ಐಶ್ವರ್ಯ ರೈನ ಮದುವೆ ಆಗಿದ್ದಕ್ಕೆ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಯ್ತು: ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್

By Vaishnavi Chandrashekar  |  First Published Feb 5, 2023, 12:12 PM IST

47ರ ವಸಂತಕ್ಕೆ ಕಾಲಿಟ್ಟ ಅಭಿಷೇಕ್ ಬಚ್ಚನ್. ಪತ್ನಿ ಐಶ್ವರ್ಯ ರೈಯಿಂದ ಪಡೆದ ಕಾನ್ಫಿಡೆನ್ಸ್ ಬಗ್ಗೆ ಹಂಚಿಕೊಂಡ ನಟ. ಐಶ್ವರ್ಯ ಎಂಟ್ರಿ ಕೊಟ್ಟ ಮೇಲೆ ಜೀವನ ಹೇಗೆ ಬದಲಾಯಿತ್ತು ಗೊತ್ತಾ?


ಬಾಲಿವುಡ್‌ ಬಿಗ್ ಬಿ ಅಮಿತಾಭ್ ಬಚ್ಚನ್‌ ಮತ್ತು ಜಯಾ ಬಚ್ಚನ್‌ ಪುತ್ರ ಅಭಿಷೇಕ್‌ ಬಚ್ಚನ್ ಫಬ್ರವರಿ 5ರಂದು 47ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ವಿಶ್ವ ಸುಂದರಿ ಐಶ್ವರ್ಯ ರೈ 2007 ಪ್ರೇಮಿಗಳ ದಿನಾಚರಣೆ ದಿನ ನಿಶ್ಚಿತಾರ್ಥ ಮಾಡಿಕೊಂಡರು, 2007 ಏಪ್ರಿಲ್‌ನಲ್ಲಿ ಮದುವೆ ಮಾಡಿಕೊಂಡರು. ಐಶ್ವರ್ಯ ರೈ ಪ್ರವೇಶದಿಂದ ತಮ್ಮ ಜೀವನ ಹೇಗೆ ಬದಲಾಗಿತ್ತು ಎಂದು ಈ ಹಿಂದೆ ನಡೆದ ಸಂದರ್ಶನದಲ್ಲಿ ಅಭಿ ಹೇಳಿದ್ದರು, ಸಾಮಾಜಿಕ ಜಾಲತಾಣದಲ್ಲಿ ಈ ಸಂದರ್ಶನ ಮತ್ತೊಮ್ಮೆ ವೈರಲ್ ಆಗುತ್ತಿದೆ. 

2007ರಲ್ಲಿ ಗುರು ಸಿನಿಮಾ ಪ್ರಚಾರ ಮಾಡುವ ವೇಳೆ ನ್ಯೂಯಾರ್ಕ್‌ನಲ್ಲಿ ಅಭಿಷೇನ್‌ ಬಚ್ಚನ್ ಐಶ್ವರ್ಯ ರೈಗೆ ಪ್ರಪೋಸ್ ಮಾಡುತ್ತಾರೆ. 'ಉತ್ತಮ ನಡತೆಯ, ಧೈರ್ಯಶಾಲಿ ಹುಡುಗ ಮತ್ತು ಹೊಳೆಯುವ ರಕ್ಷಾಕವಚ' ಎಂದು ಪತಿ ಬಗ್ಗೆ ಆಗಾಗ ಐಶ್ವರ್ಯ ಹೊಗಳುತ್ತಾರೆ. ಇಬ್ಬರು ಮದುವೆ ಮುನ್ನ ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೆ ಮದುವೆ ನಂತರ 2010ರಲ್ಲಿ ಮಣಿ ರತ್ನಂ ನಿರ್ದೇಶನ ಮಾಡಿರುವ ರಾವಣ್ ಸಿನಿಮಾದಲ್ಲಿ ನಟಿಸಿದ್ದರು ಅಷ್ಟೆ. ಇವರಿಗೆ ಆರಾಧ್ಯಾ ಎನ್ನುವ ಮುದ್ದಾದ ಮಗಳಿದ್ದಾಳೆ. ಈ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಾರೆ. 

Tap to resize

Latest Videos

ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಾಡೆಲಿಂಗ್‌ ದಿನಗಳ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ

' ಐಶ್ವರ್ಯ ರೈ ಮದುವೆಯಾಗಿ ನನ್ನ ಬಾಳಿಗೆ ಬಂದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಾಗಿತ್ತು. ಈ ವಿಚಾರದಲ್ಲಿ ಗಂಡಸರು ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಅಂದುಕೊಂಡಿರುವೆ.. ನಮ್ಮ ಫ್ಯಾಮಿಲಿಯ ಪುಟ್ಟ ಹುಡುಗ ನಾನು. ನನ್ನ ಸಹೋದರಿ ಹಲವು ವರ್ಷಗಳ ಹಿಂದೆ ಮದುವೆಯಾದಳು ಆದರೂ ಆಕೆ ನನ್ನನ್ನು ತುಂಬಾ ಪ್ರೋಟೆಕ್ಟ್‌ ಮಾಡುತ್ತಾಳೆ. ನಾನು ಯಾವ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ ನೆಮ್ಮದಿಯಾಗಿ ಇದ್ದೆ. ಮದುವೆ ಆದ ಮೇಲೆ ಜೀವನ ಬದಲಾಗಿತ್ತು ಆಟೋಮ್ಯಾಟಿಕ್ ಆಗಿ ನನ್ನಲ್ಲಿ ಜವಾಬ್ದಾರಿ ಹೆಚ್ಚಾಗಿತ್ತು. ಆಕೆನ್ನು ನಾನು ಪ್ರೋಟೆಕ್ಟ್‌ ಮಾಡಬೇಕು ಹೆಚ್ಚಿಗೆ ಕೇರ್ ಮಾಡಲು ಮುಂದಾದೆ' ಎಂದು ವೋಗ್ ಸಂದರ್ಶನದಲ್ಲಿ ಅಭಿ ಮಾತನಾಡಿದ್ದರು. 

ಪ್ರತಿಯೊಬ್ಬರು ಮದುವೆ ಅಂದ್ರೆ ಕಾಂಪ್ರಮೈಸ್ ಎನ್ನುವ ಟ್ಯಾಗ್ ಕೊಡುತ್ತಾರೆ ಆದರೆ ಅಭಿಷೇಕ್‌ ಮದುವೆ ಜರ್ನಿಯನ್ನು ವಿಭಿನ್ನವಾಗಿ ವಿವರಿಸುತ್ತಾರೆ. 'ಐಶ್ವರ್ಯ ರೈನ ಮದುವೆ ಆದ ಮೇಲೆ ಜೀವನದಲ್ಲಿ ಅತಿ ಹೆಚ್ಚು ಖುಷಿ ನೋಡಿರುವೆ ಆಕೆ ಮುಖದಲ್ಲಿ ಖುಷಿ ಕಂಡೆ ಅದೇ ನನಗೆ ಮುಖ್ಯ' ಎಂದಿದ್ದರು. 

ಸೊಸೆ ಹೊಗಳಿದ ಬಿಗ್ ಬಿ:

ಐಶ್ವರ್ಯಾಲೇಟ್ ಪ್ರೆಗ್ನೆನ್ಸಿ ಆದ್ರೂ ನಾರ್ಮಲ್ ಡೆಲಿವರಿಯೇ ಬೇಕು ಎಂದು ಹಠ ಹಿಡಿದಿದ್ದ ಐಶ್, ಸೊಸೆ ಗಟ್ಟಿಗಿತ್ತಿ ಅಂದ ಬಿಗ್‌ಬಿ ರೈ ಬಚ್ಚನ್ ಮೊನ್ನೆ ತಾನೇ ನಲವತ್ತೊಂಭತ್ತಕ್ಕೆ ಕಾಲಿಟ್ಟರು. ಐಶ್ವರ್ಯಾ ರೈ ಗರ್ಭಿಣಿಯಾದದ್ದು ಮೂವತ್ತೆಂಟನೇ ವಯಸ್ಸಿಗೆ. ಮೊದಲ ಮಗುವಿಗೆ ಇದು ವಿಳಂಬ ಗರ್ಭಧಾರಣೆ. ಸಾಮಾನ್ಯವಾಗಿ ಇದನ್ನು ರಿಸ್ಕ್ ಪ್ರೆಗ್ನೆನ್ಸಿ ಅಂತ ವೈದ್ಯರು ನೋಡ್ತಾರೆ. ಐಶ್ವರ್ಯಾ ರೈ ಅವರಿಗೂ ಅದನ್ನೇ ಹೇಳಿದ್ದರು. ಆದರೆ ಐಶ್ ತನಗೆ ನಾರ್ಮಲ್ ಡೆಲಿವರಿಯೇ ಆಗಬೇಕು ಅಂತ ಪಟ್ಟು ಹಿಡಿದಿದ್ದರು. ಸುಮಾರು ಮೂರ್ನಾಲ್ಕು ಗಂಟೆಗೂ ಹೆಚ್ಚು ಅತಿಯಾದ ಹೆರಿಗೆ ನೋವು ತಿಂದಿದ್ದರು. ಇದನ್ನೆಲ್ಲ ನೋಡುತ್ತಿದ್ದ ಇವರ ಅಮಿತಾಬ್, ಜಯಾ, ಅಭಿಷೇಕ್ ಸಿ ಸೆಕ್ಷನ್‌ ಮಾಡಬಹುದಲ್ವಾ, ಇಷ್ಟೆಲ್ಲ ನೋವು ತಿನ್ನೋದ್ಯಾಕೆ ಅಂತ ಪದೇ ಪದೇ ಹೇಳಿದರೂ ಐಶ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಷ್ಟು ಹೊತ್ತು ನೋವು ತಿಂದರೂ, ಸಾಕಷ್ಟು ರಿಸ್ಕ್ ಫ್ಯಾಕ್ಟರ್‌ ಇದ್ದರೂ ಈಕೆ ನಾರ್ಮಲ್ ಡೆಲಿವರಿಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಎಷ್ಟು ಸಮಯ ಬೇಕಾದರೂ ಆಗಲಿ, ಎಷ್ಟೇ ನೋವು ಬೇಕಿದ್ದರೂ ಆಗಲಿ ತಾನು ನಾರ್ಮಲ್ ಡೆಲಿವರಿಯನ್ನೇ ಆಯ್ಕೆ ಮಾಡ್ತೀನಿ ಅಂತ ಐಶ್ ಗಟ್ಟಿಯಾಗಿ ಹೇಳ್ತಿದ್ರಂತೆ. ಯಾವ ಪೇನ್ ಕಿಲ್ಲರ್ ತಿನ್ನಲೂ ನಿರಾಕರಿಸಿದ್ದಾರೆ. ಸೊಸೆಯ ಈ ಧೈರ್ಯವನ್ನು ಅಮಿತಾಬ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

click me!