ಸೌತ್ ಸ್ಟಾರ್ ತಮನ್ನಾ ಭಾಟಿಯಾ (Tamannaah Bhatia) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಇತ್ತೀಚಿಗಷ್ಟೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮನ್ನಾ ಅಭಿಮಾನಿಗಳಿಗೆ ಏನಾದರು ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದರು. ಮಿಲ್ಕಿ ಬ್ಯೂಟಿ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿತ್ತು. ಈ ಸಮಯದಲ್ಲಿ ತಮನ್ನ ತನಗೆ ಮರೆವಿನ ಸಮಸ್ಯೆ (Losing Memory) ಕಾಡುತ್ತಿದೆ ಎಂದು ಬಹಿರಂಗ ಪಡಿಸಿದರು.
ಸೌತ್ ಸ್ಟಾರ್ ತಮನ್ನಾ ಭಾಟಿಯಾ (Tamannaah Bhatia) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಇತ್ತೀಚಿಗಷ್ಟೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮನ್ನಾ ಅಭಿಮಾನಿಗಳಿಗೆ ಏನಾದರು ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದರು. ಮಿಲ್ಕಿ ಬ್ಯೂಟಿ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿತ್ತು. ಈ ಸಮಯದಲ್ಲಿ ತಮನ್ನ ತನಗೆ ಮರೆವಿನ ಸಮಸ್ಯೆ (Losing Memory) ಕಾಡುತ್ತಿದೆ ಎಂದು ಬಹಿರಂಗ ಪಡಿಸಿದರು.
ಅಭಿಮಾನಿಯೊಬ್ಬರು ನಿಮಗೆ ದೊಡ್ಡ ಭಯ ಯಾವುದು ಎಂದು ಕೇಳಿದ ಪ್ರಶ್ನೆಗೆ ತಮನ್ನಾ ಉತ್ತರ ನೀಡಿದ್ದಾರೆ. ಇದಕ್ಕೆ ಇತ್ತರಿಸಿದ ತಮನ್ನಾ 'ನನಗೆ ಮೆಮೊರಿ ಲಾಸ್ ಆಗುತ್ತಿಗೆ. ಇದು ನನಗೆ ತುಂಬಾ ಭಯವಾಗುತ್ತಿದೆ' ಎಂದು ಹೇಳಿದ್ದಾರೆ. ತಮನ್ನಾ ಅವರ ಈ ಉತ್ತರ ಅನೇಕರನ್ನು ಚಿಂತೆಗೆ ಹಚ್ಚಿದೆ. ಮರೆಗುಳಿತನ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಇದೀಗ ತಮನ್ನಾ ಕೂಡ ಕೇಳಿರುವುದು ಅಚ್ಚರಿ ಜೊತೆಗೆ ಆತಂಕ ಕೂಡ ಶುರುವಾಗಿದೆ. ಈ ಬಗ್ಗೆ ಹೆಚ್ಚಿನದನ್ನು ತಮನ್ನಾ ಹೇಳಿಲ್ಲ. ಆದರೆ ಸ್ಮರಣಶಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಇನ್ನು ಅನೇನ ಪ್ರಶ್ನೆಗೆ ತಮನ್ನಾ ಉತ್ತರ ನೀಡಿದ್ದಾರೆ. ತಾನು ಮಾಡಿರುವ ಸಿನಿಮಾಗಳಲ್ಲಿ ತುಂಬಾ ವಿಶೇಷವಾದ ಪಾತ್ರ ಯಾವುದು ಎನ್ನುವುದನ್ನು ಬಹಿರಂಗ ಪಡಿಸಿದ್ದರು. ತಮಿಳಿನ ಧರ್ಮದುರೈ (Dharmadurai) ಸಿನಿಮಾದ ಶುಭಾಷಿಣಿ ಮತ್ತು ಬಾಹುಬಲಿ (Bahubali) ಸಿನಿಮಾದ ಆವಂತಿಕ ಪಾತ್ರಗಳು ತುಂಬಾ ಸ್ಪೆಷಲ್ ಎಂದು ತಮನ್ನಾ ಹೇಳಿದ್ದಾರೆ. ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿರುವ ಮೂಲಕ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
Cannes 2022; ಕಪ್ಪು-ಬಿಳಿ ಗೌನ್‌ನಲ್ಲಿ ಮಿಂಚಿದ ನಟಿ ತಮನ್ನಾ
ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕೊನೆಯದಾಗಿ ಎಫ್3 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಗುರ್ತೊಂದ ಸೀತಾಕಲಮ್, ಬೊಲೆ ಚೋಡಿಯಾ, ಪ್ಲಾನ್ ಎ ಪ್ಲಾನ್ ಬಿ, ಬಬ್ಲಿ ಬೌನ್ಸರ್, ಭೋಲಾ ಶಂಕರ್ ಸೇರಿದಂತೆ ಅನೇಕ ಸಿನಿಮಾಗಳು ತಮನ್ನಾ ಬಳಿ ಇದೆ. ಗುರ್ತೊಂದ ಸೀತಾಕಲಮ್ ಸಿನಿಮಾ ಕನ್ನಡದ ಸೂಪರ್ ಹಿಟ್ ಲವ್ ಮಾಕ್ಟೈಲ್ ಸಿನಿಮಾದ ರಿಮೇಕ್ ಆಗಿದೆ. ಮಿಲನಾ ನಾಗರಾಜ್ ಅಭಿನಯಸಿದ್ದ ನಿಧಿಮಾ ಪಾತ್ರದಲ್ಲಿ ತಮನ್ನಾ ಬಣ್ಣ ಹಚ್ಚಿದ್ದಾರೆ. ತಮನ್ನಾ ಅವರನ್ನು ನಿಧಿಮಾ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
Badshahs New Song: ಮಿಲ್ಕಿ ಬ್ಯೂಟಿ ಹಾಟ್ ಡ್ಯಾನ್ಸ್‌ಗೆ ಸಮಂತಾ ಫುಲ್ ಮಾರ್ಕ್ಸ್ !
ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚಿದ ತಮನ್ನಾ
ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸೌತ್ ಸುಂದರಿ ತಮನ್ನಾ ಕೂಡ ಮಿಂಚಿದ್ದರು. ಮೇ 17ರಿಂದ ಅದ್ದೂರಿಯಾಗಿ ಪ್ರಾರಂಭವಾಗಿದ್ದ ಫೆಸ್ಟಿವಲ್ ನಲ್ಲಿ ತಮನ್ನಾ ಅಂತಾರಾಷ್ಟೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. 75ನೇ ಕಾನ್ಸ್ ಚಲನ ಚಿತ್ರೋತ್ಸವದಲ್ಲಿ ಭಾರತೀಯ ಸೆಲೆಬ್ರಿಟಿಗಳು ಮತ್ತಷ್ಟು ರಂಗು ಹೆಚ್ಚಿಸಿದ್ದರು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಉದ್ಘಾಟನಾ ಸಮಾರಂಭದಲ್ಲಿ ದೇಸಿ ಉಡುಗೆ ಧರಿಸಿ ಗಮನ ಸೆಳೆದಿದ್ದರು. ಕಾನ್ಸ್ ಚಿತ್ರೋತ್ಸವದ ಮೊದಲ ದಿನ ತಮನ್ನಾ ಕಪ್ಪು ಮತ್ತು ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದರು. ಕಾನ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ ಫೋಟೋಗಳನ್ನು ತಮನ್ನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.