ಸಡಕ್‌ 2 ತಂಡಕ್ಕೆ ಮತ್ತೊಂದು ಹಿನ್ನಡೆ: 10ರಲ್ಲಿ 1.1 ರೇಟಿಂಗ್..!

Suvarna News   | Asianet News
Published : Aug 29, 2020, 10:36 AM ISTUpdated : Aug 29, 2020, 10:41 AM IST
ಸಡಕ್‌ 2 ತಂಡಕ್ಕೆ ಮತ್ತೊಂದು ಹಿನ್ನಡೆ: 10ರಲ್ಲಿ 1.1 ರೇಟಿಂಗ್..!

ಸಾರಾಂಶ

ಸಡಕ್ 2 ಸಿನಿಮಾ ಟ್ರೈಲರ್ ಡಿಸ್‌ಲೈಕ್ ಪಡೆದು ಸುದ್ದಿಯಾದಂತೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಸಡಕ್ 2 ಇಂಟರ್‌ನೆಟ್‌ನಲ್ಲಿ ಅತ್ಯಂತ ಕನಿಷ್ಠ ರೇಟಿಂಗ್ ಪಡೆದ ಸಿನಿಮಾ.

ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಸಂಜಯ್ ದತ್‌ ಸೇರಿ ಪ್ರಮುಖರು ನಟಿಸಿದ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ನಿರ್ದೇಶನದ ಸಡಕ್ 2  ಸಿನಿಮಾ ಇಂಟರ್‌ನೆಟ್ ಡಾಟಾಬೇಸ್‌ ಡಾಟಾದಲ್ಲಿ ಕನಿಷ್ಠ ರೇಟೆಡ್ ಮೂವಿಯಾಗಿ ಮೂಡಿ ಬಂದಿದೆ.

ಸಡಕ್ 2 ಸಿನಿಮಾ ಟ್ರೈಲರ್ ಡಿಸ್‌ಲೈಕ್ ಪಡೆದು ಸುದ್ದಿಯಾದಂತೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಸಡಕ್ 2 ಇಂಟರ್‌ನೆಟ್‌ನಲ್ಲಿ ಅತ್ಯಂತ ಕನಿಷ್ಠ ರೇಟಿಂಗ್ ಪಡೆದ ಸಿನಿಮಾ. ಟ್ರೈಲರ್‌ಗೆ ಭಾರೀ ಡಿಸ್‌ಲೈಕ್ ಬಂದ ಬೆನ್ನಲ್ಲೇ ಚಿತ್ರತಂಡಕ್ಕೆ ಮೊತ್ತೊಂದು ಹಿನ್ನಡೆಯಾಗಿದೆ. ಸಡಕ್ 2 ಸಿನಿಮಾಗೆ ಬಂದ ರೇಟಿಂಗ್ 1.1 IMDb. 

ಮಹೇಶ್ ಭಟ್, ಆಲಿಯಾ ಚಿತ್ರ ಸಡಕ್-2ಗೆ ವಿರೋಧ, ಟ್ರೇಲರ್‌ಗೆ ನೆಟ್ಟಿಗರ ಡಿಸ್‌ಲೈಕ್

ಸಿನಿಮಾಗಳಿಗೆ ರ್ಯಾಂಕ್ ನೀಡುವ ಇಂಟರ್‌ನೆಟ್ ಮೂವೀಸ್ ಡಾಟಾ ಬೇಸ್‌ನಲ್ಲಿ ಸಿನಿಮಾಗೆ ಭಾರೀ ಕಡಿಮೆ ರೇಟಿಂಗ್ ಬಂದಿದೆ.  ಐಎಂಡಿಬಿ ನೀಡುವ 10ರ ರೇಟಿಂಗ್‌ನಲ್ಲಿ 1.1 ಅಂಕ ಪಡೆದಿದೆ. ಈ ಮೂಲಕ ಅತ್ಯಂತ ಕಡಿಮೆ ರೇಟಿಂಗ್ ಪಡೆದ ಮೂವಿಯಾಗಿದೆ ಸಡಕ್2.

ಅಜಯ್ ದೇವಗನ್ ನಟನೆಯ ಹಿಮ್ಮತ್‌ವಾಲಾ(1.7), ರಾಮ್ ಗೋಪಾಲ್ ವರ್ಮಾ ಅವರ ಫೈರ್(1.7), ಅಭಿಷೇಕ್ ಬಚ್ಚನ್‌ನ ದ ಲೆಜೆಂಡ್ ಆಫ್ ಡ್ರೋಣ(2) ಅತ್ಯಂತ ಕಡಿಮೆ ರೇಟಿಂಗ್ ಬಾಲಿವುಡ್ ಸಿನಿಮಗಾಳು. ಡಿಸ್ನೀ+ಹಾಟ್‌ಸ್ಟಾರ್‌ನಲ್ಲಿ ಶುಕ್ರವಾರ ಸಂಜೆ 7.30ಕ್ಕೆ ರಿಲೀಸ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ಬೋರಿಂಗ್ ಮೂವಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ಅಗಸ್ಟ್ 12ಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. 70 ಮಿಲಿಯನ್ ವ್ಯೂಸ್ ಪಡೆದ ಟ್ರೈಲರ್‌ಗೆ ಮಿಲಿಯನ್‌ನಷ್ಟು ಕಮೆಂಟ್ಸ್ ಬಂದಿತ್ತು. ಇದು ಜಗತ್ತಿನಲ್ಲಿಯೇ ಎತಿ ಹೆಚ್ಚು ಡಿಸ್‌ಲೈಕ್ ಪಡೆದ ಎರಡನೇ ಟ್ರೈಲರ್ ಆಗಿದೆ. ಸದ್ಯ ಟ್ರೈಲರ್ 12 ಮಿಲಿಯನ್ ಡಿಸ್‌ಲೈಕ್ ಪಡೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?