ಬಾಯ್‌ಫ್ರೆಂಡ್ ಜೊತೆ ಹಾಯಾಗಿದ್ದೇನೆ ಎಂದಿದ್ದ ಶ್ರುತಿ ಹಾಸನ್‌ ಮದ್ವೆಯಾಗಿದ್ದು ನಿಜನಾ ? ಕೊನೆಗೂ ಮೌನ ಮುರಿದ ನಟಿ!

By Suvarna News  |  First Published Dec 28, 2023, 11:16 AM IST

ಬಾಯ್‌ಫ್ರೆಂಡ್ ಜೊತೆ ಹಾಯಾಗಿದ್ದೇನೆ, ಮದ್ವೆಯಾಕೆ ಎಂದು ಹಿಂದೊಮ್ಮೆ ಹೇಳಿದ್ದ ಬಾಲಿವುಡ್ ನಟಿ ಶ್ರುತಿ ಹಾಸನ್‌ ಗುಟ್ಟಾಗಿ ಮದ್ವೆಯಾದ್ರಾ? ನಟಿ ಹೇಳಿದ್ದೇನು? 
 


 ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಸದ್ಯ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ.   'ವಾಲ್ಟೇರ್ ವೆರಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರೋ ನಟಿ ಇದೀಗ 'ಸಲಾರ್'ನ ಭರ್ಜರಿ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಇವರ ಕೈಯಲ್ಲಿ  ಇನ್ನೂ ಅನೇಕ ಯೋಜನೆಗಳು ಇವೆ.  ಇದಲ್ಲದೆ, ಶ್ರುತಿ (Shruti Haasan) ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.  ನಟಿ ತಮ್ಮ ಗೆಳೆಯ ಶಂತನು ಬಗ್ಗೆಯೂ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗೆ ಶಂತನು ಜೊತೆ ಶ್ರುತಿ ಅವರ ಮದುವೆ ಗುಟ್ಟಾಗಿ ನಡೆದೇ ಹೋಯ್ತು ಎನ್ನುವ ಸುದ್ದಿ ಸದ್ದು ಮಾಡಿತ್ತು. 

ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಓರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ. ಇವರು  ಸೋಷಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದ್ದ ವೇಳೆ  ‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದುಬಿಟ್ಟಿದ್ದರು. ಇದರಿಂದಾಗಿ ಶ್ರುತಿ ಹಾಸನ್‌ ಗುಟ್ಟಾಗಿ ಮದುವೆಯಾಗಿದ್ದಿರಬಹುದು ಎಂದು ಬಿ-ಟೌನ್‌ನಲ್ಲಿ ಸಕತ್‌ ಸದ್ದು ಮಾಡಿತು. ಈಕೆ  ಶಂತನು ಹಜಾರಿಕಾ ಜೊತೆ ಸಂಬಂಧದಲ್ಲಿ ಇರುವ ಕಾರಣ, ಅವರ ಜೊತೆಯೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಲವಾಗಿತ್ತು.  

Tap to resize

Latest Videos

ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ​ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಇದೀಗ ನಟಿ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಮದುವೆಯಾಗಿಲ್ಲ. ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಹೇಳುವಂತಹ ವ್ಯಕ್ತಿಯು ಇಂತಹ ವಿಚಾರವನ್ನು ಮುಚ್ಚಿಡುತ್ತಾರೆಯೇ? ನಾನು ಮದುವೆಯ ವಿಚಾರವನ್ನು ಏಕೆ ಅಡಗಿಸಿಡಲಿ? ನನ್ನ ಕುರಿತು ತಿಳಿಯದೆ ಇರುವವರು ಸುಮ್ಮನಿರಿ ಎಂದು ಹೇಳಿದ್ದಾರೆ.  ಈ ಹಿಂದೆ ಮದುವೆಯ ಕುರಿತು ಮೀಡಿಯಾಗಳ ಜೊತೆ ಮಾತನಾಡಿದ್ದ ನಟಿ,  ಮದುವೆ ಎಂಬ ಪದ ನನಗೆ ತುಂಬಾ ಭಯ ಹುಟ್ಟಿಸುತ್ತದೆ. ನಾನು ನಿಜಕ್ಕೂ ಅದರ ಕುರಿತು ಯೋಚಿಸಲು ಹೋಗುವುದಿಲ್ಲ. ನಾನು ಆತನೊಂದಿಗೆ ಖುಷಿಯಾಗಿದ್ದೇನೆ. ಆತನ ಜತೆ ಕೆಲಸ ಮಾಡುವುದು, ಆತನ ಜತೆ ಸಮಯ ಕಳೆಯುವುದು ನನಗೆ ಖುಷಿ ನೀಡುತ್ತದೆ. ಇತರೆ ಬಹುತೇಕ ಮದುವೆಗಿಂತ ಇದು ಉತ್ತಮವಲ್ಲವೇ ಎಂದಿದ್ದರು. ಮದುವೆಯಾಗುವುದಕ್ಕಿಂತ ಬಾಯ್‌ಫ್ರೆಂಡ್‌ ಜೊತೆ ಸಂಬಂಧದಲ್ಲಿರುವುದೇ ಬೆಸ್ಟ್‌ ಎಂಬ ಅರ್ಥದಲ್ಲಿ ನಟಿ ಹೇಳಿದ್ದರು. ಆದರೆ ಓರಿ ಅವರ ಹೇಳಿಕೆ ಬಳಿಕ ಶ್ರುತಿಯ ಬಗ್ಗೆ ಸುದ್ದಿ ಜೋರಾಗಿದ್ದು, ಇದೀಗ ಸ್ಪಷ್ಟನೆ ಸಿಕ್ಕಂತಾಗಿದೆ.

 

ಅಷ್ಟಕ್ಕೂ ಮೀ ಟೂ ಅಭಿಯಾನ ಹುಟ್ಟುಹಾಕಿರುವ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ.  ಅಪ್ಪ ಕಮಲ ಹಾಸನ್​ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್​ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ  ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ  ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.

ನಟಿ ಜಾಕ್ವೆಲಿನ್‌-ಸುಕೇಶ್‌ ಕೇಸ್​ಗೆ ಭಾರಿ ಟ್ವಿಸ್ಟ್‌! ಜೈಲಿಂದ ಪತ್ರ ಬರೆದಿದ್ದು ಈತ ಅಲ್ವೇ ಅಲ್ವಂತೆ, ಹಾಗಿದ್ರೆ ಯಾರು?

click me!