ಈ ಒಂದು ಘಟನೆಯಿಂದ ತುಂಡುಡುಗೆ ಹಾಕೋದನ್ನೆ ಬಿಟ್ಟ ನಟಿ ಸಾಯಿ ಪಲ್ಲವಿ

Published : Jun 13, 2022, 02:42 PM IST
 ಈ ಒಂದು ಘಟನೆಯಿಂದ ತುಂಡುಡುಗೆ ಹಾಕೋದನ್ನೆ ಬಿಟ್ಟ ನಟಿ ಸಾಯಿ ಪಲ್ಲವಿ

ಸಾರಾಂಶ

ನಟಿ ಸಾಯಿ ಪಲ್ಲವಿ ಆನ್ ಸ್ಟ್ರೀನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಬಾಡಿಕಾನ್ ಡ್ರೆಸ್ ಹಾಕದೆ ಇರುವ ಬಗ್ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ನಟಿ ಸಾಯಿ ಪಲ್ಲವಿ ಬಣ್ಣದ ಲೋಕದಲ್ಲಿ ಸ್ಟಾರ್ ಆಗಿ ಬೆಳೆದರು ಸಹ ತನ್ನ ಡ್ರೆಸ್ ವಿಚಾರದಲ್ಲಿ ಬದಲಾಗಿಲ್ಲ. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಯಾಕೆ ಬಾಡಿಕಾನ್ ಡ್ರೆಸ್ ಹಾಕಲ್ಲ ಎಂದು ವಿರಿಸಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ(Sai Pallavi) ಸದ್ಯ ವಿರಾಟ ಪರ್ವಂ(Virata Parvam) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆ ನಟ ರಾಣ ದಗ್ಗುಬಾಟಿ(Rana Daggubati) ಕೂಡ ನಟಿಸಿದ್ದಾರೆ. ಸಿನಿಮಾತಂಡ ಸದ್ಯ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ನಟಿ ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಭುತ ನಟನೆ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಸಾಯಿ ಪಲ್ಲವಿ ಅವರನ್ನು ಲೇಡಿ ಪವರ್ ಸ್ಟಾರ್ ಎಂದು ಕರೆಯುತ್ತಾರೆ. ಸಾಯಿ ಪಲ್ಲವಿ ಸಿನಿಮಾದಲ್ಲಿ ಯಾವುದೇ ಬಾಡಿಕಾನ್ ಬಟ್ಟೆ ಧರಿಸದೇ, ತುಂಡುಡುಗೆ ಹಾಕದೆ ಸ್ಟಾರ್ ಆಗಿ ಬೆಳೆದವರು, ಅತೀ ದೊಡ್ಡ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳನ್ನು ಗಳಿಸಿರುವುದು ತನ್ನ ಅದ್ಭುತ ಅಭಿನಯದ ಮೂಲಕ. 

ನಟಿ ಸಾಯಿ ಪಲ್ಲವಿ ಆನ್ ಸ್ಟ್ರೀನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಬಾಡಿಕಾನ್ ಡ್ರೆಸ್ ಹಾಕದೆ ಇರುವ ಬಗ್ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ನಟಿ ಸಾಯಿ ಪಲ್ಲವಿ ಬಣ್ಣದ ಲೋಕದಲ್ಲಿ ಸ್ಟಾರ್ ಆಗಿ ಬೆಳೆದರು ಸಹ ತನ್ನ ಡ್ರೆಸ್ ವಿಚಾರದಲ್ಲಿ ಬದಲಾಗಿಲ್ಲ. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಯಾಕೆ ಬಾಡಿಕಾನ್ ಡ್ರೆಸ್ ಹಾಕಲ್ಲ ಎಂದು ವಿರಿಸಿದ್ದಾರೆ. 

ಸಂದರ್ಶನದಲ್ಲಿ ವೊಂದರಲ್ಲಿ ಮಾತನಾಡಿದ ನಟಿ ಸಾಯಿ ಪಲ್ಲವಿ, 'ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದೇನೆ. ತಂದೆ ಕೇಂದ್ರ ಸರ್ಕಾರಿ ಉದ್ಯೋಗಿ. ಒಬ್ಬಲು ತಂಗಿ ಇದ್ದಾಳೆ. ಅಕ್ಕ-ತಂಗಿ ಇಬ್ಬರು ಮನೆಯಲ್ಲಿ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತೇವೆ. ಆದರೆ ಆಡುವಾಗ ಆರಾಮದಾಯಿಕ ಬಟ್ಟೆ ಧರಿಸುತ್ತೇವೆ' ಎಂದಿದ್ದಾರೆ. 

ಚಾರ್ಲಿಗಾಗಿ ಬೆಂಗಳೂರಿಗೆ ಬಂದ ಸಾಯಿ ಪಲ್ಲವಿ; ನಾಯಿಯನ್ನು ಮುದ್ದಾಡಿದ ನಟಿ

'ಚಿತ್ರರಂಗಕ್ಕೆ ಬಂದ ನಂತರ ಒಂದು ಘಟನೆ ನಾನು ಸಿನಿಮಾಗಳಲ್ಲಿ ತುಂಡುಡುಗೆ ಧರಿಸಲ್ಲ ಎಂದು ನಿರ್ಧರಿಸಿದೆ. ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಾರ್ಜಿಯಾಗೆ ಹೋದಾಗ ನಾನು ಅಲ್ಲಿ ಟ್ಯಾಂಗೊ ನೃತ್ಯ ಕಲಿತೆ. ಟ್ಯಾಂಗೋ ನೃತ್ಯವನ್ನು ಕಲಿಯಲು ವಿಶೇಷ ವೇಷಭೂಣಗಳನ್ನು ಧರಿಸಬೇಕು. ನಾನು ನನ್ನ ಪೋಷಕರಿಗೆ ಅದನ್ನು ಹೇಳಿದೆ. ಅವರ ಅನುಮತಿಯೊಂದಿಗೆ ವೇಷಭೂಷಣ ಧರಿಸಿ ಡಾನ್ಸ್ ಮಾಡಿದೆ' ಎಂದರು.  

ಮುಖ ಮುಚ್ಚಿಕೊಂಡು ಬಂದು ಮಹೇಶ್ ಬಾಬು ಸಿನಿಮಾ ವೀಕ್ಷಿಸಿದ ನಟಿ ಸಾಯಿ ಪಲ್ಲವಿ; ಫೋಟೋ ವೈರಲ್

'ಕೆಲವು ತಿಂಗಳ ನಂತರ ನಾನು ಪ್ರೇಮ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕಕ್ಕಿತು. ಚಿತ್ರ ಬಿಡುಗಡೆಯಾದ ಬಳಿಕ ನನ್ನ ಟ್ಯಾಂಗೋ ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆ ವಿಡಿಯೋಗೆ ನೆಟ್ಟಿಗರು ಮಾಡಿದ ಕಾಮೆಂಟ್ ನನಗೆ ತುಂಬಾ ಬೇಸರ ಮೂಡಿಸಿತ್ತು. ಆಗ ನಾನು ಸಿನಿಮಾಗಳಲ್ಲಿ ಚಿಕ್ಕ ಬಟ್ಟೆಗಳನ್ನು ಧರಿಸಬಾರದು ಎಂದು ನಿರ್ಧರಿಸಿದೆ' ಎಂದು ತುಂಡುಡುಗೆ ಹಾದಕೆ ಇರಲು ಕಾರಣ ರಿವೀಲ್ ಮಾಡಿದ್ದಾರೆ.  

ವಿರಾಟ ಪರ್ವಂ ಮೂಲಕ ಅಭಿಮಾನಿಗಳ ಗಮನ ಸಳೆದಿರುವ ನಟಿ ಸಾಯಿ ಪಲ್ಲವಿ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜೂನ್ 17ರಂದು ತೆರೆಗೆ ಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?