಿ ಕಿರಣ್ ಖೇರ್ ಸಾಕಷ್ಟು ಪ್ರಶಂಸೆಯನ್ನು ಗಳಿಸಿದ್ದರು. 

ಪಾಕಿಸ್ತಾನದ ಸಿನಿಮಾ ಮತ್ತು ಶೋಗಳಲ್ಲಿ ಕೆಲಸ ಮಾಡಿದ ಭಾರತೀಯ ಸ್ಟಾರ್ಸ್!

ಕಿರಣ್ ಖೇರ್  ಖ್ಯಾತ ನಟ ಅನುಪಮ್ ಖೇರ್ ಅವರ ಪತ್ನಿ. ಅನುಪಮ್ ಮತ್ತು ಕಿರಣ್ 1985 ರಲ್ಲಿ ವಿವಾಹವಾದರು. ಅದಕ್ಕೂ ಮೊದಲು ಕಿರಣ್ ಖೇರ್ ಗೌತಮ್ ಬೆರ್ರಿ ಜೊತೆ ವಿವಾಹವಾಗಿದ್ದರು. ಮೊದಲ ಪತಿಯಿಂದ 1981 ರಲ್ಲಿ ಸಿಕಂದರ್ ಖೇರ್ ಎಂಬ ಮಗನನ್ನು ಸ್ವೀಕರಿಸಿದರು. ಆದರೆ ಕೆಲವೇ ವರ್ಷಕ್ಕೆ ದೂರ ಆದರು. ಬಳಿಕ ಅನುಪಮ್ ಖೇರ್ ಜೊತೆ ಮದುವೆಯಾದರು. 

ಸಿನಿಮಾ ಜೊತೆಗೆ ಕಿರಣ್ ಖೇರ್ ರಿಯಾಲಿಟಿ ಶೋ ಗಳಲ್ಲಿ ಬ್ಯುಸಿಯಾಗಿದ್ದರು. ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ರಿಯಾಲಿಟಿ ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಅನೇಕರ ಪ್ರೀತಿಗೆ ಪಾತ್ರರಾಗಿದ್ದ ಕಿರಣ್ ಖೇರ್ ಅನಾರೋಗ್ಯಾದ ಬಳಿಕ ಹಿಂದೆ ಸರಿದರು. ದೀರ್ಘಕಾಲದ ಚಿಕಿತ್ಸೆ ಬಳಿಕ ಕಿರಣ್ ಖೇರ್ ಸದ್ಯ ಚೇತರಿಸಿಕೊಂಡಿದ್ದರು. ಮತ್ತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೀಗ ಕೊರೊನಾ ಪಾಸಿಟಿವ್‌ನಿಂದ ಬಳಲುತ್ತಿದ್ದಾರೆ. ಬೇಗ ಗುಣಮುಖರಾಗಿಲಿ ಎನ್ನುವುದು ಅಭಿಮಾನಿಗಳ ಆಶಯ.  

Cancer ಗೆದ್ದು ಮತ್ತೆ ಕೆಲಸಕ್ಕೆ ಮರಳಿದ ಕಿರಣ್‌ ಖೇರ್‌!

ಅವರು ನಟ ಅನುಪಮ್ ಖೇರ್ ಅವರ ಪತ್ನಿ. ಅನುಪಮ್ ಮತ್ತು ಕಿರಣ್ 1985 ರಲ್ಲಿ ವಿವಾಹವಾದರು. ಅವರು ಈ ಹಿಂದೆ ಗೌತಮ್ ಬೆರ್ರಿ ಅವರನ್ನು ವಿವಾಹವಾದರು ಮತ್ತು 1981 ರಲ್ಲಿ ಸಿಕಂದರ್ ಖೇರ್ ಎಂಬ ಮಗನನ್ನು ಹೊಂದಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?