ನಟಿಯರ ತ್ವಚೆ ಬಗ್ಗೆ ಕ್ರಿಯೇಟ್ ಆಗಿರುವ ಕಲ್ಪನೆಗಳನ್ನು ಬ್ರೇಕ್ ಮಾಡಿದ ಸಾಯಿ ಪಲ್ಲವಿ. ಜಾರ್ಜಿಯಾದಲ್ಲಿದ್ದಾಗ ಇಷ್ಟೊಂದು ಇನ್‌ಸೆಕ್ಯೂರಿಟಿ ಇತ್ತಂತೆ....
ಮಾಲಿವುಡ್ ಮಲರ್ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಕ್ರಿಯೇಟ್ ಮಾಡಿರುವ ಸ್ಟ್ಯಾಂಡರ್ಡ್‌ಗಳನ್ನು ಯಾರಿಂದಲೂ ಬ್ರೇಕ್ ಮಾಡಲು ಆಗದು. ಬ್ಯೂಟಿ ಪ್ರಾಡೆಕ್ಟ್ ಜಾಹೀರಾತುಗಳಿಗೆ ಸಹಿ ಮಾಡಲ್ಲ, ಹಾಟ್ ಡ್ರೆಸ್ ಧರಿಸುವುದಿಲ್ಲ, ಗೆಸ್ಟ್ ರೋಲ್ ಒಪ್ಪಿಕೊಳ್ಳುವುದಿಲ್ಲ, ನಟನೆ ಮಾತ್ರವಲ್ಲ ನೃತ್ಯಕ್ಕೂ ಸೈ. ಒಟ್ಟಿನಲ್ಲಿ ಸಾಯಿ ಪಲ್ಲವಿ ಅಂದ್ರೆ ಸಿಂಪಲ್ ಆಂಡ್ ಸೂಪರ್ ಎನ್ನುತ್ತಾರೆ ಸಿನಿ ರಸಿಕರು.
ಮೆಚ್ಚುಗೆ ಎಷ್ಟು ಹರಿದು ಬರುತ್ತಿತ್ತು ಅಷ್ಟೇ ನೆಗೆಟಿವ್ ಕಾಮೆಂಟ್‌ಗಳು ಕೇಳಿ ಬರುತ್ತಿತ್ತು. ಪಿಂಪಲ್ ಹೆಚ್ಚಾಗಿ, ಸ್ಕಿನ್ ಕೇರ್ ಮಾಡಬೇಕು, ನಟಿ ನೋಡಲು ಚೆನ್ನಾಗಿಲ್ಲ ಹಾಗೆ ಹೀಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಕೇರ್ ಮಾಡದೆ ಪಲ್ಲವಿ ಮೆಡಿಕಲ್ ವಿದ್ಯಾಭ್ಯಾಸ ಮತ್ತು ಸಿನಿಮಾ ವೃತ್ತಿಯನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸ್ಕಿನ್ ಬಗ್ಗೆ ಪಲ್ಲವಿ ಮಾತನಾಡಿದ್ದಾರೆ.
'ಜಾರ್ಜಿಯಾದಲ್ಲಿ ನಾನು ಮೆಡಿಸಿನ್ ಓದುವಾಗ ನನಗೆ ಯಾವಾಗಲೂ ಇನ್‌ಸೆಕ್ಯೂರಿಟಿ ಕಾಡುತ್ತಿತ್ತು. ಜಾರ್ಜಿಯಾ ಜನರು ತುಂಬಾನೇ ಫೇರ್ ಇರುತ್ತಾರೆ ಸ್ಕಿನ್ ಗ್ಲೋ ಆಗುತ್ತದೆ ಒಂದು ಪಿಂಪಲ್ ಇರುವುದಿಲ್ಲ. ಆದರೆ ನನಗೆ ತುಂಬಾ ಪಿಂಪಲ್ ಇತ್ತು ಹೀಗಾಗಿ ಮೊದಲ ಸಿನಿಮಾ ಮಾಡಿದಾಗ ಜನರು ನನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ವೋ ಅನ್ನೋ ಭಯ ಇತ್ತು. ಭಾರತದಲ್ಲಿ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಪ್ರೇಮಮ್ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಸಿನಿಮಾ ಬಿಡುಗಡೆ ದಿನ ತುಂಬಾ ಭಯ ಇತ್ತು ಈ ಸಿನಿಮಾವನ್ನು ಜಾರ್ಜಿಯಾದಲ್ಲಿರುವ ಜನರು ನೋಡಿದ್ದರೆ ಹೇಗೆ? ರಾಗಾ ಆಗ ಏನು ಹೇಳುತ್ತಾರೆ ಅನ್ನೋ ಯೋಚನೆ ಹೆಚ್ಚಿತ್ತು. ಖಂಡಿತಾ ನಾನು ಸಿಮ್ರನ್ ರೀತಿ ಇಲ್ಲ ತ್ರಿಷಾ ರೀತಿ ಇಲ್ಲ ಜನರು ನನ್ನನ್ನು ಒಪ್ಪಿಕೊಳ್ಳುವುದಿಲ್ಲ ನನಗೆ ಬ್ಯಾಡ್ ನ್ಯೂಸ್ ಸಿಗುತ್ತದೆ ಎಂದು ಭಾವಿಸಿದ್ದೆ. ಜಾರ್ಜಿಯಾಗೆ ತೆರಳಿದ ಮೇಲೆ ಟ್ವಿಟರ್ ಚೆಕ್ ಮಾಡಿದೆ ಜನರಿ ತುಂಬಾ ಖುಷಿಯಾತ್ತು ನನ್ನನ್ನು ಇಷ್ಟು ನ್ಯಾಚುರಲ್ ಅಗಿ ನೋಡಿ. ನನ್ನ ರಿಯಲ್ ತ್ವಚ್ಛೆಯಲ್ಲಿ ನಾನು ಕಾಣಿಸಿಕೊಂಡಿರುವ ಜನರಿಗೆ ಅದು ಇಷ್ಟವಾಗಿದೆ ಆಗ ನನ್ನ ಮೇಲೆ ನನಗೆ ನಂಬಿಕೆ ಹೆಚ್ಚಾಗಿತ್ತು. ಆಗ ನಾನು ಯೋಚನೆ ಮಾಡಿದೆ ನಾವು ಇದ್ದ ಹಾಗೆ ತೆರೆ ಮೇಲೆ ಬಂದರೆ ಖಂಡಿತಾ ಜನರು ಇಷ್ಟ ಪಡುತ್ತಾರೆ ಖುಷಿ ಪಡುತ್ತಾರೆಂದು ಎಂದು. ನನಗೆ ನನ್ನ ತ್ವಚ್ಛೆ ಇದ್ದ ಹಾಗೆ ಒಪ್ಪಿಕೊಂಡು ಸೂಕ್ತವಾಗಿರುವ ಕಥೆಯನ್ನು ತರುವ ನಿರ್ದೇಶಕರಿಗೆ ನಾನು ಋಣಿಯಾಗಿರುವೆ' ಎಂದು ಸಂದರ್ಶನವೊಂದರಲ್ಲಿ ಪಲ್ಲವಿ ಹೇಳಿದ್ದಾರೆ.
ಬೆಂಗ್ಳೂರಿನ ವೀಣಾ ಸ್ಟೋರ್‌ನಲ್ಲಿ ಇಡ್ಲಿ ತಿಂದ್ರಂತೆ ಸಾಯಿ ಪಲ್ಲವಿ!
ತುಂಡುಡುಗೆ ಹಾಕೋದನ್ನೆ ಬಿಟ್ಟ ನಟಿ ಸಾಯಿ ಪಲ್ಲವಿ:
ನಟಿ ಸಾಯಿ ಪಲ್ಲವಿ ಆನ್ ಸ್ಟ್ರೀನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಬಾಡಿಕಾನ್ ಡ್ರೆಸ್ ಹಾಕದೆ ಇರುವ ಬಗ್ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ನಟಿ ಸಾಯಿ ಪಲ್ಲವಿ ಬಣ್ಣದ ಲೋಕದಲ್ಲಿ ಸ್ಟಾರ್ ಆಗಿ ಬೆಳೆದರು ಸಹ ತನ್ನ ಡ್ರೆಸ್ ವಿಚಾರದಲ್ಲಿ ಬದಲಾಗಿಲ್ಲ. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಯಾಕೆ ಬಾಡಿಕಾನ್ ಡ್ರೆಸ್ ಹಾಕಲ್ಲ ಎಂದು ವಿರಿಸಿದ್ದಾರೆ. ಸಂದರ್ಶನದಲ್ಲಿ ವೊಂದರಲ್ಲಿ ಮಾತನಾಡಿದ ನಟಿ ಸಾಯಿ ಪಲ್ಲವಿ, 'ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದೇನೆ. ತಂದೆ ಕೇಂದ್ರ ಸರ್ಕಾರಿ ಉದ್ಯೋಗಿ. ಒಬ್ಬಲು ತಂಗಿ ಇದ್ದಾಳೆ. ಅಕ್ಕ-ತಂಗಿ ಇಬ್ಬರು ಮನೆಯಲ್ಲಿ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತೇವೆ. ಆದರೆ ಆಡುವಾಗ ಆರಾಮದಾಯಿಕ ಬಟ್ಟೆ ಧರಿಸುತ್ತೇವೆ.ಚಿತ್ರರಂಗಕ್ಕೆ ಬಂದ ನಂತರ ಒಂದು ಘಟನೆ ನಾನು ಸಿನಿಮಾಗಳಲ್ಲಿ ತುಂಡುಡುಗೆ ಧರಿಸಲ್ಲ ಎಂದು ನಿರ್ಧರಿಸಿದೆ. ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಾರ್ಜಿಯಾಗೆ ಹೋದಾಗ ನಾನು ಅಲ್ಲಿ ಟ್ಯಾಂಗೊ ನೃತ್ಯ ಕಲಿತೆ. ಟ್ಯಾಂಗೋ ನೃತ್ಯವನ್ನು ಕಲಿಯಲು ವಿಶೇಷ ವೇಷಭೂಣಗಳನ್ನು ಧರಿಸಬೇಕು. ನಾನು ನನ್ನ ಪೋಷಕರಿಗೆ ಅದನ್ನು ಹೇಳಿದೆ. ಅವರ ಅನುಮತಿಯೊಂದಿಗೆ ವೇಷಭೂಷಣ ಧರಿಸಿ ಡಾನ್ಸ್ ಮಾಡಿದೆ.ಕೆಲವು ತಿಂಗಳ ನಂತರ ನಾನು ಪ್ರೇಮ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕಕ್ಕಿತು. ಚಿತ್ರ ಬಿಡುಗಡೆಯಾದ ಬಳಿಕ ನನ್ನ ಟ್ಯಾಂಗೋ ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆ ವಿಡಿಯೋಗೆ ನೆಟ್ಟಿಗರು ಮಾಡಿದ ಕಾಮೆಂಟ್ ನನಗೆ ತುಂಬಾ ಬೇಸರ ಮೂಡಿಸಿತ್ತು. ಆಗ ನಾನು ಸಿನಿಮಾಗಳಲ್ಲಿ ಚಿಕ್ಕ ಬಟ್ಟೆಗಳನ್ನು ಧರಿಸಬಾರದು ಎಂದು ನಿರ್ಧರಿಸಿದೆ' ಎಂದಿದ್ದಾರೆ.
ಗಾಸಿಪ್ ಮಾಡೋರಿಗೆ ಕಾಲು ತೋರಿಸಿದ್ರಾ ಸಾಯಿ ಪಲ್ಲವಿ? ಫೋಟೋ ವೈರಲ್