ಬಾಲಕಿಯ ಜೀವ ಉಳಿಸಲು ಸಲ್ಮಾನ್​ ಖಾನ್​ ಅಸ್ಥಿಮಜ್ಜೆ ದಾನ: ಭಾರತದ ಮೊದಲ ದಾನಿ ಎಂಬ ಹೆಗ್ಗಳಿಕೆ!

By Suchethana D  |  First Published Jul 29, 2024, 5:01 PM IST

ನಾಲ್ಕು ವರ್ಷದ ಬಾಲಕಿಯ ಜೀವ ಉಳಿಸಲು ಸಲ್ಮಾನ್​ ಖಾನ್​ ಅಸ್ಥಿಮಜ್ಜೆ ದಾನ ಮಾಡುವ ಮೂಲಕ ಭಾರತದ ಮೊದಲ ದಾನಿ ಎಂದು ಎನಿಸಿಕೊಂಡಿದ್ದಾರೆ. ಏನಿದು ಘಟನೆ? 
 


ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡಿರೋ ಸಲ್ಮಾನ್ ಖಾನ್ ಹುಡುಗಿಯರ ವಿಷಯಕ್ಕಾಗಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ನಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಕೃಷ್ಣಮೃಗ ಬೇಟಿಯಾಗಿ ವಿವಾದದಲ್ಲಿ ಸಿಲುಕಿರುವ ಸಲ್ಮಾನ್​ ಖಾನ್​ ಬಿಷ್ಣೋಯಿ ಸಮುದಾಯಕ್ಕೆ ಕ್ಷಮೆ ಕೋರದ ಹಿನ್ನೆಲೆಯಲ್ಲಿ, ಇವರ ವಿರುದ್ಧ ಕೊಲೆ ಬೆದರಿಕೆ ಬರುತ್ತಲೇ ಇವೆ. ಇವೆಲ್ಲವುಗಳ ನಡುವೆಯೇ ಇದೀಗ 14 ವರ್ಷ ಹಿಂದಿನ ಘಟನೆ ಏಕಾಏಕಿ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅದರಲ್ಲಿ ಸಲ್ಮಾನ್​ ಖಾನ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಜೀವ ಉಳಿಸಿದ ಘಟನೆ! ಬಾಲಕಿಗೆ ಅಸ್ಥಿಮಜ್ಜೆ (bone marrow) ದಾನ ಮಾಡಿದ್ದಾರೆ. ಹೀಗೆ ಮಾಡಿರುವ  ಭಾರತದ ಮೊದಲ ವ್ಯಕ್ತಿ ಇವರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಮೂಲಕ, ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಲ್ಮಾನ್ ಖಾನ್ ಹೀರೋ ಆಗಿದ್ದಾರೆ.

ಇದು  2010 ರಲ್ಲಿ ನಡೆದ ಘಟನೆ.  ಸಲ್ಮಾನ್ ಖಾನ್ ಬಾಲಕಿಯೊಬ್ಬಳ ಜೀವವನ್ನು ಉಳಿಸುವುದಾಗಿ  ವೇದಿಕೆಯೊಂದರಲ್ಲಿ  ಭರವಸೆಯನ್ನು ನೀಡಿದ್ದರು. ಅದನ್ನು ಈಡೇರಿಸಿದ್ದಾರೆ. ಈ ಬಾಲಕಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಸ್ಥಿಮಜ್ಜೆಯ ಕಸಿ ಮಾಡಬೇಕಾಗಿತ್ತು. ಈ ಬಾಲಕಿಯ ತಾಯಿ ಸಲ್ಮಾನ್ ಖಾನ್ ಎದುರು ನೆರೆದಿದ್ದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಅಸ್ಥಿಮಜ್ಜೆಯ  ಕಸಿ ಸಹಾಯಕ್ಕಾಗಿ ನೋಂದಾಯಿಸುವಂತೆ ಕೇಳಿಕೊಂಡಿದ್ದರು. ಆಗ ಸಲ್ಮಾನ್​ ಖಾನ್​ ಅವರು,  ತಮ್ಮ ಅಸ್ಥಿಮಜ್ಜೆ ಹೊಂದಾಣಿಕೆಯಾದರೆ ಅದನ್ನು ದಾನ ಮಾಡುವುದಾಗಿ ವೇದಿಕೆಯಿಂದಲೇ ಭರವಸೆ ನೀಡಿದರು. ಇದರ ನಂತರ, ಸಲ್ಮಾನ್ ಖಾನ್ ಅವರು ಹೆಣ್ಣು ಮಗುವಿಗೆ ದಾನ ಮಾಡಿದ್ದಾರೆ. ಈ ಮೂಲಕ  ಭಾರತದ ಮೊದಲ ಅಸ್ಥಿಮಜ್ಜೆಯ ದಾನಿ ಎನಿಸಿಕೊಂಡಿದ್ದಾರೆ. ಘಟನೆ ನಡೆದು 14 ವರ್ಷಗಳಾಗಿದ್ದು, ಬಾಲಕಿಯ ಬಗ್ಗೆ ಅಪ್​ಡೇಟ್​ ಏನೂ ಹೊರಬಂದಿಲ್ಲ. 

Tap to resize

Latest Videos

undefined

ಕೊಲೆ ಬೆದರಿಕೆ ಕುರಿತು ಕೊನೆಗೂ ಬಾಯ್ಬಿಟ್ಟ ಸಲ್ಮಾನ್​: ಆದ್ರೆ ಹಿಂದೂಗಳ ಕ್ಷಮೆ ಕೋರಲು ಹಿಂದೇಟು!

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ,  ಸಲ್ಮಾನ್ ಖಾನ್ ಅವರು ಬೋನ್ ಮ್ಯಾರೋ ಡೋನರ್ ರಿಜಿಸ್ಟ್ರಿ, ಇಂಡಿಯಾ ಇವರಲ್ಲಿ ದಾನದ ಕುರಿತು ಹೇಳಿಕೊಂಡಿದ್ದರು.  ನಾಲ್ಕು ವರ್ಷದ ಬಾಲಕಿ ಪೂಜಾ ಕುರಿತು ತಿಳಿದುಕೊಂಡ ಬಳಿಕ,  ಸಲ್ಮಾನ್ ಖಾನ್ ಆರಂಭದಲ್ಲಿ ತಮ್ಮ ಫುಟ್ಬಾಲ್ ತಂಡದಿಂದ ದೇಣಿಗೆ ಕೊಡಿಸಲು ಮುಂದಾಗಿದ್ದರು. ಆದರೆ  ಕೊನೆ ಕ್ಷಣದಲ್ಲಿ ತಂಡ ಹಿಂದೆ ಸರಿದಿತ್ತು. ಆಗ ಖುದ್ದು  ಸಲ್ಮಾನ್ ಖಾನ್​ ಮತ್ತು ಅವರ ಸಹೋದರ ಅರ್ಬಾಜ್ ಖಾನ್ ಮಾತ್ರ ದೇಣಿಗೆ ನೀಡಿದ್ದರು. ಅದಾದ ಬಳಿಕ ಅಸ್ಥಿಮಜ್ಜೆಯನ್ನೂ ದಾನ ಮಾಡುವ ಮೂಲಕ ಸಲ್ಮಾನ್ ಖಾನ್  ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಬೋನ್ ಮ್ಯಾರೋ ದಾನ ಮಾಡುವ ಮೂಲಕ ರಕ್ತದ ಕ್ಯಾನ್ಸರ್ ಸೇರಿದಂತೆ ಹಲವು ವಿಧವಾದ ರಕ್ತದಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಬಹುದು. ಒಬ್ಬರು ಬೋನ್ ಮ್ಯಾರೋ ದಾನ ಮಾಡಲು ಮುಂದಾದರೆ ಅನೇಕ ಮಂದಿ ಅದೇ ದಾರಿಯಲ್ಲಿ ಹೆಜ್ಜೆಹಾಕುತ್ತಾರೆ ಎಂದಿದ್ದಾರೆ ಸಲ್ಲು.


 ಈ ಕುರಿತು ಹಿಂದೊಮ್ಮೆ ಸಲ್ಮಾನ್ ಖಾನ್ ಅವರ ಈ ಔದಾರ್ಯವನ್ನು ಸುನಿಲ್ ಶೆಟ್ಟಿ ಕೊಂಡಾಡಿದ್ದರು.  ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ, "ಸಲ್ಮಾನ್ ಖಾನ್ ಒಳ್ಳೆಯ ವ್ಯಕ್ತಿ, ಅದಕ್ಕಾಗಿಯೇ ಅವರು ಈ ದಾನ ಮಾಡಿದ್ದಾರೆ.   ಸಲ್ಮಾನ್​ ಖಾನ್​  ಸಮಾಜದಲ್ಲಿ ಬದಲಾವಣೆಯನ್ನು ಬಯಸುವ ವ್ಯಕ್ತಿ.  ಅವರಿಗೆ ಏನೇ ಕಷ್ಟ ಬಂದರೂ ದೇವರು ಸದಾ ಅವರ ಪರವಾಗಿ ಇದೇ  ಕಾರಣಕ್ಕೆ ನಿಲ್ಲುವುದುದ.  ದೇವರು ಅವರನ್ನು ಸದಾ ರಕ್ಷಿಸುತ್ತಿದ್ದಾನೆ. ಅವನು ದೇವರ ಮೆಚ್ಚಿನ ಮಗು ಎಂದು ಕೊಂಡಾಡಿದ್ದರು.  ಹೆಚ್ಚು ಹೆಚ್ಚು ಜನ ಬೋನ್ ಮ್ಯಾರೋ ದಾನ ಮಾಡಲು ಮುಂದಾದರೆ ಹೆಚ್ಚು ಹೆಚ್ಚು ಕ್ಯಾನ್ಸರ್ ರೋಗಿಗಳನ್ನು ಉಳಿಸಬಹುದು. ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಮುಂದೆ ಬಂದು ಬೋನ್ ಮ್ಯಾರೋ ದಾನ ಮಾಡಬೇಕು ಎಂದು ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಸೆಕ್ಸ್ ಕುರಿತು ಮಾತನಾಡಿದ್ದ 'ಕಿರಾತಕ' ಬೆಡಗಿ ಫುಲ್​ ಟೈಟಾಗಿ ಯುವಕರಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು ಹೀಗೆ...

click me!