ಐಶ್ವರ್ಯ ಪ್ರೀತಿಯಿಂದ ಅಪ್ಪಿಕೊಂಡ್ರೆ ಹೀಗೆ ಹೇಳೋದಾ ಅಮಿತಾಭ್​? ಕುಡಿದದ್ದು ಜಾಸ್ತಿಯಾಯ್ತು ಎಂದ ಟ್ರೋಲಿಗರು!

Published : Nov 02, 2024, 06:08 PM IST
ಐಶ್ವರ್ಯ ಪ್ರೀತಿಯಿಂದ ಅಪ್ಪಿಕೊಂಡ್ರೆ ಹೀಗೆ ಹೇಳೋದಾ ಅಮಿತಾಭ್​? ಕುಡಿದದ್ದು ಜಾಸ್ತಿಯಾಯ್ತು ಎಂದ ಟ್ರೋಲಿಗರು!

ಸಾರಾಂಶ

ಐಶ್ವರ್ಯ ರೈ ಪ್ರೀತಿಯಿಂದ ಮಾವ ಅಮಿತಾಭ್​ ಬಚ್ಚನ್​ರನ್ನು ಅಪ್ಪಿಕೊಂಡಾಗ ಅವರು ಹೇಳಿದ್ದೇನು ಕೇಳಿ! ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗ್ತಿದೆ.   

ಕೆಲ ತಿಂಗಳಿನಿಂದ  ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು. 

ಅಲ್ಲಿಂದ ಶುರುವಾಗಿರುವ ಐಶ್​-ಅಭಿಷೇಕ್​ ಬಚ್ಚನ್​ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್​ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್​ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್​ ಇಲ್ಲವೇ ಐಶ್ವರ್ಯ ಅದೂ ಇಲ್ಲದಿದ್ರೆ ಅಮಿತಾಭ್​ ಸೋಷಿಯಲ್​ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್​  ಹಾಕುವ ಮೂಲಕ ಇವರಿಬ್ಬರೂ ಡಿವೋರ್ಸ್​ ಪಡೆಯುತ್ತಾರೆ ಎಂಬಂತೆ ಹೇಳುತ್ತಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಲೇ, ದಂಪತಿ ಒಂದಾಗಿರುವ ಫೋಟೋ ಶೇರ್​ ಮಾಡಿಕೊಳ್ಳುತ್ತಾರೆ. ಕೆಲ ತಿಂಗಳಿನಿಂದ ಬಚ್ಚನ್​ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್​ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್​ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್​ ಕೂಡ ಆಗಿತ್ತು.

ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಆಗ್ಲೇ ವ್ಯಂಗವಾಡಿದ್ದ ನಿಮ್ರತ್​ ಕೌರ್​! ಹಳೆಯ ವಿಡಿಯೋ ವೈರಲ್

ಇದರ ನಡುವೆಯೇ, ಐಶ್ವರ್ಯ ರೈ ಮತ್ತು ಅಮಿತಾಭ್​ ಬಚ್ಚನ್​ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್​  ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಚ್ಚನ್​ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಇದೇ ವಿಡಿಯೋದಲ್ಲಿ ಅಮಿತಾಭ್​ ಆಗಲೇ ಸುಳಿವು ಕೊಟ್ಟಿದ್ದರು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಐಶ್ವರ್ಯ ರೈ, ಅಮಿತಾಭ್​ ಅವರನ್ನು ಪ್ರೀತಿಯಿಂದ ಬಂದು ಅಪ್ಪಿಕೊಂಡಿದ್ದಾರೆ. ಇವರು ದಿ ಬೆಸ್ಟ್​ ಎಂದು ಜೋರಾಗಿ ಕಿರುಚಿ ಹೇಳಿದ್ದಾರೆ.  ಆದರೆ ಇದು ಅಮಿತಾಭ್​ ಅವರಿಗೆ ಅಷ್ಟು ಸರಿ ಕಾಣಿಸಲಿಲ್ಲ. ಓವರ್​ ಆ್ಯಕ್ಟಿಂಗ್​ ರೀತಿ ಅನ್ನಿಸಿತೋ ಗೊತ್ತಿಲ್ಲ. ಪ್ಲೀಸ್​ ಆರಾಧ್ಯ ರೀತಿ ಬಿಹೇವ್​ ಮಾಡಬೇಡ ಎಂದು ಎಲ್ಲರ ಎದುರೇ ಹೇಳಿದ್ದಾರೆ. ಇದರ ಹೊರತಾಗಿಯೂ ಐಶ್ವರ್ಯ ಏನೂ ಆಗಿಲ್ಲ ಎನ್ನುವಂತೆ ಅಮಿತಾಭ್​ ಅವರನ್ನು ಮುದ್ದು ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ, ಕೆಲವರು ಐಶ್ವರ್ಯ ರೈ ಓವರ್​ ಆ್ಯಕ್ಟ್​ ಮಾಡಿದ್ದಾಳೆ ಎಂದರೆ ಐಶ್​ ಫ್ಯಾನ್ಸ್​ ಮಾತ್ರ ಅಷ್ಟು ಪ್ರೀತಿ ಮಾಡ್ತಿರೋ ಸೊಸೆಗೆ ಅಮಿತಾಭ್​ ಹೀಗೆ ಮಾಡಬಾರದಿತ್ತು ಎಂದು ಗರಂ ಆಗಿದ್ದಾರೆ. ಮತ್ತೆ ಕೆಲವರು ಐಶ್ವರ್ಯ ಹೆಚ್ಚು ಕುಡಿದಿದ್ದಳು ಎನ್ನಿಸತ್ತೆ ಎಂದು ಟ್ರೋಲ್​ ಮಾಡಿದ್ದಾರೆ. 

ಇವರ ನಡುವೆ ಏನು ನಡೆಯುತ್ತಿದೆಯೋ ಸದ್ಯ ಗುಟ್ಟಾಗಿಯೇ ಇದೆ.  ಪತಿ-ಪತ್ನಿ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಇದೀಗ ಹೊಸ ಸುದ್ದಿ ಎಂದರೆ, ಇವರ ಸಂಬಂಧ ಹಳಸಲು ಕಾರಣ ನಟಿ ನಿಮ್ರತ್​ ಕೌರ್​ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ದಸ್ವಿ ಚಿತ್ರದ ಶೂಟಿಂಗ್​ ಸಮಯದಲ್ಲಿ ಇಬ್ಬರ ನಡುವೆ ಲವ್ ಶುರುವಾಗಿದೆ ಎಂದು  ಹೇಳಲಾಗುತ್ತಿದೆ. ಐಶ್​ ಮತ್ತು ಅಭಿ ದಾಂಪತ್ಯದ ಬಿರುಕಿಗೆ ಇವರೇ  ಕಾರಣ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೂ  ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ, ಅಥವಾ ಆರೋಪ ಹೊತ್ತಿರುವ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ.  ನಿಮ್ರತ್ ಕೌರ್ ಇವರ ಜೀವನದಲ್ಲಿ ಹುಳಿ ಹಿಂಡಿದ್ದು ನಿಜಾ ಎಂದು ಅಭಿಪ್ರಾಯ ವ್ಯಕ್ತವಾಗ್ತಿರೋ ಬೆನ್ನಲ್ಲೇ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ.

ಲವ್​ ಸಲ್ಮಾನ್​ ಮೇಲೆ, ಮದ್ವೆಯಾದದ್ದು ಅಭಿಷೇಕ್​ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯಾಗುತ್ತಿದ್ದಂತೆಯೇ ರಶ್ಮಿಕಾ ಜತೆ ಹುಟ್ಟೂರಿಗೆ ಭೇಟಿಕೊಟ್ಟ ವಿಜಯ್ ದೇವರಕೊಂಡ! ಭರ್ಜರಿ ಮಟನ್ ಊಟ ಹಾಕಿಸಿದ ಸೆಲಿಬ್ರಿಟಿ ಜೋಡಿ
ವಿಜ್ಜು ತೆಕ್ಕೆಯೊಳಗೆ ನಾನು, ಆ ರಾತ್ರಿಯ ಗುಂಗಿನಿಂದ ಇನ್ನೂ ಹೊರ ಬರಲಾಗಿಲ್ಲ: Rashmika Mandanna