ನಾನು ಆರೋಗ್ಯವಾಗಿದ್ದೀನಿ; ಅನಾರೋಗ್ಯ ವದಂತಿಗೆ ಶ್ರುತಿ ಹಾಸನ್ ಖಡಕ್ ಉತ್ತರ

Published : Jul 07, 2022, 01:59 PM IST
ನಾನು ಆರೋಗ್ಯವಾಗಿದ್ದೀನಿ; ಅನಾರೋಗ್ಯ ವದಂತಿಗೆ ಶ್ರುತಿ ಹಾಸನ್ ಖಡಕ್ ಉತ್ತರ

ಸಾರಾಂಶ

ನಾನು ಆರೋಗ್ಯವಾಗಿದ್ದೀನಿ ಎಂದು ನಟಿ ಶ್ರುತಿ ಹಾಸನ್ ಬಹಿರಂಗ ಪಡಿಸುವ ಮೂಲಕ ತನ್ನ ಬಗ್ಗೆ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದ್ದಾರೆ.  

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ (Shruti Haasan) ಸದ್ಯ ಬಹುನಿರೀಕ್ಷೆಯ ಸಲಾರ್ (Salaar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರುತಿ ಹಾಸನ್ ಇತ್ತೀಚಿಗಷ್ಟೆ ತನ್ನನ್ನು ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಬಹಿರಂಗ ಪಡಿಸಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿರುವ ನಟಿ ಶ್ರುತಿ ತನಗೆ ಪಿಸಿಓಎಸ್ (PCOS) ಮತ್ತು ಎಂಡೊಮೆಟ್ರಿಯೊಸಿಸ್ (Endometriosis) ಸಮಸ್ಯೆಯಿದೆ ಎಂದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಹಾಸನ್ ವರ್ಕೌಟ್ ವಿಡಿಯೋ ಶೇರ್ ಮಾಡಿ ಈ ಬಗ್ಗೆ ಬಹಿರಂಗ ಪಡಿಸಿದರು. ಶ್ರುತಿ ಕೆಲವು ಕೆಟ್ಟ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದರು.

ಈ ಬಗ್ಗೆ ಬಹಿರಂಗ ಪಡಿಸಿದ ಬಳಿಕ ಶ್ರುತಿ ಹಾಸನ್ ಆರೋಗ್ಯದ ಬಗ್ಗೆ ತರಹೇವಾರಿ ಸುದ್ದಿಗಳು ವೈರಲ್ ಆಗಿವೆ. ಶ್ರುತಿ ಹಾಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆಸ್ಪತ್ರೆಗೆ ದಾಖಲಾಗಿದ್ದಾರೆ, ಅನಾರೋಗ್ಯದಿಂದ ನರಳುತ್ತಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ನಟಿ ಶ್ರುತಿ ಹಾಸನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರುತಿ, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೀನಿ. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದೀನಿ. ಅನೇಕ ಮಹಿಳೆಯರು ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿ' ಎಂದು ಹೇಳಿದ್ದಾರೆ. 

ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಅನೇಕರು ಕರೆ ಮಾಡುತ್ತಿದ್ದಾರೆ. ಆದರೆ ನಾನು ಆರೋಗ್ಯವಾಗಿದ್ದೀನಿ ಎಂದು ಹೇಳಿದ್ದಾರೆ. ಈ ಮೂಲಕ ಶ್ರುತಿ ತನ್ನ ಬಗ್ಗೆ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದರು. 

ಶ್ರುತಿ ಹಾಸನ್‌ಗೆ ಕಾಡುತ್ತಿದೆ ಈ ಸಮಸ್ಯೆ; ಅನಾರೋಗ್ಯದ ಬಗ್ಗೆ ರಿವೀಲ್ ಮಾಡಿದ 'ಸಲಾರ್' ನಟಿ

ಶ್ರುತಿ ಹಾಸನ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಜೊತೆಗೆ ಎನ್‌ಬಿ107, ಮೆಗಾ 154 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಶ್ರುತಿ ಲಾಬಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದಹಾಗೆ ನಟಿ ಶ್ರುತಿ ಹಾಸನ್ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಹೆಚ್ಚು ಟ್ರೋಲ್‌ಗೆ ಗುರಿಯಾಗುವ ನಟಿಯರಲ್ಲಿ ಶ್ರುತಿ ಕೂಡ ಒಬ್ಬರಾಗಿದ್ದಾರೆ. ಬಾಡಿ ಶೇಮಿಂಗ್, ಬಾಯ್ ಫ್ರೆಂಡ್ ಹೀಗೆ ಅನೇಕ ವಿಚಾರಗಳಿಗೆ ಶ್ರುತಿ ಹಾಸನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಶ್ರುತಿ ಹಾಸನ್ ಆಗಾಗ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸುತ್ತಾರೆ. 

ರಜನಿಕಾಂತ್ ಅಳಿಯನೊಟ್ಟಿಗೆ ಕಮಲ್ ಹಾಸನ್ ಮಗಳು ಶ್ರುತಿ ಹೆಸರು ಲಿಂಕ್ ಆಗಿತ್ತು!

ಇನ್ನು ಶ್ರುತಿ ಹಾಸನ್ ಬಾಯ್ ಪ್ರೆಂಡ್ ವಿಚಾರವಾಗಿ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಕಮಲ್ ಹಾಸನ್ ಪುತ್ರಿ ಸದ್ಯ ಮುಂಬೈ ಮೂಲದ ವ್ಯಕ್ತಿ ಸಂತಾನು ಹಜಾರಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶ್ರುತಿ ಆಗಾಗ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?