ಚಿಕಿತ್ಸೆಗಾಗಿ ಅಲ್ಲ ಈ ಕಾರಣಕ್ಕೆ ವಿದೇಶಕ್ಕೆ ಹಾರಿದ ನಟಿ ಸಮಂತಾ

By Suvarna NewsFirst Published Sep 24, 2022, 3:45 PM IST
Highlights

ಸಮಂತಾ ವಿದೇಶಕ್ಕೆ ಹೋಗುತ್ತಿರುವುದು ನಿಜ ಆದರೆ ಚಿಕಿತ್ಸೆ ಪಡೆಯಲು ಅಲ್ಲ ಎಂದು ಅವರ ಆಪ್ತ ಮೂಲಗಳು ಬಹಿರಂಗ ಪಡಿಸಿವೆ. ಸಮಂತಾ ಮತ್ತಷ್ಟು ಫಿಟ್ ಆಗಲು ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದ ಖ್ಯಾತ ನಟಿ, ಸೆನ್ಸೇಷನ್ ಸ್ಟಾರ್ ಸಮಂತಾ ಅನಾರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ವೈರಲ್ ಆಗಿದೆ. ಸೌತ್ ಸುಂದರಿ, ನಾಗ ಚೈತನ್ಯ ಮಾಜಿ ಪತ್ನಿ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಆನಾರೋಗ್ಯದ ಸುದ್ದಿ ವೈರಲ್ ಆದ ಬೆನ್ನಲ್ಲೇ ಸಮಂತಾ ಕೂಡ ಸೈಲೆಂಟ್ ಆಗಿದ್ದಾರೆ. ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಕೂಡ ಶೇರ್ ಮಾಡಿಲ್ಲ. ಅನಾರೋಗ್ಯದ ಬಗ್ಗೆ ಸುದ್ದಿ ವೈರಲ್ ಆಗಿದ್ದರು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಮಂತಾ ಬಗ್ಗೆ ಮತ್ತೊಂದು ಅಪ್ ಡೇಟ್ ಹೊರಬಿದ್ದಿ. 

ಸಮಂತಾ ವಿದೇಶಕ್ಕೆ ಹೋಗುತ್ತಿರುವುದು ನಿಜ ಆದರೆ ಚಿಕಿತ್ಸೆ ಪಡೆಯಲು ಅಲ್ಲ ಎಂದು ಅವರ ಆಪ್ತ ಮೂಲಗಳು ಬಹಿರಂಗ ಪಡಿಸಿವೆ. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಹಾಗಾಗಿ ಚಿಕಿತ್ಸೆಗೆ ಯುಎಸ್‌ಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಮಂತಾ ವಿದೇಶಕ್ಕೆ ಹೋಗುತ್ತಿರುವುದು ಫಿಟ್ನೆಸ್ ಟ್ರೇನಿಂಗ್ ಗಾಗಿ ಎನ್ನಲಾಗಿದೆ. ಸಮಂತಾ ಮುಂದಿನ ಪ್ರಾಜೆಕ್ಟ್‌ಗಾಗಿ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ವಿದೇಶದಲ್ಲಿ ತಯಾರಿ ನಡೆಸಲು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ. 

ಹೌದು, ದಿ ಫ್ಯಾಮಿಲಿ ಮ್ಯಾನ್ 2 ಬಳಿಕ ಸಮಂತಾ ಮತ್ತೊಂದು ವೆಬ್ ಸೀರಿಸ್ ನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಿಟಾಡೆಲ್ ಎನ್ನುವ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಸೀರಿಸ್ ನ ಪಾತ್ರಕ್ಕಾಗಿ ಸಮಂತಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತಷ್ಟು ಫಿಟ್ ಆಗಬೇಕಿದೆ. ಹಾಗಾಗಿ ವಿದೇಶದಲ್ಲಿ ನುರಿತ ತಂತ್ರಜ್ಞರೊಂದಿಗೆ ತರಬೇತಿ ಪಡೆಯಲು ಸಮಂತಾ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿರುವ ನಟಿ ಸಮಂತಾ: ನಾಗಚೈತನ್ಯ ಮಾಜಿ ಪತ್ನಿಗೆ ಏನಾಗಿದೆ?

ಸಿಟಾಡೆಲ್ ವೆಬ್ ಸೀರಿಸ್ ಗೆ ದಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಸಿರೀಸ್ ಆಗಿದೆ. ಈಗಾಗಲೇ ಹಾಲಿವುಡ್ ನಲ್ಲಿ ಈ ಸೀರಿಸ್ ಮಾಡಿದ್ದು ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ದಿ ಗ್ರೇ ಮ್ಯಾನ್, ಅವೇಂಜರ್ ಎಂಡ್ ಗೇಮ್ ಖ್ಯಾತಿಯ ನಿರ್ದೇಶಕ ರುಸ್ಸೋ ಬ್ರದರ್ಸ್ಆಕ್ಷನ್ ಕಟ್ ಹೇಳಿದ್ದಾರೆ. ಅದೇ ಸಿಟಾಡೆಲ್ ಭಾರತದಲ್ಲೂ ಬರ್ತಿದೆ. ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಧವನ್ ನಾಯಕನಾಗಿ ಮಿಂಚುತ್ತಿದ್ದಾರೆ. ಸಿಟಾಡೆಲ್ ಗಾಗಿ ಸಮಂತಾ ಭರ್ಜರಿ ತಯಾರಿ ನಡೆಸುತ್ತಿರುವ ಕಾರಣ ವಿದೇಶಕ್ಕೆ ಹೋಗಿದ್ದಾರೆ, ಅನಾರೋಗ್ಯವೆಲ್ಲ ಸುಳ್ಳು ಎಂದು ಸಮಂತಾ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಬದುಕಲ್ಲಿ ನನಗ್ಯಾಕೆ ಇಷ್ಟು ಅನ್ಯಾಯ ಆಗ್ತಿದೆ?: ಸದ್ಗುರು ಜೊತೆ ಸಮಂತಾ ಬಿಚ್ಚುಮಾತು!

 ಸಮಂತಾ ಬಳಿ ಇರುವ ಸಿನಿಮಾಗಳು

ಸಮಂತಾ ಯಶೋಧ ಸಿನಿಮಾ ಜೊತೆಗೆ ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.    

click me!